ಬೆಂಗಳೂರು : 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನು ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ. ಅದ್ರಂತೆ, ಆಕ್ಟೋಬರ್ 10 ರಿಂದ ಈ ದಸರಾ ರಜೆ ಪ್ರಾರಂಭವಾಗಲಿದ್ದು, 20 ರವರೆಗೆ ಇರಲಿದೆ.
ಅಂದರೆ ಬರೋಬ್ಬರಿ 10 ದಿನಗಳ ದಸರಾ ರಜೆ ಘೋಷಿಸಲಾಗಿದೆ. ಈ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ.
ಇದರ ಜೊತೆಗೆ ಬೇಸಿಗೆ ರಜೆಯನ್ನೂ ಘೋಷಣೆ ಮಾಡಿದ್ದು, ಮುಂದಿನ ವರ್ಷ ಮೇ 1 ರಿಂದ ಮೇ 28 ರವರೆಗೆ ಬೇಸಿಗೆ ರಜೆ ಇರಲಿದೆ. ಅದ್ರಂತೆ, 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 223 ದಿನಗಳು ಕಲಿಕಾ ಪ್ರಕ್ರಿಯೆಗೆ ಲಭ್ಯವಿದ್ದು, ಮಕ್ಕಳಿಗೆ 66 ದಿನಗಳ ಕಾಲ ರಜೆಗಳನ್ನ ನೀಡಲಾಗಿದೆ.