Ad Widget .

ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ 6 ಉಗ್ರರ ಬಂಧನ|ಇಬ್ಬರು ಪಾಕಿಸ್ತಾನದವರು

Ad Widget . Ad Widget .

ನವದೆಹಲಿ: ರಾಜ್ಯದ ವಿವಿಧ ಕಡೆ ಸರಣಿ ಸ್ಪೋಟಕ್ಕೆ ಸಂಚು ರೂಪಿಸಿದ್ದ 6 ಉಗ್ರರನ್ನು ಬಂಧಿಸಲಾಗಿದ್ದು ಇದರಲ್ಲಿ 2 ಮಂದಿ ಪಾಕಿಸ್ತಾನ ಮೂಲದ ಐಎಸ್‍ಐನಿಂದ ತರಬೇತಿ ಪಡೆದ ಉಗ್ರರಾಗಿದ್ದಾರೆ.
ಬಂಧಿತ ಉಗ್ರರನ್ನು ಜಾನ್ ಮೊಹಮ್ಮದ್ ಶೇಖ್ ಅಲಿಯಾಸ್ ಸಮೀರ್(47), ಮೂಲ್‍ಚಂದ್(47), ಮೊಹಮ್ಮದ್ ಅಬುಬಕರ್(23) ಹಾಗೂ ಮೊಹಮ್ಮದ್ ಅಮಿರ್ ಜಾವೇದ್(31) ಹಾಗೇ ಪಾಕಿಸ್ತಾನ ಮೂಲದ ಒಸಾಮಾ(22), ಝೀಶನ್ ಖಮರ್(28), ಎಂದು ಗುರುತಿಸಲಾಗಿದೆ. ಇವರುಗಳು ಗಣೇಶ ಚತುರ್ಥಿ, ನವರಾತ್ರಿ ಹಾಗೂ ರಾಮಲೀಲಾ ಹಬ್ಬಗಳ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಆರೋಪಿಗಳಿಂದ ಎರಡು ಹ್ಯಾಂಡ್ ಗ್ರೆನೇಟ್‍ಗಳು, ಎರಡು ಸುಧಾರಿತ ಸ್ಫೋಟಕ ಸಾಧನಗಳು(ಐಇಡಿ), 1 ಕೆ.ಜಿ.ಆರ್ಡಿಎಕ್ಸ್ ಹಾಗೂ ಇಟಲಿ ನಿರ್ಮಿತ ಪಿಸ್ತೂಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಪಾಕಿಸ್ತಾನದಿಂದ ತರಬೇತಿ ಪಡೆದವರು ಸೇರಿ ಒಟ್ಟು 6 ಜನರನ್ನು ಬಂಧಿಸಿದ್ದೇವೆ. ಒಸಾಮಾ ಹಾಗೂ ಖಮರ್ ಪಾಕಿಸ್ತಾನದವರಾಗಿದ್ದು, ಐಎಸ್‍ಐ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಐಎಸ್‍ಐನಿಂದಲೇ ತರಬೇತಿ ಪಡೆದಿದ್ದಾರೆ. ಎಕೆ-47 ಸೇರಿದಂತೆ ಸ್ಫೋಟಕ ಹಾಗೂ ಬಂದೂಕುಗಳ ಬಳಕೆ ಕುರಿತು ಇದೇ ವರ್ಷ ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆದುಕೊಂಡು ಬಂದಿದ್ದಾರೆ ಎಂದು ಪೆÇಲೀಸ್ ವಿಶೇಷ ಆಯುಕ್ತ ನೀರಜ್ ಕುಮಾರ್ ಠಾಕೂರ್ ಮಾಹಿತಿ ನೀಡಿದ್ದಾರೆ.

Ad Widget . Ad Widget .

ಶೇಖ್‍ನನ್ನು ರಾಜಸ್ಥಾನದ ಕೋಟಾ ಬಳಿ ಬಂಧಿಸಲಾಗಿದೆ, ಒಸಾಮಾನನ್ನು ದೆಹಲಿಯ ಓಖ್ಲಾ, ಬಕರ್‍ನನ್ನು ಸರಾಯಿ ಕಾಳೆ ಖಾನ್‍ನಿಂದ, ಖಮರ್‍ನನ್ನು ಅಲಹಬಾದ್, ಜಾವೇದ್‍ನನ್ನು ಲಕ್ನೋದಿಂದ ಹಾಗೂ ಮೂಲ್‍ಚಂದ್‍ನನ್ನು ರಾಯಬರೇಲಿಯಿಂದ ಬಂಧಿಸಲಾಗಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ವಿಭಾಗದ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾ ಈ ಕುರಿತು ವಿವರಿಸಿ, ಪಾಕಿಸ್ತಾನದ ಐಎಸ್‍ಐ ಪ್ರಯೋಜಿತ ಮತ್ತು ತರಬೇತಿ ಪಡೆದ ಭಯೋತ್ಪಾದಕ ಘಟಕಗಳೊಂದಿಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಅಲ್ಲದೆ ಅಂಡರ್‍ವಲ್ರ್ಡ್ ನೀಮತ ಇವರನ್ನು ನಿಯಂತ್ರಿಸಲಾಗುತ್ತಿತ್ತು. ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರಣಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *