Ad Widget .

ಮತ್ತೊಬ್ಬನೊಂದಿಗಿತ್ತು‌ ಆಕೆಗೆ ಅನೈತಿಕ ಸಂಬಂಧ| ಇದನ್ನೇ ಸರಿಯಾಗಿ ಬಳಸಿಕೊಂಡ ಖತರ್ನಾಕ್ ಮಗಳು| ಏನು ಗೊತ್ತಾ ಈ ವಿಚಿತ್ರ ಸ್ಟೋರಿ?

ಪುಣೆ : ಬಿತ್ತಿದಂತೆ ಬೆಳೆ‌, ತಾಯಿಯಂತೆ ಮಗಳು‌ ಎಂಬ ಗಾದೆ ಮಾತು ನೀವೆಲ್ಲಾ ಕೇಳಿರ್ತೀರಿ. ಈ ಗಾದೆಗೆ ಹೋಲುವಂತಹ ಪ್ರಕರಣವೊಂದು ನಡೆದಿದೆ. ತಾಯಿ ಮತ್ತೋರ್ವ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಇದನ್ನೇ ಮಗಳು ತನ್ನ ಬಂಡವಾಳವಾಗಿ ಮಾಡಿಕೊಂಡಿದ್ದಾಳೆ.

Ad Widget . Ad Widget .


21 ವರ್ಷದ ಮಗಳಿಗೆ ಅಮ್ಮನ ಅನೈತಿಕ ಸಂಬಂಧದ ವಿಚಾರ ಗೊತ್ತಾಗಿದೆ. ಆದರೆ ಮಗಳು ಇದನ್ನು ದೊಡ್ಡದು ಮಾಡಲು ಹೋಗಿಲ್ಲ. ಬದಲಾಗಿ ಅಮ್ಮನ ಜತೆ ಸಂಬಂಧ ಹೊಂದಿದ್ದ ವ್ಯಕ್ತಿಯ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿಗೆ ಇಳಿದಿದ್ದಾಳೆ.

Ad Widget . Ad Widget .

ತಾಯಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಮಗಳಿಗೆ ಅನುಮಾನ ಬಂದಿದೆ. ತಾಯಿಯ ವಾಟ್ಸಪ್ ಹ್ಯಾಕ್ ಮಾಡಿಕೊಂಡ ಮಗಳು ಅಲ್ಲಿ ರವಾನೆಯಾಗುತ್ತಿದ್ದ ಸಂದೇಶಗಳನ್ನು ಚೆಕ್ ಮಾಡಿದ್ದಾಳೆ. ಇದರಿಂದ ತಾಯಿಯ ಅನೈತಿಕ ಸಂಬಂಧ ಆಕೆಗೆ‌ ಕನ್ಫರ್ಮ್ ಆಗಿದೆ.

ತಾಯಿಯ ವಾಟ್ಸಪ್ ಚಾಟ್ ನಲ್ಲಿ ನಗ್ನ ವಿಡಿಯೋ ಮತ್ತು ಅಶ್ಲೀಲ್ ಚಾಟ್ ಸಿಕ್ಕಿದೆ. ಇದನ್ನೇ ಬಳಸಿಕೊಂಡು ತನ್ನ ಪ್ರಿಯಕರನ ಜತೆಗೂಡಿ ಅಮ್ಮನ ಪ್ರಿಯಕರನಿಗೆ ಬ್ಲಾಕ್ ಮೇಲ್ ಮಾಡಿದ್ದು 15 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾಳೆ. ತನ್ನ ಪ್ರಿಯಕರನ ಮೂಲಕ ಯುವತಿ ಕಾರ್ಯಾಚರಣೆ ನಡೆಸಿದ್ದಾಳೆ. ಈಗ ಹದಿನೈದು ಲಕ್ಷ ನಂತರ ತಿಂಗಳಿಗೆ ಒಂದು ಲಕ್ಷ ರೂ. ನೀಡಬೇಕು ಎಂದು ಮಾತುಕತೆಯನ್ನು ಮಾಡಿಸಿದ್ದಾಳೆ. ಇಲ್ಲವಾದರೆ ವಿಡಿಯೋ ಮತ್ತು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಭಯ ಹುಟ್ಟಿಸಲು ಹೇಳಿದ್ದಾಳೆ.

ಮೊದಲಿಗೆ ಹೆದರಿದ ವ್ಯಕ್ತಿ ತನ್ನ ಕಾರು ಬೈಕ್ ಅಡ ಇಟ್ಟು ಹಣ ತಂದುಕೊಟ್ಟಿದ್ದ. ಇವರ ಬೇಡಿಕೆ ಮುಗಿಯುವ ತರಹ ಕಾಣಲಿಲ್ಲ. ನಂತರ ಆತ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಹಣ ಪಡೆಯಲು ಬಂದ ಮಗಳ ಬಾಯ್ ಪ್ರೆಂಡ್ ಮಿಥುನ್ ಗಾಯಕ್ವಾಡ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಂತರ ವಿಚಾರಣೆ ನಡೆಸಿದಾಗ ಮಗಳೇ ಖಳನಾಯಕಿ ಎಂಬ ವಿಚಾರ ಬಹಿರಂಗವಾಗಿದೆ. ಯುವತಿ ಹಾಗೂ ಪ್ರಿಯಕರ ಇದೀಗ ಬಂಧನಕ್ಕೆ ಒಳಗಾಗಿದ್ದಾರೆ.

Leave a Comment

Your email address will not be published. Required fields are marked *