Ad Widget .

ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಮೊಸಳೆ

ಮಂಡ್ಯ: ರಾತ್ರಿಯಾಗ್ತಿದ್ದಂತೆ ಭಾರೀ ಗಾತ್ರದ ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಬಳಿಯ ಪಾಲಹಳ್ಳಿ ಗ್ರಾಮದ ಬಳಿ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಳೆದ ಒಂದು ತಿಂಗಳಿನಿಂದ ರಂಗನತಿಟ್ಟು ಪಕ್ಷಿಧಾಮದ ಪಾಲಹಳ್ಳಿ ಗ್ರಾಮದ ಬಳಿಯ ವಿರಿಜಾ ನಾಲೆಯಲ್ಲಿ ಮೊಸಳೆಯೊಂದು ಸೇರಿಕೊಂಡಿದ್ದು, ಈಗಾಗಲೇ ನಾಲೆಯಿಂದ ಮೇಲೆ ಬಂದ ಮೂರ್ನಾಲ್ಕು ಕುರಿ ಮೇಕೆಗಳನ್ನು ತಿಂದಿದೆ.

Ad Widget . Ad Widget . Ad Widget .

ಇದೀಗ ಮತ್ತೊಮ್ಮೆ ಭಾರೀ ಗಾತ್ರದ ಈ ಮೊಸಳೆ ವಿರಿಜಾ ನಾಲೆಯ ಪಕ್ಕದಲ್ಲೇ ರಾತ್ರಿಯಲ್ಲಿ ರಸ್ತೆಗೆ ಬಂದು ಆಹಾರಕ್ಕಾಗಿ ಅಲೆದಾಟ ನಡೆಸಿದ್ದು, ಪ್ರವಾಸಿಗರೊಬ್ಬರು ಕಾರಿನಲ್ಲಿ ರಾತ್ರಿ ಬರುವಾಗ ರಸ್ತೆಯಲ್ಲಿ ಸಂಚರಿಸಿರುವುದನ್ನು ಕಂಡಿದ್ದಾರೆ. ಈ ವೇಳೆ ಪ್ರವಾಸಿಗರು ಮೊಸಳೆಯ ಓಡಾಟದ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗ್ತಿದ್ದು, ಆ ಭಾಗದಲ್ಲಿರುವ ರೈತರು ತಮ್ಮ ಜಮೀನಿಗೆ ರಾತ್ರಿ ವೇಳೆ ತೆರಳಲು ಭಯ ಪಟ್ಟಿದ್ದಾರೆ.

ಈ ಮೊಸಳೆಗಳು ಪಕ್ಕದ ರಂಗನತಿಟ್ಟು ಪಕ್ಷಿಧಾಮದಿಂದ ಅಹಾರ ಅರಸಿ ಬಂದಿರಬೇಕು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ನದಿ ಬಿಟ್ಟು ನಾಲೆ ಮತ್ತು ಬಯಲಿಗೆ ಬಂದಿರೋ ಈ ಮೊಸಳೆ ಸೆರೆಗೆ ಬೋನ್ ಕೂಡ ಇಡಲಾಗಿದೆ.

Leave a Comment

Your email address will not be published. Required fields are marked *