ಮ್ಯಾನ್ಮಾರ್: ಕಣ್ಣು ಕಾಣದ ತನ್ನ ತಂದೆ ತಾಯಿಯಂದಿರನ್ನು ಹೆಗಲ ಮೇಲೆ ಬುಟ್ಟಿಯಲ್ಲಿ ಕುಳ್ಳರಿಸಿಕೊಂಡು ತೀರ್ಥಯಾತ್ರೆ ಮಾಡಿರುವ ಶ್ರವಣ ಕುಮಾರದ ಕಥೆ ನೀವೆಲ್ಲಾ ಕೇಳಿರುತ್ತೀರಿ. ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ಮ್ಯಾನ್ಮಾರ್‌ನಲ್ಲಿ ನಡೆದಿದೆ.
ಮ್ಯಾನ್ಮಾರ್‌ನಿಂದ ಒಕ್ಕಲೆಬ್ಬಿಸಿದ ಮೇಲೆ ಬಾಂಗ್ಲಾದೇಶಕ್ಕೆ ತೆರಳಲೇಬೇಕಾದ ಅನಿವಾರ್ಯತೆ ಕೆಲವು ನಿರಾಶ್ರಿತರಿಗೆ ಉಂಟಾಗಿದೆ. ಆದರೆ ತಮ್ಮೂರಿಗೆ ಸಾಗಲು ಕೈಯಲ್ಲಿ ಕಾಸಿಲ್ಲದೇ ಕಷ್ಟಪಡುತ್ತಿರುವವರು ಅದೆಷ್ಟೋ ಮಂದಿ. ಅಂಥದ್ದೇ ಒಬ್ಬ ನಿರಾಶ್ರಿತ ತನ್ನ ವಯಸ್ಸಾದ ತಂದೆ ತಾಯಿಯಂದಿರನ್ನು ಭುಜದ ಮೇಲೆ ಕುಳ್ಳರಿಸಿಕೊಂಡು ನಡೆದಿದ್ದಾನೆ ಎನ್ನಲಾಗಿದ್ದು, ಅದರ ಫೋಟೋ ವೈರಲ್ ಆಗಿದೆ.
ವಯಸ್ಸಾದ ಅಪ್ಪ-ಅಮ್ಮನನ್ನು ಏಳು ದಿನಗಳ ಕಾಲ ತನ್ನ ಭುಜದ ಮೇಲೆ ಡಬಲ್ ಬಾಸ್ಕೆಟ್‌ನಲ್ಲಿ ಈತ ಹೊತ್ತು ಸಾಗಿದ್ದಾನೆ ಎನ್ನುವ ಕ್ಯಾಪ್ಷನ್ ಇರುವ ಫೋಟೋ ಜಾಲತಾಣದಲ್ಲಿ ವೈರಲ್ ಆಘಿದೆ. ಆರ್‌ಪಿಜಿ ಗ್ರೂಪ್ ಸಮೂಹದ ಅಧ್ಯಕ್ಷ ಹರ್ಷವರ್ಧನ್ ಗೋಯೆಂಕಾ ಈ ಫೋಟೋ ಹಂಚಿಕೊಂಡಿದ್ದಾರೆ.
ಆಧುನಿಕ ದಿನದ ಶ್ರವಣ ಕುಮಾರ್ 7 ದಿನಗಳ ಕಾಲ ಚಲಿಸಲು ಸಾಧ್ಯವಾಗದ ತನ್ನ ವೃದ್ಧ ತಾಯಿ ಮತ್ತು ತಂದೆಯನ್ನು ಬುಟ್ಟಿಯಲ್ಲಿ ಕರೆದೊಯ್ಯುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ.