Ad Widget .

ರಾಜಸ್ಥಾನ – ಮಹಿಳಾ ಕಾನ್ಸ್​ಟೇಬಲ್ ಜೊತೆ ಡಿಎಸ್ ಪಿ ರಾಸಲೀಲೆ ವಿಡಿಯೋ ವೈರಲ್ – ಪೋಕ್ಸೋ ಕಾಯ್ದೆಯಡಿ ಅಧಿಕಾರಿ ಆರೆಸ್ಟ್

ರಾಜಸ್ಥಾನ : ಮಹಿಳಾ ಕಾಸ್ಸ್ಟೇಬಲ್ ಜೊತೆ ಡಿಎಸ್ ಪಿ ಅಧಿಕಾರಿಯೊಬ್ಬ ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆಸಿದ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರು ವರ್ಷದ ಮಗುವಿನ ಮುಂದೆಯೆ ನಡೆಸಿದ ರಾಸಲೀಲೆ ಹಿನ್ನಲೆ ಪೊಲೀಸ್ ಅಧಿಕಾರಿಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಅಜ್ಮೇರ್ ಜಿಲ್ಲೆಯ ಬೇವಾರ್ ನಲ್ಲಿ ಆರೋಪಿ ಅಧಿಕಾರಿ ಹೀರಾ ಲಾಲ್ ಸೈನಿ, ಸರ್ಕಲ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಇದೇ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ಸಹ ಕೆಲಸ ಮಾಡುತ್ತಿದ್ದರು. ಹೀರಾಲಾಲ್ ಸೈನಿ ಅವರನ್ನು ಗುರುವಾರ ರಾತ್ರಿ ರೆಸಾರ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದ್ದು, ಇಂದು ಬಂಧಿಸಲಾಗಿದೆ ಎಂದು ಎಡಿಜಿಪಿ(ಎಟಿಎಸ್ & ಎಸ್ಒಜಿ) ಅಶೋಕ್ ರಾಥೋಡ್ ಅವರು ಪಿಟಿಐಗೆ ತಿಳಿಸಿದ್ದಾರೆ. ಅಧಿಕಾರಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ad Widget . Ad Widget .

ಸೈನಿ ಈಜುಕೊಳದಲ್ಲಿ ಕಾನ್‌ಸ್ಟೇಬಲ್ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳಾ ಕಾನ್‌ಸ್ಟೆಬಲ್ ನ ಆರು ವರ್ಷದ ಮಗ ಅದೇ ಕೊಳದಲ್ಲೇ ಇರುತ್ತದೆ. ಇನ್ನೂ ಮಹಿಳಾ ಕಾನ್ಸ್​ಟೇಬಲ್​​ ಬಂಧನವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಹಿಳಾ ಕಾನ್ಸ್​ಟೇಬಲ್​ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಮಹಿಳಾ ಕಾನ್‌ಸ್ಟೆಬಲ್ ತನ್ನ ಅಪ್ರಾಪ್ತ ಮಗುವಿನ ಮುಂದೆಯೇ ಪೊಲೀಸ್ ಅಧಿಕಾರಿಯ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಸುಮಾರು ಎರಡು ನಿಮಿಷಗಳ ವಿಡಿಯೋವೊಂದು ವೈರಲ್​​ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದಂತೆ ಸೆಪ್ಟೆಂಬರ್ 8 ರಂದು ಪ್ರಾಥಮಿಕ ತನಿಖೆಯ ನಂತರ ಅಧಿಕಾರಿ ಮತ್ತು ಮಹಿಳಾ ಕಾನ್ಸ್ಟೇಬಲ್ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು.

Leave a Comment

Your email address will not be published. Required fields are marked *