Ad Widget .

ವಿಶ್ವ ನಾಯಕರ ರೇಟಿಂಗ್ ಪಟ್ಟಿಯಲ್ಲಿ ಮೋದಿನೇ ನಂ.1

ಉಳಿದ ರಾಷ್ಟ್ರಗಳ ಮುಖ್ಯಸ್ಥರಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರ ಅನುಮೋದನೆಯ ರೇಟಿಂಗ್ʼಗಳು ಶೇಕಡಾ 70ರಷ್ಟಿದೆ ‌ಎಂದು ಅಮೆರಿಕದ ದತ್ತಾಂಶ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಟ್ರ್ಯಾಕ್ ಹೇಳಿದೆ.

Ad Widget . Ad Widget .

ಮೋದಿ ಅವರ ಅನುಮೋದನೆಯ ರೇಟಿಂಗ್ʼಗಳು ಆಗಸ್ಟ್ 23 ರಂದು ಶೇಕಡಾ 72ರ ಗರಿಷ್ಠದಿಂದ ಸ್ವಲ್ಪ ಕುಸಿದಿವೆ. ಆದ್ರೆ, ಜೂನ್ 23ರಂದು ವರದಿಯಾದ ಶೇಕಡಾ 63ಕ್ಕಿಂತ ಉತ್ತಮವಾಗಿದೆ.

Ad Widget . Ad Widget .

ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಾಡರ್ ಅವರು ಶೇ.64 ರಷ್ಟು ಅನುಮೋದನೆ ರೇಟಿಂಗ್ʼನೊಂದಿಗೆ ಎರಡನೇ ಸ್ಥಾನದಲ್ಲಿದ್ರೆ, ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ (ಶೇ.63) ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ (ಶೇ.52) ನಂತರದ ಸ್ಥಾನದಲ್ಲಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಶೇ.48ರಷ್ಟು ಅನುಮೋದನೆ ರೇಟಿಂಗ್ʼನೊಂದಿಗೆ ಐದನೇ ಸ್ಥಾನದಲ್ಲಿದ್ದು, ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ (ಶೇ.45) ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ (ಶೇ.41) ನಂತರದ ಸ್ಥಾನದಲ್ಲಿದ್ದಾರೆ.

ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೋನಾರೊ ಅವರ ಅನುಮೋದನೆಯ ರೇಟಿಂಗ್ ಶೇ.39ರಷ್ಟಿದ್ದು, ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ (ಶೇ.38), ಸ್ಪೇನ್ ಸ್ಪೇನ್ ಪೆಡ್ರೊ ಸ್ಯಾಂಚೆಜ್ (ಶೇ.35), ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ (ಶೇ.34) ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ (ಶೇ.25) ನಂತರದ ಸ್ಥಾನದಲ್ಲಿದ್ದಾರೆ.

Leave a Comment

Your email address will not be published. Required fields are marked *