Ad Widget .

‘ನಿಫಾ’ ಆತಂಕ ಬೇಡ, ಎಚ್ಚರಿಕೆ ಇರಲಿ| ಈ ವೈರಸ್ ನಿಂದ ಕಾಪಾಡಿಕೊಳ್ಳೋದು ಹೇಗೆ ಗೊತ್ತಾ?

Ad Widget . Ad Widget .

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸದ ನಡುವೆ ರಾಜ್ಯದಲ್ಲಿಯೂ ಹೆಮ್ಮಾರಿಯ ಆತಂಕ ಎದುರಾಗಿದ್ದು, ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Ad Widget . Ad Widget .

ತೀವ್ರ ಜ್ವರ, ಮೈಕೈ ನೋವು, ನಡುಕ, ತೊದಲುವಿಕೆ, ತಲೆನೋವು, ವಾಂತಿ, ನಿದ್ರಾಲಸ್ಯ, ಪ್ರಜ್ಞಾಹೀನತೆ- ಇವು ನಿಫಾ ವೈರಸ್ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ

ನಿಫಾ ಬಗ್ಗೆ ಜಾಗೃತಿ ಇರಲಿ:

  • ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು
  • ಬಾವಲಿಗಳು ಅತಿ ಹೆಚ್ಚು ಕಂಡುಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರು ಕುಡಿಯಬಾರದು
  • ರೋಗಿಯ ಶರೀರ ಸ್ರಾವದೊಂದಿಗೆ (ಜೊಲ್ಲು, ಬೆವರು, ಮೂತ್ರ) ಸಂಪರ್ಕ ತಪ್ಪಿಸಿ

ಈ ಕ್ರಮಗಳನ್ನು ಅನುಸರಿಸಿ:

  • ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳಿ

*ಹಂದಿ, ಕುದುರೆ, ನಾಯಿ, ಬೆಕ್ಕುಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಪ್ರತ್ಯೇಕವಾಗಿಡಿ

  • ಸೋಂಕಿತರ ಸಂಪರ್ಕದಿಂದ ದೂರವಿರಬೇಕು
  • ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಶುಚಿಗೊಳಿಸಬೇಕು
  • ಹಸ್ತಲಾಘವ ಕೊಡುವುದನ್ನು ತಪ್ಪಿಸಿ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ
  • ರೋಗಿಯನ್ನು ಉಪಚರಿಸುವಾಗ ಮಾಸ್ಕ್, ಗ್ಲೌಸ್ ಕಡ್ಡಾಯ
  • ಎಲ್ಲಾ ರೀತಿಯ ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಿ

Leave a Comment

Your email address will not be published. Required fields are marked *