ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆಯ ಹಿನ್ನೆಲೆ ಟ್ವಿಟರ್‌ನಲ್ಲಿ ಶುಭ ಕೋರಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆ ಭಾರಿ ಹೆಚ್ಚಿದೆ. ರಾಷ್ಟ್ರೀಯ ಬೇರೋಜ್‌ಗಾರ್ ದಿವಸ, ನ್ಯಾಷನಲ್ ಅನ್‌ಎಂಪ್ಲಾಯ್ಮೆಟ್ ಡೇ, ಮೋದಿ ರೋಜ್‌ಗಾರ್ ದೋ ಎಂಬ ಹ್ಯಾಷ್‌ಟ್ಯಾಗ್‌ಗಳು ಸದ್ದು ಮಾಡಿವೆ.
ಶುಕ್ರವಾರ, 17-09-2021, ಮಧ್ಯಾಹ್ನ 1 ಗಂಟೆ ವರೆಗಿನ ಟ್ವಿಟರ್ ಟ್ರೆಂಡಿಂಗ್ ಅಂಕಿಅಂಶ ಪ್ರಕಾರ #HappyBdayModiji ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಸುಮಾರು 3.92 ಲಕ್ಷ ಮಂದಿ ಟ್ವೀಟ್ ಮಾಡಿದ್ದಾರೆ. #राष्ट्रीयबेरोजगारदिवस ಎಂಬ ಹಿಂದಿ ಹ್ಯಾಷ್‌ಟ್ಯಾಗ್‌ನಲ್ಲಿ ಸುಮಾರು 11.2 ಲಕ್ಷ ಟ್ವೀಟ್‌ಗಳಿವೆ. #NationalUnemploymentDay ಹ್ಯಾಷ್‌ಟ್ಯಾಗ್‌ನಲ್ಲಿ ಸುಮಾರು 8.06 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ. ಇನ್ನು #मोदीरोजगारदो ಎಂಬ ಮತ್ತೊಂದು ಹಿಂದಿ ಹ್ಯಾಷ್‌ಟ್ಯಾಗ್‌ನಲ್ಲಿ 4.25 ಲಕ್ಷ ಟ್ವೀಟ್‌ಗಳನ್ನು ಮಾಡಲಾಗಿದೆ. ಒಟ್ಟಾರೆ ನಿರುದ್ಯೋಗ ನಿವಾರಿಸುವಂತೆ ಕೋರಿ 23.51 ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಗಿದೆ.
ಟಾಪ್ 5 ಟ್ರೆಂಡಿಂಗ್‌ನಲ್ಲಿ #HappyBdayModiji ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಬ್ಲೂಟಿಕ್ ಮಾರ್ಕ್ ಇರುವ ಅಧಿಕೃತ ಖಾತೆಗಳಿಂದ ಹೆಚ್ಚು ಸಂಖ್ಯೆಯಲ್ಲಿ ಟ್ವೀಟ್ ಮಾಡಲಾಗಿರುವ ಕಾರಣ ನಂ.1ನಲ್ಲಿ ಕಾಣಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ #राष्ट्रीयबेरोजगारदिवस, #NationalUnemploymentDay, #मोदीरोजगारदो ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ. ಪ್ರಧಾನಿ ಒಬ್ಬರ ಜನ್ಮದಿನದಂದು ಶುಭ ಕೋರಿದ ದೇಶದ ಜನತೆಗಿಂತ ಅತಿಹೆಚ್ಚು ಸಂಖ್ಯೆಯಲ್ಲಿ ಉದ್ಯೋಗಕ್ಕಾಗಿ ಮೊರೆಯಿಡುತ್ತಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆದ ಮುಜುಗರ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.