Ad Widget .

ಕೆ ಎಸ್ಆರ್ ಟಿಸಿ ಬಸ್ಸೊಳಗೆ ಕಿಸ್ ನೀಡಿ ಇಳಿದು ಹೋದ ಕಾಮುಕ| ಅನಿರೀಕ್ಷಿತ ಘಟನೆಯಿಂದ ದಂಗಾದ ಯುವತಿ

Ad Widget . Ad Widget .

ಬೆಂಗಳೂರು: ದೇಶದಲ್ಲಿ ಹೆಣ್ಮಕ್ಕಳ ಮೇಲೆ ಒಂದಿಲ್ಲೊಂದು ದೌರ್ಜನ್ಯಗಳು ನಡೆಯುತ್ತಿದ್ದು ಇಡೀ ಮಹಿಳಾ ಸಮಾಜ ಆತಂಕಗೊಳ್ಳುವಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಬಸ್ಸೊಂದರಲ್ಲಿ ವಿಚಿತ್ರ ಘಟನೆ ನಡೆದಿದ್ದು ಮಹಿಳಾ ಪ್ರಯಾಣಿಕರನ್ನು ಆತಂಕಕ್ಕೆ ಈಡು ಮಾಡಿದೆ.
ಸಿನಿಮಾ ರೀತಿಯಲ್ಲಿ ಕಾಮುಕನೊಬ್ಬ ವಿದ್ಯಾರ್ಥಿನಿಗೆ ಬಸ್ನಲ್ಲಿ ಕಿಸ್ ಮಾಡಿ ಓಡಿ ಹೋಗಿದ್ದಾನೆ. ಬಳ್ಳಾರಿಯಿಂದ ಬೆಂಗಳೂರಿಗೆ ಬರ್ತಿದ್ದ ಕೆಎಸ್ಆರ್ಟಿಸಿ ಬಸ್ ಹೆಸರುಘಟ್ಟ ಕ್ರಾಸ್ ತಲುಪುತ್ತಿದ್ದ ಹಾಗೆ ಮುತ್ತು ಕೊಟ್ಟ ಮಹಾಶಯ ಬಸ್ ಇಳಿದು ಹೋಗಿದ್ದಾನೆ. ಯುವತಿ ನಿದ್ದೆ ಮಂಪರಿನಲ್ಲಿದ್ದ ಕಾರಣ ಕೂಡಲೇ ಪ್ರತಿರೋಧಿಸಲು ಸಾಧ್ಯವಾಗಿಲ್ಲ. ಏನು ಮಾಡಬೇಕೆಂದು ತಿಳಿಯದೆ ನೇರವಾಗಿ ಮನೆಗೆ ಹೋಗಿ ಸಂಬಂಧಿಗೆ ವಿಷಯ ತಿಳಿಸಿದ್ದಾಳೆ. ಆ ಬಳಿಕ ಪೀಣ್ಯ ಠಾಣೆಗೆ ಬಂದು ದೂರು ಸಲ್ಲಿಸಿದ್ದು, ನಂತರ ಬಾಗಲಗುಂಟೆ ಠಾಣೆಗೆ ಕೇಸ್ ವರ್ಗವಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ, ಗಣೇಶ ಹಬ್ಬದ ಪ್ರಯುಕ್ತ ಹುಟ್ಟೂರು ಬಳ್ಳಾರಿಗೆ ಹೋಗಿದ್ದಳು ಎನ್ನಲಾಗಿದೆ. ಬೆಂಗಳೂರಿಗೆ KSRTC ಅಲ್ಟ್ರಾ ಡಿಲಕ್ಸ್ ಬಸ್ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಬರುವಾಗ ಈ ಘಟನೆ ನಡೆದಿದೆ.
ಬಳ್ಳಾರಿಯಿಂದಲೂ ಜೊತೆಯಲ್ಲೇ ಬಂದವನು, ತೆಲುಗಿನ ಗೀತಾ ಗೋವಿಂದಂ ಸಿನಿಮಾ ನೋಡುತ್ತಾ ಯುವತಿಯನ್ನು ಕಾಮ ದೃಷ್ಟಿಯಿಂದ ನೋಡುತ್ತಿದ್ದ ಎನ್ನಲಾಗಿದೆ. ಆದರೆ ಆತನ ಕಾಮದೃಷ್ಟಿ ಬಗ್ಗೆ ಅಷ್ಟೇನು ಹೆಚ್ಚಾಗಿ ತಲೆ ಕಡಿಸಿಕೊಳ್ಳದ ವಿದ್ಯಾರ್ಥಿನಿ ನಿದ್ರೆಗೆ ಜಾರಿದ್ದಳು ಎನ್ನಲಾಗಿದೆ. ಆದರೆ ಬೆಳಗ್ಗೆ 5 ಗಂಟೆ ಸುಮಾರಿಗೆ ಬಸ್ ಬೆಂಗಳೂರು ತಲುಪುತ್ತಿದ್ದ ಹಾಗೆ ಸಿನಿಮಾದಲ್ಲಿ ಮುತ್ತು ಕೊಟ್ಟಿರುವ ಹಾಗೆಯೇ ತಾನೂ ಮುತ್ತು ಕೊಟ್ಟು ಓಡಿ ಹೋಗಿದ್ದಾನೆ.

Ad Widget . Ad Widget .

Leave a Comment

Your email address will not be published. Required fields are marked *