Ad Widget .

14ರ ಬಾಲೆಯ ಮೇಲೆ 13 ಕಾಮುಕರಿಂದ ಅತ್ಯಾಚಾರ

ಚಂಡೀಘರ್: ಮುಂಬೈನಿಂದ ಚಂಡೀಗಢ ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ.

Ad Widget . Ad Widget .

ಸ್ನೇಹಿತನ ಒತ್ತಾಯದ ಮೇಲೆ 14 ವರ್ಷದ ಅಪ್ರಾಪ್ತೆ, ಮನೆಯಿಂದ ಓಡಿ ಹೋಗಿದ್ದಳು.ಪುಣೆ ಮೂಲದ ಬಾಲಕಿ, ಚಂಡೀಗಢಕ್ಕೆ ಹೋಗಿದ್ದಳು. ಮುಂಬೈನಲ್ಲಿ ಆಕೆ ಸ್ನೇಹಿತ ಸಿಗುವುದಾಗಿ ಹೇಳಿದ್ದನಂತೆ. ಸಂಶಯ ಬಂದವರೊಬ್ಬರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಾಲಕಿಯನ್ನು ಮಕ್ಕಳ ರಕ್ಷಣಾ ತಂಡ ರಕ್ಷಿಸಿದೆ.

Ad Widget . Ad Widget .

ವಿಚಾರಣೆ ವೇಳೆ ಬಾಲಕಿ ಬಾಯ್ಬಿಟ್ಟಿದ್ದಾಳೆ. ಪುಣೆಯಿಂದ ಚಂಡೀಗಢಕ್ಕೆ ಓಡಿ ಬಂದಿದ್ದೇನೆಂದು ಬಾಲಕಿ ಹೇಳಿದ್ದಾಳೆ. ಮುಂಬೈನಲ್ಲಿ ಸಿಗುವುದಾಗಿ ಆಕೆ ಸ್ನೇಹಿತ ಹೇಳಿದ್ದನಂತೆ. ಮುಂಬೈ ರೈಲ್ವೆ ನಿಲ್ದಾಣಕ್ಕೆ ಬರ್ತಿದ್ದಂತೆ ಆಟೋ ಚಾಲಕನೊಬ್ಬ ಹೊರಗೆ ಕಡೆದುಕೊಂಡು ಹೋಗಿದ್ದಾನೆ. ನಶೆಯ ಪದಾರ್ಥ ನೀಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. 12 ಮಂದಿ, ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರಂತೆ. ಕೆಲಸ ಮುಗಿದ ಮೇಲೆ ಬಾಲಕಿಯನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾನೆ. ಟಿಕೆಟ್ ಕೌಂಟರ್ ನಲ್ಲಿದ್ದ ವ್ಯಕ್ತಿಯೂ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನಂತೆ.

ಮುಂಬೈನಲ್ಲಿ ಹುಡುಗನೊಬ್ಬನ ಪರಿಚಯ ಬಾಲಕಿಗೆ ಆಗಿದೆ. ಇಬ್ಬರೂ ಚಂಡೀಗಢಕ್ಕೆ ಹೋಗಿದ್ದಾರೆ. ಆರಂಭದಲ್ಲಿ ಹುಡುಗಿ ಓಡಿ ಬಂದಿದ್ದಾಳೆಂದು ಭಾವಿಸಿದ್ದ ಪೊಲೀಸರಿಗೆ ನಂತ್ರ ಅತ್ಯಾಚಾರದ ಪ್ರಕರಣ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *