Ad Widget .

ಎಲ್ಲಾ ಹಿಂದೂ ದೇವರ ಕೈಯಲ್ಲಿ ಆಯುಧಗಳಿವೆ, ನೆನಪಿರಲಿ – ಪ್ರಚೋದನಕಾರಿ ಭಾಷಣ ಮಾಡಿದ‌ ಮುತಾಲಿಕ್

Ad Widget . Ad Widget .

ಧಾರವಾಡ: ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಕ್ಕೆ ಕಾರಣರಾಗಿದ್ದಾರೆ.

Ad Widget . Ad Widget .

ಎಲ್ಲಾ ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರಿಗೆ ನಮಸ್ಕರಿಸುವಾಗ ಪ್ರತಿದಿನ ಶಸ್ತ್ರಾಸ್ತ್ರಗಳನ್ನು ನೋಡುತ್ತೇವೆ.
ಆದರೆ ನಮ್ಮ ಮನೆಗಳಲ್ಲಿ ಈಗ ಒಂದೇ ಒಂದು ಶಸ್ತ್ರಗಳು ಇಲ್ಲದಂತಾಗಿದೆ. ನಮ್ಮ ರಕ್ಷಣೆಗಾಗಿ ತಲ್ವಾರ್, ಕತ್ತಿಯಂತಹ ಶಸ್ತ್ರಗಳನ್ನು ಇಡಬೇಕು ಎಂದು ಹೆಳಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಮುತಾಲಿಕ್ ಹೇಳಿಕೆ ಇದೀಗ ಭಾರಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ನಾಳೆ ಬೀದಿ ಕಾಳಗಗಳು ನಡೆಯುತ್ತೆ. ಅದನ್ನು ಎದುರಿಸಬೇಕಾದ ಸಂದರ್ಭ ಬರುತ್ತೆ. ಹೀಗಾಗಿ ಮನೆಗಳಲ್ಲಿ ಶಸ್ತ್ರ, ಕತ್ತಿ, ಖಡ್ಗ, ತಲ್ವಾರ್ ಗಳನ್ನು ಇಡಲೆಬೇಕು ಎಂದು ಆಗ್ರಹಿಸಿದ್ದಾರೆ.

ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಾಟೆಗಳನ್ನು ನೆನಪು ಮಾಡಿಕೊಳ್ಳೋಣ. ದೇಶದಲ್ಲಿರುವ ಶತ್ರುಗಳನ್ನು ಗುರುತಿಸೋಣ. ಶತ್ರುಗಳನ್ನು ತಡೆದು ನಮ್ಮ ದೇವಸ್ಥಾನಗಳನ್ನು ಉಳಿಸಿಕೊಳ್ಳೋಣ. ನಮ್ಮ ಅಕ್ಕ-ತಂಗಿಯರ ಮಾಂಗಲ್ಯವನ್ನು ರಕ್ಷಿಸೋಣ ಎಂದು ಹೇಳುವ ಮೂಲಕ ಮನೆ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

Leave a Comment

Your email address will not be published. Required fields are marked *