ಸೆಕ್ಸ್ ಕೇವಲ ಆನಂದವಲ್ಲ. ಲೈಂಗಿಕ ಕ್ರಿಯೆ ಒಂದು ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆ. ಲೈಂಗಿಕತೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ನೀವು ದೀರ್ಘಕಾಲದವರೆಗೆ ಲೈಂಗಿಕ ಸಂಬಂಧ ಹೊಂದಿಲ್ಲದಿದ್ದರೆ ಯಾವ ಸಮಸ್ಯೆಗಳು ನಿಮಗೆ ಆಗಬಹುದು ಎಂದು ತಿಳಿದಿದೆಯೇ ..?
ಮನುಷ್ಯ ಸಹಜವಾಗಿ ಲೈಂಗಿಕ ಕ್ರಿಯೆಯಲ್ಲಿ ಆಗಾಗ ಭಾಗಿಯಾಗಬೇಕು ಎನ್ನುತ್ತದೆ ವಿಜ್ಞಾನ, ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾದರೆ ಆ ಪರಿಣಾಮಗಳು ಯಾವುದು? ತಿಳಿದುಕೊಳ್ಳಿ.
ಶಕ್ತಿ ಕುಂಠಿತವಾಗುವ ಸಾಧ್ಯತೆ:
ಸಂಭೋಗದ ಸಮಯದಲ್ಲಿ ವೇಗವಾಗಿ ಮತ್ತು ಶಕ್ತಿಯುತವಾಗಿರುವ ಜನರು ಇದ್ದಕ್ಕಿದ್ದಂತೆ ಲೈಂಗಿಕ ಕ್ರಿಯೆ ನಿಲ್ಲಿಸಿದರೆ, 50 ವರ್ಷದ ನಂತರ ವೇಗ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಅಮೇರಿಕನ್ ಜರ್ನಲ್ ನಲ್ಲಿ ಪ್ರಕಟವಾದ 2008 ರ ಅಧ್ಯಯನ ಹೇಳುತ್ತದೆ. ನೀವು ಹಲವಾರು ತಿಂಗಳುಗಳವರೆಗೆ ಲೈಂಗಿಕತೆಯನ್ನು ಹೊಂದಿಲ್ಲದಿದ್ದರೆ, ನೀವು ತಕ್ಷಣ ದಣಿಯುತ್ತೀರಿ ಮತ್ತು ದೀರ್ಘಕಾಲದವರೆಗೆ ಲೈಂಗಿಕ ಕ್ರಿಯೆ ಅಸಾಧ್ಯ.
ಕ್ಯಾನ್ಸರ್ ಅಪಾಯ:
ಪುರುಷರ ವೀರ್ಯವು ಒಣಗಿದರೆ, ಆ ಅಂಗಕ್ಕೆ ಶಕ್ತಿಯು ಸಕ್ರಿಯವಾಗಿ ಲಭ್ಯವಿಲ್ಲದಿದ್ದರೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಹಾಗಾಗಿ ನಿಮಗೆ ಸಂಗಾತಿ ಇಲ್ಲದಿದ್ದರೂ, ಹಸ್ತಮೈಥುನ ಮಾಡಿ ಮತ್ತು ವೀರ್ಯವನ್ನು ಹೊರಹಾಕಿ ಎಂದು ಸಂಶೋಧಕರು ಹೇಳುತ್ತಾರೆ.
ಹೆಚ್ಚುವ ರಕ್ತದೊತ್ತಡ:
ಲೈಂಗಿಕ ಸಂಭೋಗದ ಸಮಯದಲ್ಲಿ ಹೃದಯದ ಆರೋಗ್ಯವು ಬಲಗೊಳ್ಳುತ್ತದೆ ಎಂದು ತೋರಿಸುವ ಅನೇಕ ಅಧ್ಯಯನಗಳನ್ನು ನಾವು ಅಂಗೀಕರಿಸಿದ್ದೇವೆ. ಲೈಂಗಿಕ ಕ್ರಿಯೆಯಿಂದ ದೀರ್ಘ ಕಾಲ ದೂರವಿದ್ದರೆ ರಕ್ತದೊತ್ತಡ ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಒತ್ತಡವನ್ನು ಹೆಚ್ಚಿಸುತ್ತದೆ:
ಲೈಂಗಿಕ ಸಂಭೋಗದ ಪ್ರಮುಖ ಅಂಶವೆಂದರೆ ಅದರ ಆನಂದ ಮತ್ತು ಮನಸ್ಸಿಗೆ ಅತ್ಯಗತ್ಯವಿರುವ ಆಂತರಿಕ ವಿಶ್ರಾಂತಿ. ಪುರುಷರ ಆರೋಗ್ಯ ವೆಬ್‌ಸೈಟ್‌ನಲ್ಲಿ ಸಂದರ್ಶನ ನೀಡಿದ ಡಾ ಡೆಬ್ರಾ ಡಬ್ಲ್ಯೂ ಸೋಹ್ ಎಂಬ ನರವಿಜ್ಞಾನಿ ಇದನ್ನು ಖಚಿತಪಡಿಸಿದ್ದಾರೆ. ಇದರ ಜೊತೆಯಲ್ಲಿ, ಸ್ಖಲನವು ಪುರುಷರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೀವು ಲೈಂಗಿಕ ಕ್ರಿಯೆಯನ್ನು ನಿಲ್ಲಿಸಿದರೆ, ನಿಮಗೆ ಆ ವಿಶ್ರಾಂತಿ ಪಡೆಯಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಒತ್ತಡ ಹೆಚ್ಚುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.
ಪ್ರತಿರಕ್ಷಣಾ ಕೊರತೆ: ಮನೋವಿಜ್ಞಾನಿಗಳಾದ ಕಾರ್ಲ್ ಸರ್ನೆಟ್ಸ್ಕಿ ಮತ್ತು ಫ್ರಾನ್ಸಿಸ್ ಬ್ರೆನ್ನನ್ ಜೂನಿಯರ್ ಮನುಷ್ಯ ಲೈಂಗಿಕ ಕ್ರಿಯೆ ಮಾಡದೇ ಹೆಚ್ಚು ಕಾಲ ದೂರವಿದ್ದರೆ ಏನಾಗುತ್ತದೆ ಎಂಬ ಬಗ್ಗೆ ಜಂಟಿ ಅಧ್ಯಯನ ನಡೆಸಿದರು. ವಾರದಲ್ಲಿ ಎರಡು ಬಾರಿ ಮತ್ತು ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆ ನಡೆಸುವವರ ರಕ್ತದ ಮಾದರಿಗಳು ಕಡಿಮೆ ಮಟ್ಟದ ಲೈಂಗಿಕತೆಯನ್ನು ಹೊಂದಿರುವವರಿಗಿಂತ ಸೋಂಕಿಗೆ ಒಳಗಾಗುತ್ತವೆ ಎಂದು ಅದು ಹೇಳಿದೆ. ಅವರ ರಕ್ತದಲ್ಲಿ ಕಡಿಮೆ ರೋಗನಿರೋಧಕ ಶಕ್ತಿ ಇರುವುದು ಕಂಡುಬಂದಿದೆ.
ಈ ಎಲ್ಲಾ ಸಂಶೋಧನೆಗಳು, ತಜ್ಞರ ಅಭಿಪ್ರಾಯಗಳು ಕೂಡ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಲೈಂಗಿಕ ಕ್ರಿಯೆ ಎಷ್ಟು ಅತ್ಯಗತ್ಯ ಎಂಬುದನ್ನು ತಿಳಿಸುತ್ತದೆ. ಭಾರತೀಯ ಮನಸ್ಥಿತಿಯಲ್ಲಿ ಸಹಜವಾಗಿ ಲೈಂಗಿಕತೆಯ ಬಗ್ಗೆ ಚರ್ಚೆ ಅಥವಾ ಅದರ ಅಗತ್ಯಗಳ ಕುರಿತಾದ ವಿಮರ್ಶೆ ಮುಕ್ತವಾಗಿಲ್ಲ. ಸಂಸ್ಕೃತಿ, ಪರಂಪರೆ ಎಂಬ ಕಣ್ಣಪಟ್ಟಿ ಭಾರತೀಯರನ್ನು ಈ ವಿಚಾರಗಳ ಕುರಿತಾದ ಸತ್ಯಾಸತ್ಯತೆಯ ವಿಮರ್ಶೆ ಮಾಡುವ ಗುಣದಿಂದ ದೂರ ಇಟ್ಟಿವೆ. ಈ ಕಾರಣದಿಂದಲೇ, ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಮುಂದುವರೆದ ದೇಶಗಳಲ್ಲಿ ಲೈಂಗಿಕತೆಯ ಬಗ್ಗೆ ಇರುವ ಮುಕ್ತ ಅಭಿಪ್ರಾಯ ಭಾರತದಲ್ಲಿ ಕಂಡು ಬರುವುದಿಲ್ಲ.