Ad Widget .

ಎಲ್ಲಿ‌ ಹೋದರು‌ ಮುಜರಾಯಿ ‌ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ? ದೇವಾಲಯದ ಧ್ವಂಸದ ಬಗ್ಗೆ ಜಾಣಮೌನ|

Ad Widget . Ad Widget .

ಮಂಗಳೂರು: ಮುಜರಾಯಿ ಸಚಿವೆಯಾಗಿದ್ದರೂ ದೇವಸ್ಥಾನ ಧ್ವಂಸ ಮಾಡಿದ ಬಗ್ಗೆ ಬಾಯಿ ಬಿಡದ ಸಚಿವೆ ಬೇಕಾಗಿಲ್ಲ ಎನ್ನುವ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget . Ad Widget .

ರಾಜ್ಯದಲ್ಲಿ ದೇವಾಲಯಗಳ ನೆಲಸಮ ಮಾಡಲು ಆದೇಶ ಹೊರಡಿಸಿದ ನ್ಯಾಯಲಯ ಹಾಗೂ ದೇವಾಲಯಗಳನ್ನು ನೆಲಸಮ ಮಾಡಲು ಅವಕಾಶ ಒದಗಿಸಿಕೊಟ್ಟ ಆಡಳಿತರೂಢ ಬಿಜೆಪಿ ಸರಕಾರದ ವಿರುದ್ಧ ವಿವಿಧ ಸಂಘಟನೆಗಳು ಹಲವು ನಗರಗಳಲ್ಲಿ ಪ್ರತಿಭಟನೆಗಳನ್ನು ಕೈಗೊಂಡು ಆಕ್ರೋಶವನ್ನು ಹೊರಹಾಕುತ್ತಿದೆ.

ಮಂಗಳೂರು, ಮೈಸೂರು ದಾವಣಗೆರೆ ಸೇರಿದಂತೆ ಹಲವೆಡೆ ಹಿಂದೂ ಸಂಘಟನೆಗಳು ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು ಏತನ್ಮಧ್ಯೆ ರಾಜ್ಯ ಮುಖ್ಯಮಂತ್ರಿ ಅವಸರ ಅವಸರವಾಗಿ ದೇವಾಲಯಗಳನ್ನು ನೆಲಸಮಗೊಳಿಸಬೇಡಿ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಹಾಗೆಯೆ ಅನೇಕ ಯುವ ಹಿಂದೂ ಕಾರ್ಯಕರ್ತರು ಬಿಜೆಪಿಯ ಸ್ಥಾನಮಾನಕ್ಕೆ ರಾಜೀನಾಮೆ ನೀಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಆದರೆ ಇಷ್ಟೆಲ್ಲ ಘಟನೆಗಳ ನಡುವೆ ಮುಜರಾಯಿ ಸಚಿವರಾಗಿರುವ ಶಶಿಕಲ್ಲಾ ಜೊಲ್ಲೆ ಮಾತ್ರ ತುಟಿಕ್ ಪಿಟಿಕ್ ಅಂದಿಲ್ಲ.
ಈಗ ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಶಶಿಕಲಾ ಜೊಲ್ಲೆ ಅವರೂ ಗುರಿಯಾಗಿದ್ದು, ಐತಿಹಾಸಿಕ ಚೋಳರ ಕಾಲದ ನಂಜನಗೂಡು ದೇವಾಲಯಗಳನ್ನು ನೆಲಸಮಗೊಳಿಸಿದಾಗಲೂ ಮುಜಾರಾಯಿ ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ಸುಮ್ಮನಿರುವುದು ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.

Leave a Comment

Your email address will not be published. Required fields are marked *