Ad Widget .

10ವರ್ಷಗಳ್ಲಿ 25 ಬಾರಿ ಪರಪುರುಷನೊಂದಿಗೆ ಓಡಿ ಹೋದಳು| ಆದರೂ ಕಿರಿಕ್ ಮಾಡದೇ ಸ್ವೀಕರಿಸಿದ ಪತಿರಾಯ|

ಗುವಾಹಟಿ: ಓರ್ವ ಮಧ್ಯ ವಯಸ್ಸಿನ ಮಹಿಳೆಯೊಬ್ಬರು 25 ಬಾರಿ ಬೇರೆ-ಬೇರೆ ಪುರುಷರ ಜೊತೆ ಓಡಿ ಹೋದರೂ ಕೂಡ ಪತಿರಾಯ ಮಾತ್ರ ಅವನ್ನೆಲ್ಲಾ ಮರೆತು ಮತ್ತೆ ಮನೆಗೆ ಹಿಂದಿರುಗುತ್ತಿದ್ದ ಆಕೆಯನ್ನು ಸ್ವೀಕರಿಸುತ್ತಿದ್ದ ವಿಲಕ್ಷಣ ಘಟನೆಯೊಂದು ಅಸ್ಸಾಂ ನಲ್ಲಿ ನಡೆದಿದೆ.

Ad Widget . Ad Widget .

ಮಧ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯ ದೂರದ ಧಿಂಗ್ ಲಹ್ಕರ್ ಗ್ರಾಮದಲ್ಲಿ ಮೂರು ಮಕ್ಕಳ ತಾಯಿಯಾಗಿರುವ 40 ವರ್ಷದ ಮಹಿಳೆ, “ಕಳೆದ 10 ವರ್ಷಗಳಲ್ಲಿ 25 ಬಾರಿ ಬೇರೆ-ಬೇರೆ ಪುರುಷರೊಂದಿಗೆ ಪರಾರಿಯಾಗಿದ್ದಳು.

Ad Widget . Ad Widget .

ಈ ಬಗ್ಗೆ ಮಾತನಾಡಿರುವ ಆಕೆಯ ಪತಿ, 2011ರಲ್ಲಿ ನಾವು ಮದುವೆಯಾದ ಬಳಿಕ ಸುಮಾರು 25 ಬಾರಿ ಬೇರೆ ಪುರುಷರೊಂದಿಗೆ ಓಡಿ ಹೋಗಿದ್ದಳು. ಪ್ರತಿ ಬಾರಿ ಹಿಂದಿರುಗಿದ ಬಳಿಕವೂ ಮತ್ತೆ ಈ ರೀತಿ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಿದ್ದಳು. ಆದರೆ, ಮತ್ತೆ ಅದೇ ರೀತಿ ಮಾಡುತ್ತಿದ್ದಳು” ಎಂದು ಹೇಳಿದ್ದಾನೆ.

ಪರ ಪುರುಷರೊಂದಿಗೆ ಓಡಿ ಹೋಗಿ ಬಂದ ಬಳಿಕ ಸಂಬಂಧಿ ಮನೆಗೆ ಹೋಗಿ ಬಂದಿರುವುದಾಗಿ ಹೇಳುತ್ತಿದ್ದಳಂತೆ. ಮೂವರು ಮಕ್ಕಳಿರುವುದರಿಂದಾಗಿ ಆಕೆಯನ್ನು ಕ್ಷಮಿಸಿ, ಮತ್ತೆ ಮನೆಗೆ ಸೇರಿಸುತ್ತಿದ್ದೆವು ಎಂದು ಪತಿ ಹೇಳಿದ್ದಾನೆ.

ಸೆಪ್ಟೆಂಬರ್ 4ರಂದು ಆಕೆ 3 ತಿಂಗಳ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು ಬೇರೆ ಪುರುಷನ ಜೊತೆ ಓಡಿ ಹೋಗಿರುವ ವಿಷಯ ತಂದೆಯಿಂದ ತಿಳಿಯಿತು ಎಂದು ಹೇಳಿದ್ದಾನೆ. ಅವಳು ಯಾವಾಗ ಹಿಂತಿರುಗುತ್ತಾಳೋ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾನೆ.

ಮನೆಯಲ್ಲಿದ್ದ 22,000 ರೂ. ಹಣ ಹಾಗೂ ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳಂತೆ. ಆದರೆ, ಯಾರ ಜೊತೆ ಹೋಗಿದ್ದಾಳೆ ಎಂಬುದು ಮಾತ್ರ ತಿಳಿದಿಲ್ಲ ಎಂದು ಪತಿ ಹೇಳಿದ್ದಾನೆ.

ಇನ್ನೊಂದು ಕುತೂಹಲಕಾರಿ ಅಂಶವೆಂದರೆ, ಇಷ್ಟೊಂದು ಸಲ ಆಕೆ ಮನೆ ಬಿಟ್ಟು ಹೋದರೂ ಒಂದು ಬಾರಿಯೂ ಪತಿ ಪೊಲೀಸರಿಗೆ ದೂರು ನೀಡಿಲ್ಲವಂತೆ.

ಧಿಂಗ್ ಲಹ್ಕರ್ ಹಳ್ಳಿಯ ನೆರೆಹೊರೆಯವರ ಪ್ರಕಾರ, “ಮಹಿಳೆ ಹಳ್ಳಿಯ ಅನೇಕ ಯುವಕರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಮತ್ತು ವಿಭಿನ್ನ ಪ್ರೇಮಿಗಳೊಂದಿಗೆ ಓಡಿಹೋಗಿದ್ದಾಳೆ. ಕೆಲವು ವಾರ ಅಥವಾ ತಿಂಗಳುಗಳ ನಂತರ ಆಕೆ ತನ್ನ ಗಂಡನ ಮನೆಗೆ ಮರಳುತ್ತಿದ್ದಳು” ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *