Ad Widget .

ಮಂಗಳೂರು: ‘ ಇಂಡಿಯಾ ಡಿಟೆಕ್ಟಿವ್ಸ್ ‘ವೆಬ್ ಸರಣಿಯಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್…!

ಮಂಗಳೂರು: ವಿಶ್ವದ ಒಟಿಟಿ ದೈತ್ಯ ಕಂಪನಿ ನೆಟ್​ಫ್ಲಿಕ್ಸ್ ಹಲವಾರು ಡಾಕ್ಯುಮೆಂಟರಿ ಹಾಗೂ ವೆಬ್​ ಸಿರೀಸ್ ಗಳನ್ನು ಹೊರತರುತ್ತಿದೆ. ಇದೀಗ ಹೊಸ ವೆಬ್ ಸರಣಿಯ ಮುಖಾಂತರ ಕ್ರೈಂ ಲೋಕದ ನೈಜ ಕಥೆಯನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದೆ. ಕರ್ನಾಟಕದಲ್ಲಿ ನಡೆದ ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್​ಫ್ಲಿಕ್ಸ್ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್, ಇಂಡಿಯಾ ಡಿಟೆಕ್ಟಿವ್ಸ್’ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22ಕ್ಕೆ ಬಿಡುಗಡೆಗೊಳ್ಳಲಿದ್ದು, ನೆಟ್​ಫ್ಲಿಕ್ಸ್​ನಲ್ಲಿ ತನ್ನ ಬಳಕೆದಾರರಿಗೆ ವೀಕ್ಷಿಸಲು ಲಭ್ಯವಾಗಲಿದೆ.

Ad Widget . Ad Widget .

ಲಂಡನ್ ಮೂಲದ ನೆಟ್‌ಫ್ಲಿಕ್ಸ್ ತಂಡವು 2019-20ರಲ್ಲಿ ಬೆಂಗಳೂರಿನಲ್ಲಿ ಅಂದಿನ ಪೊಲೀಸ್ ಕಮೀಷನರ್ ಆಗಿದ್ದ ಭಾಸ್ಕರ್ ರಾವ್ ಅವರನ್ನು ಸಂಪರ್ಕಿಸಿ ಅಪರಾಧ ಕೃತ್ಯಗಳ ನೈಜ ಘಟನೆಗಳ ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸಲು ಅನುಮತಿ ಕೇಳಿತ್ತು . ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆ, ನಂದಿನಿ ಲೇಔಟ್ ಪೊಲೀಸ್ ಠಾಣೆ ಮತ್ತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಮೂರು ಕ್ರೈಂಗಳು ಈ ವೆಬ್ ಸೀರಿಸ್​ನ ಪ್ರಮುಖ ಕಥಾನಕವಾಗಿದೆ.

Ad Widget . Ad Widget .

ವೆಬ್ ಸರಣಿ ಕುರಿತಾಗಿ ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಚಿತ್ರೀಕರಣಕ್ಕಾಗಿ ಲಂಡನ್ ನ ಕ್ಲಾರಾ ಮತ್ತು ಜಾನ್ ಬಂದಿದ್ದು ಇವರೊಂದಿಗೆ ರಿಚಾ, ನವೀನ್ ಸೇರಿ ಐದಾರು ಜನರು ಬಂದಿದ್ದರು. ಆ ಸಂದರ್ಭ ನಾನು ಬೆಂಗಳೂರು ವಿಭಾಗದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ನಾನು ಮಾತ್ರವಲ್ಲದೆ ವೈಟ್ ಫೀಲ್ಡ್ ಡಿಸಿಪಿ ಅನುಚೇತ್, ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್, ಸುಬ್ರಹ್ಮಣ್ಯ ನಗರದ ಸಬ್ ಇನ್ಸ್‌ಪೆಕ್ಟರ್ ಲತಾ, ಸಂಜಯ್ ನಗರ ಸಬ್ ಇನ್ಸ್‌ಪೆಕ್ಟರ್ ರೂಪಾ ಸೇರಿದಂತೆ ಪೊಲೀಸ್ ತಂಡ ಜತೆಯಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಸಿರೀಸ್ ರೂಪದಲ್ಲಿ ಚಿತ್ರೀಕರಿಸಲಾಗಿದೆ.

ಈ ವೆಬ್ ಸರಣಿಗಾಗಿ ರಿಯಲ್ ಟೈಮ್ ಬೇಸಿಸ್‍ ನಲ್ಲಿ ಶೂಟಿಂಗ್ ನಡೆದಿದ್ದು, ಯಾವುದೇ ಫಿಕ್ಷನ್ ಅಥವಾ ಇದಕ್ಕಾಗಿ ಸೀನ್ ಕ್ರಿಯೇಟ್ ಮಾಡಲಾಗಿಲ್ಲ. ಒಂದು ಅಪರಾಧ ಕೃತ್ಯ ನಡೆದಾಗ ಪೊಲೀಸರ ತಂಡ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಘಟನಾವಳಿಯನ್ನು ಒಳಗೊಂಡು ಚಿತ್ರೀಕರಣ ನಡೆಸಲಾಗಿದೆ ಎಂ. ಚಿತ್ರತಂಡ ಕೇವಲ ಪ್ರಕರಣಗಳನ್ನು ಚಿತ್ರಕ್ಕಾಗಿ ಮಾತ್ರ ನೋಡುತ್ತಿರಲಿಲ್ಲ. ಆ ಘಟನಾವಳಿಗಳ ಬಗ್ಗೆ ಫೀಲ್ ಮಾಡುತ್ತಿದ್ದರು. ಅದೆಷ್ಟೋ ಕಡೆ ಚಿತ್ರ ತಂಡದ ಸದಸ್ಯರು ಕಣ್ಣೀರನ್ನು ಹಾಕುವುದನ್ನು ನಾನು ಗಮನಿಸಿದ್ದೇನೆ.

ಸುಮಾರು 6ರಿಂದ 8 ತಿಂಗಳ ಕಾಲ ಆ ತಂಡ ರಾತ್ರಿ ಹಗಲು ಬಿಡದೆ ದಿನದ 24 ಗಂಟೆ ಕೂಡ ನಮ್ಮ ಜೊತೆ ಕ್ರೈಂ ನಡೆದ ಜಾಗಗಳಿಗೆ ಬರುತ್ತಿದ್ದರು. ಪ್ರೀ ಪ್ರೋಡಕ್ಷನ್ ಗೆ ಇಷ್ಟು ಸಮಯ ತೆಗೆದುಕೊಂಡವರು ಪೋಸ್ಟ್ ಪ್ರೊಡಕ್ಷನ್ ಗೆ ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಅವರು ಆಗ ಏನು ಮಾಡುತ್ತಿದ್ದರು ಎಂದು ತಿಳಿಯುತ್ತಿರಲಿಲ್ಲ. ಆದರೆ, ಟ್ರೈಲರ್ ನೋಡಿದಾಗ ರಿಯಲ್ ಟೈಮ್ ಶೂಟಿಂಗ್ ಗಾಗಿ ಅವರು ಪಟ್ಟ ಕಷ್ಟ ಈಗ ಔಟ್​ಪುಟ್​ ನಲ್ಲಿ ತಿಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *