Ad Widget .

ಮಹಾತ್ಮ ಗಾಂಧಿಯನ್ನೇ‌ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡ್ತೇವಾ?, ರಾಜ್ಯ ಸರ್ಕಾರದ್ದು ತಾಲಿಬಾನ್ ಸಂಸ್ಕೃತಿಗಿಂತ ಕೀಳು- ಕಿಡಿಕಾರಿದ ಹಿಂದೂ ಮಹಾ ಸಭಾ

Ad Widget . Ad Widget .

ಮಂಗಳೂರು: ಹಿಂದೂ ವಿರೋಧಿಯಾಗಿದ್ದರೂ ಎಂಬ ಕಾರಣಕ್ಕೆ ಗಾಂಧೀಜಿಯನ್ನೆ ಬಿಟ್ಟಿಲ್ಲ , ಇನ್ನು ನಿಮ್ಮನ್ನು ಬಿಡುತ್ತೇವೆಯೇ? ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Ad Widget . Ad Widget .

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದೇವಸ್ಥಾನ ಒಡೆದ ಬಿಜೆಪಿ ಸರಕಾರ ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದೆ. ಹಿಂದೂ ವಿರೋಧಿಯಾಗಿದ್ದರೂ ಎಂಬ ಕಾರಣಕ್ಕೆ ಗಾಂಧೀಜಿಯನ್ನೆ ಬಿಟ್ಟಿಲ್ಲ ನಾವು. ಅವರನ್ನು ಹತ್ಯೆ ಮಾಡಲಾಯಿತು. ಇನ್ನು ನಿಮ್ಮನ್ನು ಬಿಡುತ್ತೇವಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರಕಾರಕ್ಕೆ ನೈತಿಕತೆ ಇಲ್ಲ. ಇದೊಂದು ನಾಚಿಕೆಗೇಡಿನ ಸರಕಾರವಾಗಿದೆ. ಭಾರತೀಯ ಜನತಾ ಪಕ್ಷ ಬೆನ್ನು ಮೂಳೆ ಇಲ್ಲದ ಪಕ್ಷ . ಇವರು ಹಿಂದೂಗಳ ಮತ ನಮಗೆ ನಿಶ್ಚಿತ ಎಂದು ತಿಳಿದುಕೊಂಡು , ಮುಸ್ಲಿಂ , ಕ್ರಿಶ್ಚಿಯನ್ ಮತಗಳ ಮೇಲೆ ಕಣ್ಣಿಟ್ಟು ದೇವಸ್ಥಾನ ಒಡೆದು ಹಾಕಿದ್ದಾರೆ. ಇವರಿಗೆ ತಾಕತ್ತಿದ್ದರೆ, ಗಂಡಸರಾಗಿದ್ದರೆ ಇವರು ಚರ್ಚ್, ಮಸೀದಿಗಳನ್ನು ಮುಟ್ಟಿ ನೋಡಲಿ. ಅವರು ಇವರನ್ನು ಬಿಡುತ್ತಾರಾ? ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ತುಘಲಕ್ ಆಡಳಿತ ನಡೆಸುತ್ತಿದೆ. ತಾಲಿಬಾನ್ ರೀತಿಯ ಸರಕಾರ ಇವರದಾಗಿದೆ. ತಾಲಿಬಾನ್ ಗಿಂತಲೂ ಕೀಳುಮಟ್ಟದಲ್ಲಿ ಈ ಸರಕಾರವಿದೆ ಎಂದು ಟೀಕಿಸಿದ ಅವರು ಇದೀಗ ಸರಕಾರ ದೇವಸ್ಥಾನ ಒಡೆದ ವಿಚಾರದಲ್ಲಿ ನಮ್ಮಿಂದ ಸಣ್ಣ ತಪ್ಪಾಗಿದೆ. ದೇವಸ್ಥಾನ ಕಟ್ಟಿ ಕೊಡ್ತೇವೆ ಎಂದು ಹೇಳಿದ್ದಾರೆ. ಅವರು ಸರಕಾರದ ದುಡ್ಡಿನಿಂದ ಕಟ್ಟಿ ಕೊಡುವುದು ಬೇಡ. ಯಾರು ಒಡೆದಿದ್ದಾರೋ ಅವರ ಆಸ್ತಿ ಮಾರಿ ದೇವಸ್ಥಾನ ಕಟ್ಟಲಿ ಎಂದರು. ದೇವಸ್ಥಾನ ಒಡೆದ ವಿಚಾರದಲ್ಲಿ ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ಅಧಿಕಾರ ಅನುಭವಿಸುವವರು ಇದನ್ನು ಮಾಡಿಸಿದ್ದಾರೆ ಎಂದು ಹೇಳಿದರು.

Leave a Comment

Your email address will not be published. Required fields are marked *