Ad Widget .

ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ, ಅಂಗಾಂಗ ಮುಟ್ಟಿ ಪೈಶಾಚಿಕ ಕೃತ್ಯ

ಯಾದಗಿರಿ: ಗುಂಪೊಂದು ಮಹಿಳೆಯನ್ನು ನಗ್ನಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಾಂಗ ಮುಟ್ಟಿ ಪೈಶಾಚಿಕ ಕೃತ್ಯ ಎಸಗಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಪಾಪಿಗಳು ಮಹಿಳೆ ಜೊತೆ ವಿಕೃತ ವರ್ತನೆ ನಡೆಸಿದ್ದಾರೆ. ಈ ಘಟನೆ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಮಧ್ಯೆ ನಡೆದಿದೆ ಎನ್ನಲಾಗುತ್ತಿದೆ.

Ad Widget . Ad Widget .

5-6 ಜನರ ಗುಂಪಿನಿಂದ ಮಹಿಳೆಯ ಮೇಲೆ ದೌರ್ಜನ್ಯ ನಡೆದಿದ್ದು, ಮಹಿಳೆಗೆ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ಹಲ್ಲೆಗೊಳಗಾದ ಮಹಿಳೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ವೈರಲ್ ಆದ ವಿಡಿಯೋದಲ್ಲಿ ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ದು 5-6 ಜನರ ಗುಂಪು ಮಹಿಳೆಯ ಮೇಲೆ ಸ್ವಲ್ಪವೂ ಕನಿಕರ ತೋರಿಸದೆ ಅಮಾನವೀಯತೆಯಿಂದ ವರ್ತಿಸಿದ್ದಾರೆ.

Ad Widget . Ad Widget .

ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ಮಧ್ಯೆ ಬರುವ ಜಮೀನೊಂದರಲ್ಲಿ ವಾಹನದ ಹೆಡ್‌ ಲೈಟ್, ಮೊಬೈಲ್ ಟಾರ್ಚ್ ಹಾಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಯುವಕನೋರ್ವ ನನ್ನಿಂದ 10-15 ಸಾವಿರ ಹಣ ಪಡೆದಿದ್ದಾಳೆ ಅಂತ ಸಿಟ್ಟಿನಿಂದ ಮಹಿಳೆಯನ್ನು ಹೊಡೆಯುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ‌. ಹಾಗೂ ಹೊಡೆಯುವಾಗ ಕೂಗಿದರೆ ಪೆಟ್ಟಿಗೆಯಲ್ಲಿ ಹಾಕಿ ಸುಡುವುದಾಗಿ ಯುವಕರ ಗುಂಪು ಮಹಿಳೆಗೆ ಬೆದರಿಕೆ ಹಾಕಿ ಮನ ಬಂದಂತೆ ವರ್ತಿಸಿದ್ದಾರೆ. ಇಷ್ಟೆಲ್ಲಾ ಆದರೂ ಘಟನೆ ಬಗ್ಗೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲ.

ಮಹಿಳೆ ಕೈಮುಗಿದು ಕಣ್ಣೀರು ಹಾಕಿದ್ರು ಬಿಡದೆ ನಗ್ನಗೊಳಿಸಿ ಆಕೆಯನ್ನ ಹೊಡೆಯುವ ನೆಪದಲ್ಲಿ ಅಂಗಾಂಗಗಳನ್ನ ಮುಟ್ಟಿ ಚಿತ್ರಹಿಂಸೆ ನೀಡಿದ್ದಾರೆ. ಇನ್ನು ಹಲ್ಲೆಕೋರನೊಬ್ಬ ಮೊಬೈಲ್ನಲ್ಲಿ ಫೋಟೋ ತೋರಿಸಿ, ಈಕೆ ನೀನೆ ಅಲ್ವಾ? ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸುತ್ತಾನೆ. ಈ ವೇಳೆ ಮಹಿಳೆ ಅದು ನಾನಲ್ಲ, ನನಗೆ ಏನು ಗೊತ್ತಿಲ್ಲ ಎಂದು ಎಷ್ಟೇ ರೋಧಿಸಿದರು ಯುವಕರ ಗುಂಪು ಮಹಿಳೆ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ.

Leave a Comment

Your email address will not be published. Required fields are marked *