Ad Widget .

ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವಾ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಶ್ರೇಣಿ

ಮಂಗಳೂರು: ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಇದರಲ್ಲಿ ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವ ದೇಶಕ್ಕೆ ಪ್ರಥಮ ಶ್ರೇಣಿ ಪಡೆದಿದ್ದಾರೆ.

Ad Widget . Ad Widget .

ರುತ್ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರಾಂಕ್ ಪಡೆದ ಪ್ರಥಮ ಮಂಗಳೂರಿಗರಾಗಿದ್ದಾರೆ, ಈಕೆ ಮಂಗಳೂರಿನ ರೋಸಿ ಮಾರಿಯಾ ಡಿಸಿಲ್ಲಾ ಮತ್ತು ರಫರ್ಟ್ ಡಿಸಿಲ್ಲಾ ದಂಪತಿಯ ಪುತ್ರಿ.

Ad Widget . Ad Widget .

ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಶ್ರೇಣಿ ಪಡೆದ ರುತ್ ಇತಿಹಾಸ ಸೃಷ್ಟಿಸಿದ್ದು, ಕಳೆದ ಕೆಲ ವರ್ಷಗಳಿಂದ ಪರೀಕ್ಷೆಯನ್ನು ಎದುರಿಸಿದ್ದ ಆಕೆ ಛಲ ಬಿಡದೆ ಮತ್ತೆ ಪರೀಕ್ಷೆಯನ್ನು ಎದುರಿಸಿ ಸಾಧಿಸಿ ತೋರಿಸಿದ್ದಾರೆ ಎಂದು ಆಕೆಯ ಮಾರ್ಗದರ್ಶಕ ಹಾಗೂ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ (ಸಿಐಎಲ್)ನ ಸಂಚಾಲಕ, ನಂದಗೋಪಾಲ್ ಅಭಿಪ್ರಾಯ ತಿಳಿಸಿದ್ದಾರೆ.

ಸಿಎ ಪರೀಕ್ಷೆಯ ಮೂರನೇ ಪ್ರಯತ್ನದಲ್ಲಿಯೇ ರುತ್ ಕ್ಲ್ಯಾರ್ ಅವರು ಪ್ರಥಮ ಶ್ರೇಣಿ ಪಡೆದಿರುವುದು ಮಂಗಳೂರಿಗೆ ಹಮ್ಮೆ ತರಿಸಿದೆ. ಪೋಷಕರು, ಮಾರ್ಗದರ್ಶಕರು ಹಾಗೂ ತರಬೇತುದಾರರು ರುತ್ ಅವರ ಸಾಧನೆಯನ್ನು ಅಭಿನಂದಿಸುತ್ತಿದ್ದು, ಮನೆಯಲ್ಲಿ ಸಡಗರ ಮನೆ ಮಾಡಿದೆ.

Leave a Comment

Your email address will not be published. Required fields are marked *