Ad Widget .

‘ಮೋದಿ ಕೊಟ್ಟಿರೋ 5.5 ಲಕ್ಷ ಹಣವದು, ನಾನು ವಾಪಾಸ್ ಕೊಡಲ್ಲ’- ಹಠ ಹಿಡಿದು ಕುಳಿತುಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಯಾಕೆ ಗೊತ್ತಾ?

ಪಾಟ್ನಾ: ಬಿಹಾರದ ಖಗರಿಯಾ ಜಿಲ್ಲೆಯ ವ್ಯಕ್ತಿಯೊಬ್ಬ ಬ್ಯಾಂಕ್ ದೋಷದಿಂದ ತನ್ನ ಖಾತೆಗೆ ಜಮೆಯಾದ ₹5.5 ಲಕ್ಷ ಹಣವನ್ನು ಹಿಂದಿರುಗಿಸದೆ ‘ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ’ ಎಂದು ಪಟ್ಟು ಹಿಡಿದಿದ್ದಾನೆ.

Ad Widget . Ad Widget .

ಖಗರಿಯಾದ ಗ್ರಾಮೀಣ ಬ್ಯಾಂಕ್‌ನಿಂದ ಹಣವನ್ನು ಮಾನ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ತಿಯಾರ್‌ಪುರ್ ಗ್ರಾಮದ ರಂಜಿತ್ ದಾಸ್‌ ಎಂಬವರಿಗೆ ತಪ್ಪಾಗಿ ವರ್ಗಾವಣೆ ಮಾಡಲಾಗಿದೆ. ಹಲವು ನೋಟಿಸ್‌ಗಳ ಹೊರತಾಗಿಯೂ ಹಣವನ್ನು ಹಿಂದಿರುಗಿಸದ ದಾಸ್, ಹಣವನ್ನು ಖರ್ಚು ಮಾಡಿದ್ದೇನೆ ಎಂದು ಹೇಳುತ್ತಿದ್ದಾನೆ.

Ad Widget . Ad Widget .

‘ಈ ವರ್ಷದ ಮಾರ್ಚ್‌ನಲ್ಲಿ ನಾನು ಹಣವನ್ನು ಸ್ವೀಕರಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಹಣವನ್ನು ಹಾಕುತ್ತಿದ್ದಾರೆ. ಅದರ ಮೊದಲ ಕಂತು ಇದಾಗಿರಬಹುದು ಎಂದು ಭಾವಿಸಿ ಎಲ್ಲ ಹಣವನ್ನು ಖರ್ಚು ಮಾಡಿದೆ. ಈಗ, ನನ್ನ ಬ್ಯಾಂಕ್ ಖಾತೆಯಲ್ಲಿ ಮತ್ತು ನನ್ನ ಬಳಿ ಹಣವಿಲ್ಲ’ ಎಂದು ಬಂಧಿತನಾಗಿರುವ ದಾಸ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.

‘ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ನಾವು ರಂಜಿತ್ ದಾಸ್ ಅವರನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಮಾನ್ಸಿ ಪೊಲೀಸ್ ಠಾಣೆಯ ಠಾಣಾಧಿಕಾರಿ ದೀಪಕ್ ಕುಮಾರ್ ಹೇಳಿದ್ದಾರೆ.

Leave a Comment

Your email address will not be published. Required fields are marked *