Ad Widget .

ಸುಳ್ಯ:ನೆರೆಮನೆಯವನ ಜೊತೆ ಗ್ರಾ. ಪಂ ಸದಸ್ಯೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ|

ಸುಳ್ಯ: ಮಡಿಕೇರಿ ತಾಲೂಕು ಚೆಂಬು ಗ್ರಾ.ಪಂ ಸದಸ್ಯೆ ಕಮಲಾ ಕೇಶವ ನೆರೆಮನೆಯ ಮುತ್ತು ಎಂಬಾತನ ಜೊತೆಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Ad Widget . Ad Widget .

ನೆರೆಮನೆಯ ಮುತ್ತು ಹಾಗೂ ಕಮಲ ಇಬ್ಬರೂ ಒಂದೇ ಮರದಲ್ಲಿ ನೇಣುಬಿಗಿದು ಮೃತಪಟ್ಟಿರುವುದರಿಂದ ಅಕ್ರಮ ಸಂಬಂಧವೇ ಈ ಘಟನೆಗೆ ಕಾರಣ ಎನ್ನುವುದು‌ ಮೇಲ್ನೋಟಕ್ಕೆ ಸಾಬೀತಾಗಿದೆ.

Ad Widget . Ad Widget .

ಚೆಂಬು ಗ್ರಾ.ಪಂ ದಬ್ಬಡ್ಕ ವಾರ್ಡ್ ನ ಸದಸ್ಯೆ ಕಮಲಾ ಹಾಗೂ ಮುತ್ತು ಪಯಸ್ವಿನಿ ನದಿ ದಡದಲ್ಲಿ ಕಾಣಿಸಿಕೊಂಡಿದ್ದರು. ನಂತರ ಕಮಲಾ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಮುತ್ತು ಆಕೆಯನ್ನು ಹೊಳೆಗೆ ತಳ್ಳಿರುವುದಾಗಿಯೂ ಸುದ್ದಿಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ.

ಚೆಂಬು‌ ಗ್ರಾ.ಪಂ ಸದಸ್ಯೆ ಕಮಲ ದಬ್ಬಡ್ಕ ಎಂಬವರು ಕಾರ್ಯಕ್ರಮವೊಂದಕ್ಕೆ ತೆರಳಿ ಮನೆಗೆ ಮರಳುವ ವೇಳೆ ದಾರಿ ಮದ್ಯೆ ಎದುರಾದ ‌ಮುತ್ತು‌ ಎಂಬಾತ‌ ಅವರನ್ನು ಸೇತುವೆಯಿಂದ ಹೊಳೆಗೆ ತಳ್ಳಿರುವುದಾಗಿ ಹೇಳಲಾಗಿತ್ತು. ಘಟನೆ ಬಳಿಕ ಕಮಲ ಅವರ ಸುಳಿವೂ ಸಿಗದೇ ಇತ್ತ ಮುತ್ತು ಕೂಡಾ ಕಾಣೆಯಾಗಿದ್ದರು.

Leave a Comment

Your email address will not be published. Required fields are marked *