ಐಸಿಸಿ ಟಿ20 ವಿಶ್ವಕಪ್| ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ|

ನವದೆಹಲಿ: ಐಸಿಸಿ ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟವಾಗಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಬಳಗದಲ್ಲಿ ಒಟ್ಟು 18 ಮಂದಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ 15 ಮಂದಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ ಮೂವರು ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ.

Ad Widget ... ..

ವಿರಾಟ್ ಕೊಹ್ಲಿ ( ನಾಯಕ) ನೇತೃತ್ವದ ತಂಡದಲ್ಲಿ ಕರ್ನಾಟಕದ ಕೆ ಎಲ್ ರಾಹುಲ್ ಗೆ ಸ್ಥಾನ ನೀಡಲಾಗಿದೆ. ಹಾಗೂ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹ್ಮದ್ ಶಮಿ ಇದ್ದಾರೆ.ಸ್ಟ್ಯಾಂಡ್ ಬೈ ಆಟಗಾರರಾಗಿ – ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಹೆಸರು ಪ್ರಕಟಿಸಲಾಗಿದೆ.

Ad Widget

ಐಸಿಸಿ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವೇಳಾಪಟ್ಟಿ ಹೀಗಿದೆ

ಭಾರತ vs ಪಾಕಿಸ್ತಾನ – 24 ಅಕ್ಟೋಬರ್
ಭಾರತ vs ನ್ಯೂಜಿಲ್ಯಾಂಡ್ – 31 ಅಕ್ಟೋಬರ್ ಭಾರತ vs
ಅಫ್ಘಾನಿಸ್ತಾನ – 3 ನವೆಂಬರ್
ಭಾರತ vs ಕ್ವಾಲಿಫೈಯರ್ ಬಿ 1 – 5 ನವೆಂಬರ್
ಭಾರತ vs ಕ್ವಾಲಿಫೈಯರ್ ಎ 2 8 ನವೆಂಬರ್

ಐಸಿಸಿ ಟಿ 20 ವಿಶ್ವಕಪ್ ನಾಕೌಟ್ ಹಂತದ ವೇಳಾಪಟ್ಟಿ:

ನವೆಂಬರ್ 10 – ಸೆಮಿ ಫೈನಲ್ 1
ನವೆಂಬರ್ 11 – ಸೆಮಿ -ಫೈನಲ್ 2
ನವೆಂಬರ್ 14 – ಫೈನಲ್

Leave a Comment

Your email address will not be published. Required fields are marked *