ಹೆಬ್ರಿ : ಲಾರಿಗೆ ಬೈಕ್ ಢಿಕ್ಕಿ – ಸವಾರ ಸ್ಥಳದಲ್ಲೇ ಸಾವು

ಹೆಬ್ರಿ: ಲಾರಿ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಬ್ರಿ ತಾಲೂಕಿನ ವರಂಗ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ.

Ad Widget ... ..

ಸಾಗರ ತಾಲೂಕಿನ ಸಿರದಂಗೂರು ಗ್ರಾಮದ ನಿವಾಸಿಯಾಗಿರುವ ಜಿನದತ್ತ ಜೈನ್ (42) ಮೃತಪಟ್ಟ ಬೈಕ್ ಸವಾರ. ಈತ ಅಪಾಯಕಾರಿ ತಿರುವಿನಲ್ಲಿ ತನ್ನ ಮುಂದಿನಿಂದ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಲಾರಿಗೆ ಡಿಕ್ಕಿಯಾಗಿ ಹಿಂದಿನಿಂದ ಬರುತ್ತಿದ್ದ ಲಾರಿಯಡಿ‌ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರ್ಕಳ ಕಡೆಯಿಂದ ಹೆಬ್ರಿ ಮಾರ್ಗವಾಗಿ ಸಾಗರಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ವರಂಗ ಗ್ರಾಮದ ಕೆಲ್ ಟೆಕ್ ಕಂಪನಿಗೆ ಹೋಗುವ ಸಂಪರ್ಕ ರಸ್ತೆಯ ಬಳಿಯ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

Ad Widget

Leave a Comment

Your email address will not be published. Required fields are marked *