Ad Widget .

ಬೆಂಗಳೂರಿನಲ್ಲಿ ತಡರಾತ್ರಿ ನಡೆಯಿತು ಅರೆನಗ್ನ ರೇವ್ ಪಾರ್ಟಿ| ಡ್ರಗ್ಸ್ ನಶೆಯಲ್ಲಿದ್ದ ಹಲವರು ಪೊಲೀಸ್ ವಶಕ್ಕೆ|

Ad Widget . Ad Widget .

ಬೆಂಗಳೂರು: ಆನೇಕಲ್ ಸಮೀಪ ಮಧ್ಯರಾತ್ರಿ ರೇವ್ ಪಾರ್ಟಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಡ್ರಗ್ಸ್ ನಶೆಯಲ್ಲಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Ad Widget . Ad Widget .

ರೆಸಾರ್ಟ್ ಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ. ಉದ್ಯಮಿಗಳ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಡಿಜೆ. ಕಲರ್ ಫುಲ್ ಲೈಟಿಂಗ್, ಡ್ರಗ್ಸ್ ನೊಂದಿಗೆ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ.

ಪೊಲೀಸ್ ದಾಳಿಯ ವೇಳೆ ಅಲ್ಲಿದ್ದವರು ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆನೇಕಲ್ ಸಮೀಪದ ರೆಸಾರ್ಟ್ ನಲ್ಲಿ 30 -40 ಜನರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಡ್ರಗ್ಸ್ ನಶೆಯಲ್ಲಿ ಯುವಕ-ಯುವತಿಯರು ತೇಲಾಡಿದ್ದು, ಪಾರ್ಟಿಯ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.

Leave a Comment

Your email address will not be published. Required fields are marked *