Ad Widget .

ಹಬ್ಬದ ಸುಲಿಗೆಗೆ ರೆಡಿಯಾಗಿವೆ ಖಾಸಗಿ ಬಸ್ ಗಳು| ವಿಮಾನಕ್ಕಿಂತ ಬಸ್ ಪ್ರಯಾಣವೇ ದುಬಾರಿ…!

ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರು ಇಂದೇ ಹೋಗಿಬಿಡಿ. ನಾಳೆ ಹೋಗುವ ಪ್ಲಾನ್ ಇದ್ದರೆ ದುಪ್ಪಟ್ಟು ಹಣ ಖರ್ಚಾಗೋದು ಪಕ್ಕ. ಹಬ್ಬದ ಲಾಭ ಪಡೆಯಲು ಮುಂದಾದ ಖಾಸಗಿ ಬಸ್ಗಳು ಪ್ರಯಾಣಿಕರ ಬಳಿ ಹೆಚ್ಚಿನ ಟಿಕೆಟ್ ಚಾರ್ಜ್ ಮಾಡಲು ಮುಂದಾಗಿದೆ.

Ad Widget . Ad Widget .

ನಾಳೆಯಿಂದ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರು ಹೆಚ್ಚಿನ ಹಣ ನೀಡಿ ಪ್ರಯಾಣಿಸಬೇಕು. ಊರಿಗೆ ಹೋಗುವವರಿಗೆ ಟಿಕೆಟ್ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇಂದು ಪ್ರಯಾಣ ಮಾಡಿದ್ರೆ ಟಿಕೆಟ್ ದರ ಕಡಿಮೆ ಇರಲಿದ್ದು ನಾಡಿದ್ದು ಊರಿಗೆ‌ ಹೋಗುವವರು ಹೆಚ್ಚಿನ ಹಣ ನೀಡಿ ಟಿಕೆಟ್ ಖರೀದಿಸಬೇಕು.

Ad Widget . Ad Widget .

ಇಂದು 600 ರಿಂದ 750 ರೂಪಾಯಿ ಇದ್ದ ದರ ನಾಳೆ, ನಾಡಿದ್ದು 1000 ರಿಂದ 1300 ರೂಪಾಯಿ ಆಗಲಿದೆ. ಇಂದೇ ಬುಕ್ ಮಾಡಿದ್ರು ಅಷ್ಟೇ ದರ ಕೊಡಬೇಕು. ಹಬ್ಬದ ನೆಪದಲ್ಲಿ ಲಕ್ಷುರಿ ಬಸ್ ಗಳಲ್ಲಿ ದರ ಏರಿಕೆ ಮಾಡಲು ಮುಂದಾಗಿವೆ. ಬೆಂಗಳೂರು to ಮಂಗಳೂರು ನಿನ್ನೆ 600 ರಿಂದ 900 ರೂಪಾಯಿ ಟಿಕೆಟ್ ದರ ಇದ್ರೆ ಅದೇ ಸ್ಥಳಕ್ಕೆ 9 ನೇ ತಾರೀಕು ಪ್ರಯಾಣ ಮಾಡಿದ್ರೆ 1200 ರೂಪಾಯಿ ಟಿಕೆಟ್ ದರವಿರಲಿದೆ.

ಬೆಂಗಳೂರು to ಹುಬ್ಬಳ್ಳಿ ನಿನ್ನೆ ಪ್ರಯಾಣ ಮಾಡಿದ್ರೆ 600 ರಿಂದ 800. 9 ನೇ ತಾರೀಖು ಗುರುವಾರ ಪ್ರಯಾಣ ಮಾಡಿದ್ರೆ 1200 ರೂಪಾಯಿ ಟಿಕೆಟ್ ದರವಿರಲಿದೆ. ಇಂದು ಶಿವಮೊಗ್ಗಕ್ಕೆ ಪ್ರಯಾಣ‌ ಮಾಡಿದ್ರೆ 450 ರಿಂದ 600. 9 ನೇ ತಾರೀಖು ಪ್ರಯಾಣ ಮಾಡಿದ್ರೆ 850 ರಿಂದ 1100 ರೂಪಾಯಿ. ಹೀಗೆ ಕನಿಷ್ಠ 300 ರಿಂದ 500 ರೂಪಾಯಿ ದರ ಏರಿಕೆ ಮಾಡಲಾಗ್ತಿದೆ. ಆದ್ರೆ ಸ್ಟೇಟ್ ಕ್ಯಾರಿಯರ್ ಬಸ್ ಗಳಲ್ಲಿ ದರ ಏರಿಕೆ ಇಲ್ಲ. ಲಕ್ಷುರಿ ಬಸ್ ಗಳಲ್ಲಿ ಹಬ್ಬದ ನೆಪದಲ್ಲಿ ಹೆಚ್ಚುವರಿ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ.

ಸಾಮಾನ್ಯ ದಿನಗಳಲ್ಲಿ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಬಸ್‌ಗಳಿಗೆ ಅನುಗುಣವಾಗಿ ₹ 450ರಿಂದ ₹1,200 ಪ್ರಯಾಣ ದರವಿರುತ್ತಿತ್ತು. ಆದರೆ, ಗುರುವಾರ (ಸೆ. 9) ಹಾಗೂ ಶುಕ್ರವಾರದಂದು (ಸೆ. 10) ಕನಿಷ್ಠ ₹850ರಿಂದ ಗರಿಷ್ಠ ₹7,000ದವರೆಗೂ ಏರಿಕೆ ಆಗಿದೆ. ಅದೇ ದಿನದಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಗುವ ವಿಮಾನಗಳ ಪ್ರಯಾಣ ದರ ಕನಿಷ್ಠ ₹2,700 ಹಾಗೂ ಗರಿಷ್ಠ ₹ 4,033 ಇದೆ.

‘ಪ್ರತಿ ಬಾರಿಯಂತೆ ಖಾಸಗಿ ಬಸ್ಸಿನವರು ಈ ಬಾರಿಯೂ ಪ್ರಯಾಣ ದರ ದುಬಾರಿ ಮಾಡಿದ್ದಾರೆ’ ಎಂದು ಖಾಸಗಿ ಕಂಪನಿ ನೌಕರ ಮೋಹನ್ ಹೇಳಿದರು.

ಖಾಸಗಿ ಬಸ್ ಕಂಪನಿಯೊಂದರ ಪ್ರತಿನಿಧಿ, ‘ಲಾಕ್‌ಡೌನ್‌ನಿಂದಾಗಿ ಬಸ್‌ಗಳು ನಿಂತಲ್ಲೇ ನಿಂತಿದ್ದವು. ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಇದೀಗ ಬೇಡಿಕೆ ಇರುವುದರಿಂದ ಪ್ರಯಾಣ ದರ ಏರಿಕೆ ಮಾಡಿದ್ದೇವೆ’ ಎಂದರು.

Leave a Comment

Your email address will not be published. Required fields are marked *