Ad Widget .

‘ಸರಿಗಮಪ’ ರಿಯಾಲಿಟಿ ಶೋ‌ನಿಂದ ಅನುಶ್ರೀಗೆ ಗೇಟ್ ಪಾಸ್..! ಯಾರು ಗೊತ್ತಾ ಹೊಸ ಆ್ಯಂಕರ್?

ಬೆಂಗಳೂರು: ಕರ್ನಾಟಕದ ಜನತೆಯ ನೆಚ್ಚಿನ ಸಂಗೀತ‌ ಕಾರ್ಯಕ್ರಮದಿಂದ ಆ್ಯಂಕರ್ ಅನುಶ್ರೀಗೆ ಗೇಟ್ ಪಾಸ್ ನೀಡ್ತಾರೆ ಅನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ‌ಹರಿದಾಡ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮಕ್ಕೆ ಮತ್ತೊಬ್ಬ ನಿರೂಪಕಿಯನ್ನು ತಂಡ ಹುಡುಕಾಡ್ತಿದೆ ಅಂತ ಹೇಳಲಾಗುತ್ತಿದೆ.

Ad Widget . Ad Widget .

ಸರಿಗಮಪ ಕಾರ್ಯಕ್ರಮ ಬಹಳ ವರ್ಷಗಳಿಂದ ಪ್ರಸಾರವಾಗುತ್ತಿರುವ ಸಂಗೀತ ರಿಯಾಲಿಟಿ ಶೋ. ಈ ಕಾರ್ಯಕ್ರಮವನ್ನು ಹಿಂದಿ ಸರಿಗಮಪ ಶೋನಂತೆ ನಡೆಸಿಕೊಳ್ಳಲಾಗುತ್ತಿದೆ.
ಇಲ್ಲಿಯವರೆಗೂ ಸರಿಗಮಪ ಕಾರ್ಯಕ್ರಮದ ಮೂಲಕ ಹಲವಾರು ಪ್ರತಿಭೆಗಳು ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಯಶಸ್ಸು ಕೂಡ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆದಷ್ಟು ಸ್ಪರ್ಧಿಗಳು ಈಗಾಗಲೇ ಸ್ಯಾಂಡಲ್ ವುಡ್ ನ ಖ್ಯಾತ ಗಾಯಕರಾಗಿ ಹೊರಹೊಮ್ಮಿದ್ದಾರೆ.

Ad Widget . Ad Widget .

ಈ ಕಾರ್ಯಕ್ರಮದ ಜಡ್ಜ್ ಗಳಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯ ಸಂಗೀತ ನಿರ್ದೇಶಕರಾಗಿ ರುವುದರಿಂದ ಪ್ರತಿಭೆ ಉಳ್ಳವರನ್ನು ತಾವೇ ಗುರುತಿಸಿ ಅವರಿಗೆ ಅವಕಾಶ ನೀಡುತ್ತಿದ್ದಾರೆ. ಕಳೆದ ವರ್ಷ ಕೋರೋನಾ ಇಂದಾಗಿ ಹೊಸಬರಿಗೆ ಅವಕಾಶ ಸಿಕ್ಕಿರಲಿಲ್ಲ ಹೀಗಾಗಿ ಸಾಕಷ್ಟು ಜನ ಬೇಸರ ಮಾಡಿಕೊಂಡಿದ್ದರು.

ಸದ್ಯದಲ್ಲೇ ಜೀ ಕನ್ನಡ ವಾಹಿನಿ ಕೂಡ ಸರಿಗಮಪ ಚಾಂಪಿಯನ್ ಶಿಪ್ ಕಾರ್ಯಕ್ರಮ ಶುರು ಮಾಡಲಿದೆ. ಫ್ರೋಮೋ ಈಗಾಗಲೇ ‌ಶುರುವಾಗಿದ್ದು, ಈವರೆಗೂ ಸರಿಗಮಪ ಕಾರ್ಯಕ್ರಮದಲ್ಲಿ ಗೆದ್ದಿರುವ ಸ್ಪರ್ಧಿಗಳನ್ನು ಇಟ್ಟುಕೊಂಡು ಸರಿಗಮಪ ಚಾಂಪಿಯನ್ ಶಿಪ್ ಕಾರ್ಯಕ್ರಮವನ್ನು ವಾಹಿನಿ ಮಾಡಲು ಮುಂದಾಗಿದೆ.
ಆದರೆ ಮೂಲಗಳ ಪ್ರಕಾರ ಈ ಒಂದು ಕಾರ್ಯಕ್ರಮವನ್ನು ಹಿಂದಿನಂತೆ ಅನುಶ್ರೀ ಅವರು ನಡೆಸಿಕೊಡುವುದು ಡೌಟ್ ಎನ್ನಲಾಗುತ್ತಿದೆ. ಅದೇ ರೀತಿ ತೀರ್ಪುಗಾರರಾಗಿದ್ದ ರಾಜೇಶ್ ಕೃಷ್ಣನ್ ಅವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಇರುವುದಿಲ್ಲ ಎಂಬ ಮಾಹಿತಿ ಕೂಡ ಸಿಕ್ಕಿದೆ. ಇನ್ನುಳಿದಂತೆ ತೀರ್ಪುಗಾರರಾದ ಮಹಾಗುರು ಹಂಸಲೇಖ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರು ಈ ಕಾರ್ಯಕ್ರಮದಲ್ಲಿ ಮುಂದುವರೆಯಲಿದ್ದಾರೆ.

ನಿರೂಪಕಿ ಅನುಶ್ರೀ ಅವರ ಬದಲು ಈ ಕಾರ್ಯಕ್ರಮಕ್ಕೆ ಹೊಸ ಪ್ರತಿಭೆಯೊಬ್ಬರು ನಿರೂಪಕರಾಗಿ ಬರುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ಹೇಳಲಾಗುತ್ತಿದೆಯಾದರೂ ಕಾರ್ಯಕ್ರಮ ತಂಡ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

Leave a Comment

Your email address will not be published. Required fields are marked *