Ad Widget .

ಭೀಕರ ಅಪಘಾತ| ಪ್ಲೈ ಓವರ್ ನಿಂದ ಬಿದ್ದು ಯುವತಿಯರಿಬ್ಬರ ದಾರುಣ ಸಾವು

ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನಿಂದ ಬಿದ್ದು ಯುವತಿಯರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Ad Widget . Ad Widget .

ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಕಾರು ಫ್ಲೈ ಓವರ್ ಗೆ ಡಿಕ್ಕಿ ಹೊಡೆದು ತುತ್ತ ತುದಿಯಲ್ಲಿ ನಿಂತಿದೆ, ಆದರೆ ಪರಿಣಾಮ ಯುವತಿಯರಿಬ್ಬರು ಫ್ಲೈ ಓವರ್ ನಿಂದ ಬಿದ್ದು ಸಾವನ್ನಪ್ಪಿದ್ದಾರೆ.

Ad Widget . Ad Widget .

ಓವರ್ ಟೇಕ್ ಮಾಡಲು ಹೋಗಿ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂ ಆಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನಿಂದ ಬಿದ್ದ ಪರಿಣಾಮ ಇಬ್ಬರು ಯುವತಿಯರ ದೇಹ ಛಿದ್ರ ಛಿದ್ರವಾಗಿದೆ , ಘಟನೆ ನಡೆದ ಸ್ಥಳಕ್ಕೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತದಲ್ಲಿ ಕಾರು ಸಹ ಜಖಂ ಗೊಂಡಿದ್ದು ಫೈಓವರ್ ನ ತುದಿಗೆ ಬಂದು ನಿಂತಿದೆ. ಇನ್ನು ಸ್ವಲ್ಪ ವಾಲಿದ್ದರೂ ಕಾರು ಸಹ ಫ್ಲೈಓವರ್ ಮೇಲಿನಿಂದ ಕೆಳಗೆ ಬೀಳುವ ಸಂಭವವಿತ್ತು ಎನ್ನಲಾಗಿದೆ.

ಅಪಘಾತದಲ್ಲಿ ಮೃತ ಪಟ್ಟಿರುವ ಪ್ರೀತಮ್ ಕುಮಾರ್ ಹಾಗೂ ಕೃತಿಕಾ ಇಬ್ಬರು ಮೂಲತಃ ಚೆನ್ನೈ ಮೂಲದವರು ಎಂದು ತಿಳಿದು ಬಂದಿದೆ. 30 ವರ್ಷದ ಪ್ರೀತಮ್ ಕುಮಾರ್ ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗವನ್ನು ಮಾಡುತ್ತಿದ್ದು, ಕೃತಿಕಾ ಐಟಿ ಕಂಪನಿ ಉದ್ಯೋಗಿಯಾಗಿದ್ದರು.

ಪ್ರೀತಮ್ ಹಾಗೂ ಕೃತಿಕಾ ಕಳೆದ 5 ವರ್ಷದಿಂದ ಪರಸ್ಪರ ಸ್ನೇಹಿತರು. ಅಪಘಾತದಿಂದ ಕಾರು ಚಾಲಕ ಅಸ್ಪತ್ರೆಗೆ ದಾಖಲಾಗಿದ್ದು ಅವರ ಚೇತರಿಕೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.

Leave a Comment

Your email address will not be published. Required fields are marked *