Ad Widget .

ಟೂತ್ ಪೇಸ್ಟ್ ಎಂದು ಇಲಿಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ| ಆಮೇಲೇನಾಯ್ತು?

ಟೂತ್​ ಪೇಸ್ಟ್​​ ಎಂದು ತಪ್ಪಾಗಿ ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. 18 ವರ್ಷದ ಅಫ್ಸಾನಾ ಖಾನ್​ ಎಂಬ ಯುವತಿ ಮೃತ ದುರ್ದೈವಿ. ಮುಂಬೈನ ಧಾರವಿ ಪ್ರದೇಶದಲ್ಲಿ ಕುಟುಂಬದವರೊಂದಿಗೆ ವಾಸಿಸುತ್ತಿದ್ದ ಈಕೆ ಬೆಳಗ್ಗೆ ಟೂತ್​ ಪೇಸಟ್​ ಎಂದು ಇಲಿ ಪಾಷಾಣವನ್ನು ಹಲ್ಲುಜ್ಜಲು ಬಳಸಿದ ಪರಿಣಾಮ ಸಾವನ್ನಪ್ಪಿದ್ದಾಳೆ.

Ad Widget . Ad Widget .

ಬೆಳಗ್ಗೆ ನಿದ್ದೆಗಣ್ಣಿನಲ್ಲಿ ಎದ್ದ ಅಫ್ಸಾನಾ ಖಾನ್​, ಹಲ್ಲುಜ್ಜಲು ತೆರಳಿದ್ದಾಳೆ. ಈ ವೇಳೆ ಕೈಗೆ ಸಿಕ್ಕ ಇಲಿ ಪಾಷಾಣವನ್ನು ಟೂತ್​ ಪೇಸ್ಟ್​​ ಎಂದು ಭಾವಿಸಿ ಟೂತ್​ ಬ್ರಶ್​ಗೆ ಹಾಕಿ ಅದರಲ್ಲಿ ಹಲ್ಲು ತೊಳೆದಿದ್ದಾಳೆ. ತಕ್ಷಣವೇ ಆಕೆಗೆ ಏನೋ ವ್ಯತ್ಯಾಸ ಅರಿತಂತಾಗಿದೆ. ನೋಡಿದಾಗ ಇಲಿ ಪಾಷಾಣವೆಂದು ಗೊತ್ತಾಗಿದೆ. ಕೂಡಲೆ ಉಗುಳಿ ಬಾಯಿ ತೊಳೆದಳು. ಅಷ್ಟರಲ್ಲಾಗಲೇ ಆಕೆಗೆ ತಲೆ ಸುತ್ತು ಬಂದು ಕೆಳಕ್ಕೆ ಬಿದ್ದಿದ್ದಾಳೆ.

Ad Widget . Ad Widget .

ಕೆಳಕ್ಕೆ ಬಿದ್ದ ಅಫ್ಸಾನಾ ಖಾನ್​ ಕಂಡು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ತಡವಾಗಿದ್ದರಿಂದ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ವೈದ್ಯರು ಆಕೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದರಾದರೂ ಎರಡು ದಿನಗಳ ನಂತರ ಅಫ್ಸಾನಾ ಖಾನ್​ ಮೃತಪಟ್ಟಿದ್ದಾಳೆ.

ಅಫ್ಸಾನಾ ಖಾನ್​ ಕಲಿಕೆಯಲ್ಲಿ ಮುಂದಿದ್ದಳು. ಆಕೆಯ ಮೇಲೆ ಮನೆಯವರಿಗೆ ಭರವಸೆಯಿತ್ತು. ಮುಂದೊಂದು ದಿನ ನಮ್ಮನ್ನು ಆಕೆ ಚೆನ್ನಾಗಿ ನೋಡಿಕೊಳ್ಳಲಿದ್ದಾಳೆ ಎಂಬುದು ಅವರಲ್ಲಿತ್ತು. ಆದರೆ ಎಡವಟ್ಟಿನಿಂದಾಗಿ ಅಫ್ಸಾನಾ ಖಾನ್​ ಸಾವನ್ನಪ್ಪಿದ್ದಾಳೆ.

Leave a Comment

Your email address will not be published. Required fields are marked *