ನದಿಗೆ ಬಿದ್ದ ಬಾಲಕ ಸಾವು| ರಕ್ಷಿಸಲು ಹೋದ ತಾಯಿಯೂ ನೀರುಪಾಲು

ಉಡುಪಿ: ನದಿಗೆ ಬಿದ್ದು ತಾಯಿ ಮಗ ಇಬ್ಬರೂ ಸಾವನಪ್ಪಿರುವ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ಸಂಭವಿಸಿದೆ.

Ad Widget ... ..

ಮೃತರನ್ನು ನಾವುಂದದ ನೋಯೆಲ್ ಚುಂಗಿಗುಡ್ಡೆ ನಿವಾಸಿ ಶಾನ್‌ (11) ರೊಸಾರಿಯಾ(35) ಎಂದು ಗುರುತಿಸಲಾಗಿದೆ. ಇಬ್ಬರು ನದಿ ಪಕ್ಕದಲ್ಲಿ ಹೋಗುತ್ತಿದ್ದಾಗ ಬಾಲಕ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಈ ಸಂದರ್ಭ ಮಗುವನ್ನು ರಕ್ಷಿಸಲು ತಾಯಿಯೂ ನೀರಿಗೆ ಹಾರಿದ್ದು, ಇಬ್ಬರೂ ನೀರುಪಾಲಾಗಿದ್ದಾರೆ.

Ad Widget

ಘಟನೆ ನಡೆದ ಸ್ಥಳದಲ್ಲಿ ಶಾನ್‌ ಮೃತದೇಹ ಪತ್ತೆಯಾಗಿದ್ದು, ಬಳಿಕ ಅಗ್ನಿಶಾಮಕದಳದ ಸಿಬ್ಬಂದಿ ಮಹಿಳೆ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *