Ad Widget .

ಸುಳ್ಯ| ಹಿಂಸಾತ್ಮಕವಾಗಿ ಅಕ್ರಮ ಜಾನುವಾರು ಸಾಗಾಟ| ಆರೋಪಿ ಖಾಕಿ ಬಲೆಗೆ|

ಸುಳ್ಯ: ಓಮ್ನಿ ಕಾರೊಂದರಲ್ಲಿ ಅಕ್ರಮವಾಗಿ ಎರಡು ದನಗಳನ್ನು ಸಾಗಾಟ ಮಾಡುತ್ತಿದ್ದಾಗ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದು, ಓರ್ವ ಆರೋಪಿ ಪೊಲೀಸ್ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

Ad Widget . Ad Widget .

ಕಾರಿನಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸಾಗಾಟಗಾರರು ತಪ್ಪಿಸಿಕೊಳ್ಳಲೆತ್ನಿಸಿದ್ದು ಈ ವೇಳೆ ವಾಹನ ನಗರದ ಜಟ್ಟಿಪಳ್ಳ ಸಮೀಪ ಕಂಪೌಂಡಿಗೆ ಗುದ್ದಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸುಳ್ಯ ಮತ್ತು ಎಸ್. ಐ.ಯವರು ಕಾರನ್ನು ತಡೆಗಟ್ಟಿ ಓರ್ವ ಆರೋಪಿಯನ್ನು ವಶಕೊಂಡಿದ್ದಾರೆ.

Ad Widget . Ad Widget .

ಮೂರು ಮಂದಿ ಕಾರಿನಲ್ಲಿ ದನಗಳನ್ನು ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಪೋಲೀಸರು ಕಾರನ್ನು ಅಡ್ಡ ಗಟ್ಟಿ ನಿಲ್ಲಿಸಲು ಸೂಚನೆ ನೀಡಿದ್ದು, ಸಂದರ್ಭ ಚಾಲಕನು ಕಾರನ್ನು ತಿರುಗಿಸಿ ಮತ್ತೆ ಕಾನತ್ತಿಲ ಕಡೆಗೆ ಹೋಗಲು ಯತ್ನಿಸಿದಾಗ ಮಾರುತಿ ಅಪಾರ್ಟ್ ಮೆಂಟ್ ನ ಕಂಪೌಂಡಿಗೆ ಡಿಕ್ಕಿ ಹೊಡೆಯಿತು. ಚಾಲಕ ಕಾರಿನಿಂದಿಳಿದು ಪರಾರಿಯಾದಾಗ ಕಾರು ಹಿಂಬದಿ ಚಲಿಸಿ ಗೋಡೆಗೆ ತಾಗಿ ನಿಂತಿತು.ಅಷ್ಟರಲ್ಲಿ ಅಲ್ಲಿ ಜಮಾಯಿಸಿದವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಮೂವರಲ್ಲಿ ಇಬ್ಬರು ಪರಾರಿಯಾಗಿ ಒಬ್ಬ ಆರೋಪಿಯನ್ನು ಪೋಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಸ್ಥಳದಲ್ಲಿ ಬಜರಂಗದಳ ಕಾರ್ಯಕರ್ತರು ಮತ್ತು ಸ್ಥಳೀಯರು ಸೇರಿದ್ದರು. ಓಮ್ನಿ ಕಾರನ್ನು ಜಾನುವಾರು ಸಮೇತ ಪೋಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಎರಡು ದನಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗಿತ್ತು ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *