ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ’ಅದಾನಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ’ ಎಂದು ಬದಲಿಸಿದ್ದ ಏರ್ ಪೋರ್ಟ್ ನಿರ್ವಹಣೆ ಗುತ್ತಿಗೆ ಸಂಸ್ಥೆ ಅದಾನಿಯೂ ಮತ್ತೆ ಏರ್ ಪೋರ್ಟ್ ನ ಹಿಂದಿನ ಹೆಸರಿನಂತೆಯೇ ಬದಲಿಸಿದೆ ಎಂದು ಸಾಮಾಜಿಕ ಹೋರಾಟಗಾರ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ” ಸ್ಥಳೀಯರ ಹೋರಾಟಕ್ಕೆ ಯಶಸ್ಸು ದೊರೆದಿತ್ತು, ಅದಾನಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈಗ ಮತ್ತೆ ಮೊದಲಿನಂತೆಯೇ “ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಬದಲಿಸಿದೆ ಎಂದು ಹೇಳಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿದ ಬಳಿಕ ಅಲ್ಲಿನ ನಾಮಫಲಕವನ್ನು ಕಂಪೆನಿಯು ಬದಲಾಯಿಸಿತ್ತು. ಆದರೆ ಮಂಗಳೂರು ವಿಮಾನ ನಿಲ್ದಾಣ ಮತ್ತು ಅದಾನಿ ಕಂಪೆನಿ ನಡುವೆ ನಡೆದ ಒಡಂಬಡಿಕೆಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಇರಲಿಲ್ಲ ಎನ್ನುವುದು ಮಾಹಿತಿ ಹಕ್ಕಿನಿಂದ ತಿಳಿದುಬಂದಿತ್ತು
ಇದರ ಆಧಾರದಲ್ಲಿ ನಡೆಸಿದ ಕಾನೂನು ಹೋರಾಟದ ಫಲವಾಗಿ ಶುಕ್ರವಾರ ಕಂಪೆನಿಯು ವಿಮಾಣ ನಿಲ್ದಾಣದ ನಾಮಫಲಕದಿಂದ ಅದಾನಿ ಹೆಸರು ಕೈ ಬಿಟ್ಟು ಮೊದಲಿನಂತೆ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರು ನಾಮಫಲಕ ಅಳವಡಿಸಿದೆ. ಇದು ನಮ್ಮ ಕಾನೂನು ಹೋರಾಟಕ್ಕೆ ಸಂದ ಜಯ ಎಂದು ಹೇಳಿದ್ದಾರೆ.