Ad Widget .

ಪುತ್ತೂರು: ದೇವಸ್ಥಾನ ತೆರವು, ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ – ಶರಣ್ ಪಂಪ್ ವೆಲ್

ಪುತ್ತೂರು: ಮೈಸೂರಿನಲ್ಲಿ ದೇವಸ್ಥಾನ ಧ್ವಂಸಗೊಳಿಸಿರುವುದು ರಾಜ್ಯ ಸರಕಾರದಲ್ಲಿರುವ ಕೆಲವು ತಾಲಿಬಾನ್ ಪ್ರೇರಿತ ಅಧಿಕಾರಿಗಳ ಕೆಲಸ ಎಂದು ಪುತ್ತೂರಿನಲ್ಲಿ ಮಾತನಾಡಿದ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಆರೋಪಿಸಿದ್ದಾರೆ.

Ad Widget . Ad Widget .

ರಾಜ್ಯ ಸರಕಾರದಲ್ಲಿ ತಾಲೀಬಾನ್ ಪ್ರೇರಿತ ಅಧಿಕಾರಿಗಳಿಂದ ದೇವಸ್ಥಾನ ದ್ವಂಸಗೊಳಿಸುವ ಕೆಲಸ ನಡೆಯುತ್ತಿದೆ. ರಾಜ್ಯ ಸರಕಾರ ತಕ್ಷಣವೇ ಅಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಮೈಸೂರಿನಲ್ಲಿ ತೆರವುಗೊಳಿಸಿದ ದೇವಸ್ಥಾನವನ್ನು ಮತ್ತೆ ಮರು ನಿರ್ಮಿಸಬೇಕು, ಇನ್ನು ತೆರವುಗೊಳಿಸಲು ಉದ್ಧೇಶಿಸಿರುವ ದೇವಸ್ಥಾನಗಳ ಪಟ್ಟಿಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

Ad Widget . Ad Widget .

ಬಳಿಕ ಮಾತನಾಡಿದ ಅವರು ಸೆ. 16 ರಂದು ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ ರಾಜ್ಯ ಸರಕಾರದ ವಿರುದ್ದ ವಿಶ್ವಹಿಂದೂ ಪರಿಷತ್,ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

Leave a Comment

Your email address will not be published. Required fields are marked *