Ad Widget .

ಅಚ್ಚರಿ ಮೂಡಿಸಿದ ತ್ರಿಕೋನ ಪ್ರೇಮ – ಲಾಟರಿಯ ಮೂಲಕ ಪ್ರೇಯಸಿಯ ಆಯ್ಕೆ – ಹೀಗೂ….ಉಂಟೇ….

Ad Widget . Ad Widget .

ಹಾಸನ: ಯುವಕೊನಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿ ಕೊನೆಗೆ ಇಬ್ಬರ ಕೈಗೆ ಸಿಕ್ಕಿ ಬಿದ್ದು ಮದೆಯಾಗಳು ಕುಟುಬಂಸ್ಥರು ಲಾಟರಿ ಪ್ರಯೋಗಕ್ಕೆ ಮುಂದಾದ ಪ್ರಸಂಗವೊಂದು ಸಕಲೇಶಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಯುವಕನಿಗೆ ಯುವತಿಯ ಮೇಲೆ, ಯುವತಿಗೆ ಯುವಕನ ಮೇಲೆ ಮೋಹ ಉಂಟಾಗುವುದು ಸಹಜ. ಅದರೆ ಕೆಲವು ಯುವತಿ/ಯುವಕರಿಗೆ ತನಗೊಬ್ಬ ಪೀಯತಮ/ಪ್ರೀಯತಮೆ ಇದ್ದರೂ ಇನ್ನೂಂದು ಯುವತಿಯನ್ನು /ಯುವಕನನ್ನು ಕಂಡಾಗ ಆಕೆ ಮೇಳೆ ಸೆಳೆತ ಉಂಟಾಗುವುದು ಸಾಮನ್ಯ. ಅದರೆ ಇಲ್ಲೊಬ್ಬ ಯುವಕ ಇಬ್ಬರೂ ಯುವತಿಯರನ್ನು ಪ್ರೀತಿಸುತ್ತಿದ್ದ. ಆಕೆಗೆ ಈಕೆಯ ವಿಚಾರ ತಿಳಿಯದಂತೆ , ಈಕೆಗೆ ಆಕೆಯ ವಿಚಾರ ತಿಳಿಯದಂತೆ ಅದು ಹೇಗೂ ನಿರ್ವಹಣೆ ಮಾಡುತ್ತಿದ್ದ ಆ ದೇವರಿಗೆ ಗೊತ್ತು.
ಆದರೆ, ಎಷ್ಟು ದಿನ ಅಂತಾ ಕಳ್ಳಾಟವಾಡಲು ಸಾಧ್ಯವಾಗುತ್ತದೆ? ಎಲ್ಲದಕ್ಕೂ ಒಂದು ಕೊನೆ ಅಂತ ಇದ್ದೆ ಇರುತ್ತದೆ. ಅನ್ನುವ ಹಾಗೆ ಕೊನೆಗೂ ಯುವಕ ಇಬ್ಬರ ಕೈಯಲ್ಲೂ ಸರಿಯಾಗಿ ಸಿಕ್ಕಿ ಬಿದ್ದಿದ್ದಾನೆ. ಅದರೆ ಇಲ್ಲಿ ಈ ಯುವತಿಯರಿಗೆ ಈತನ ಮೇಲೆ ಅದೆಂತ ಮೋಹ ಮಾರಾಯರ್ರೇ….ಈತ ಮಾಡಿದ 420 ಕೆಲಸಕ್ಕೆ ಯುವತಿಯರು ಆತನನ್ನು ಬಿಟ್ಟು ಹೋಗುವ ಇಂತಹ ಕಾಲ ಘಟ್ಟದಲ್ಲಿ ಆತನನ್ನು ಬಿಟ್ಟು ಕೊಡಲು ಒಪ್ಪದ ಯುವತಿಯರಿಬ್ಬರು ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದರು. ಇದರ ನಡುವೆ ಓರ್ವ ಯುವತಿ ಆತನಿಗೊಸ್ಕರ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆಯೂ ನಡೆದಿದೆ.
ಕೊನೆಗೆ ಬೆವರಿಳಿಸಿದ ತ್ರಿಕೋನ ಪ್ರೇಮ ಕಥೆಯನ್ನು ಬಗೆಹರಿಸಲು ಕುಟುಂಬಸ್ಥರು ಹಾಗೂ ಪರಿಚಯಸ್ಥರು ಮುಂದಾಗಬೇಕಾಯಿತು. ಅದರೆ ಈ ಪ್ರೇಮ ಕಥೆ ಮಾತುಕತೆ ಮೂಲಕ ಪರಿಹಾರ ಸಿಗದೆ ಲಾಟರಿ ಎತ್ತುವ ಮೂಲಕ ಯುವತಿಯ ಆಯ್ಕೆಗೆ ಮುಂದಾದರು. ಇಬ್ಬರು ಹುಡುಗಿಯರಲ್ಲಿ ಯಾರ ಹೆಸರು ಬರುತ್ತದೋ ಅವರ ಜತೆ ಮದುವೆ ಎಂದು ನಿರ್ಧಾರ ಮಾಡಿದರು. (ಪ್ರೀಯ ಓದುಗರೇ.. ಮದುವೆ ಎಂಬ ಮೂರು ಅಕ್ಷರದಲ್ಲಿ ಗಂಡು ಹೆಣ್ಣು ತಾವು ಇಬ್ಬರು ಕೂಡ ಮನಸಾರೆ ಒಪ್ಪಿದ ನಂತರ ಮದುವೆಗೆ ಮುಂದಾಗುವುದು. ಹಾಗಿದ್ದಲ್ಲಿ ಮದುವೆಂಬುವುದನ್ನು ಬಲತ್ಕಾರದಿಂದ ಮಾಡಿಸುವುದು ಸರಿಯಲ್ಲಾ. ಸಂ..)
ಲಾಟರಿ ಎತ್ತಲು ಮುಂದಾಗುತ್ತಿದ್ದಂತೆ ಆ ಯುವಕನಿಗೆ ಅದೇನಯಿತೋ ಏನೋ, ತಕ್ಷಣ ಹಿಂದೆಯಿಂದ ಮುಂದೆ ಬಂದು ಒಂದೇ ಮಾತಿಗೆ ನಾನು ವಿಷ ಸೇವಿಸಿದ್ದ ಯುವತಿಯನ್ನೇ ಮದುವೆಯಾಗುವುದಾಗಿ ಹೇಳಿದನು. ಯುವಕನ ಹೇಳಿಕೆಯಿಂದ ಕೋಪಗೊಂಡ ಮತ್ತೊಬ್ಬ ಯುವತಿ ಯುವಕನ ಕೆನ್ನೆಗೆ ಬಾರಿಸಿದ್ದಾಳೆ. ನಂತರ ಯುವಕ ಮದುವೆಯಾಗಲು ನಿರ್ಧರಿಸಿದ ಯುವತಿ ಬಳಿ ಬಂದು, ನನಗೆ ನಿನ್ನ ಮೇಲೆ ಕೋಪವಿಲ್ಲ. ಮನಸ್ಸಲ್ಲಿ ಏನೂ ಇಟ್ಟುಕೊಳ್ಳಬೇಡ. ಎಲ್ಲಿಯಾದರೂ ಸಿಕ್ಕಾಗ ಮಾತನಾಡಿಸು. ನಿನ್ನ ಬದುಕು ಚೆನ್ನಾಗಿರಲಿ ಎಂದಿದ್ದಾಳೆ. ಆದರೆ ನನಗೆ ಮೋಸ ಮಾಡಿದವನನ್ನು ಮಾತ್ರ ಸುಮ್ಮನೆ ಬಿಡಲ್ಲ ಎಂದು ಯುವತಿ ಹೊರಟು ಹೋಗಿದ್ದಾಳೆ.

Ad Widget . Ad Widget .

ಅಚ್ಚರಿಯೆಂದರೆ ಈ ಪ್ರೇಮ ಕಥೆಯಲ್ಲಿ ಯುವತಿಯಾಗಲಿ, ಯುವವತಿಯರ ಮನೆಯವರಾಗಲಿ, ಪೊಲೀಸ್ ಕೇಸ್, ಕೋರ್ಟ್ ಅಂತ ಅಲೆದಾಡದೆ ಇಬ್ಬರು ಯುವತಿ ಹಾಗೂ ಯುವಕನ ಮನೆಯವರು ಹಾಗೂ ಕುಟುಂಬಸ್ಥರ ಸೇರಿಕೊಂಡು ಅವÀರಲ್ಲೇ ಒಂದು ತೀರ್ಮಾನಕ್ಕೆ ಬಂದು ತ್ರೀಕೋನ ಪ್ರೇಮಕ್ಕೆ ನಾಂದಿ ಹಾಡಿ ತೆÀರೆ ಎಳೆದಿದ್ದಾರೆ.

Leave a Comment

Your email address will not be published. Required fields are marked *