Ad Widget .

ಅಬ್ಬಾ…! ಹೆದ್ದಾರಿ ಬದಿಯಲ್ಲಿ ಇಷ್ಟೊಂದು ಕಾಂಡೋಮ್ ರಾಶಿ| ಬೆಚ್ಚಿಬಿದ್ದ ನಾಗರೀಕರು

ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿರಾಶಿ ಕಾಂಡೋಮ್​​ಗಳನ್ನು ಎಸೆದು ಹೋಗಿರುವ ಘಟನೆ ತುಮಕೂರು ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಇದನ್ನು ಕಂಡು ವಾಹನ ಸವಾರರು ಅಚ್ಚರಿಗೆ ಒಳಗಾಗಿದ್ದಾರೆ.

Ad Widget . Ad Widget .

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್​​ಗಟ್ಟಲೆ ಕಾಂಡೋಮ್​​​​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

Ad Widget . Ad Widget .

ಇವುಗಳನ್ನು ಇಲ್ಲಿ ಎಸೆದವರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಕೆಲವು ನಿರ್ಜನ ಪ್ರದೇಶ, ನಿರ್ಮಾಣ ಹಂತದಲ್ಲಿರುವ ಕಟ್ಟಗಳು, ಜನವಸತಿ ಇಲ್ಲದ ಪ್ರದೇಶಗಳು ಸೇರಿದಂತೆ ಹಲವು ಜಾಗಗಳು ಅಕ್ರಮಗಳ ತಾಣವಾಗುತ್ತಿವೆ. ಪ್ರೇಮಿಗಳು ಇಂಥ ಜಾಗವನ್ನು ಹುಡುಕಿ ಹೋದರೆ, ಕುಡುಕರು, ಪಾರ್ಟಿ ಮಾಡುವವರು, ಅಪರಾಧಿಕ ಕೃತ್ಯ ನಡೆಸುವವರಿಗೂ ಇಂಥ ಸ್ಥಳಗಳೇ ಬೇಕು. ಆದ್ದರಿಂದ ಮದ್ಯದ ಬಾಟಲಿಗಳ ಜತೆಯಲ್ಲಿ ಕಾಂಡೋಮ್‌ಗಳು ಇಂಥ ಪ್ರದೇಶಗಳಲ್ಲಿ ಪತ್ತೆಯಾಗುವುದು ಮಾಮೂಲಿಯಾಗಿವೆ.

ಆದರೆ ಇದೀಗ ತುಮಕೂರು ಜನತೆಯನ್ನು ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ. ಕಿಲೋಮೀಟರ್‌ಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿದ್ದು, ಜನರನ್ನು ತಲ್ಲಣಗೊಳಿಸಿದೆ. ಕಿಲೋಮೀಟರ್‌ಗಟ್ಟಲೆ ಈ ಕಾಂಡೋಮ್‌ಗಳು ಬೇಕಂತಲೇ ಯಾರೋ ಬಂದು ಎಸೆದು ಹೋಗಿದ್ದಾರಾ ಅಥವಾ ಕಂಪನಿಗಳ ವತಿಯಿಂದ ಸಾಗಣೆ ಮಾಡುವಾಗ ವಾಹನಗಳಿಂದ ಅಚಾನಕ್ಕಾಗಿ ಬಿದ್ದುಹೋಗಿವೆಯೋ ಎಂಬುದು ಸ್ಪಷ್ಟವಾಗಿಲ್ಲ.

Leave a Comment

Your email address will not be published. Required fields are marked *