Ad Widget .

ಕಡಬ: ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ ಆರೋಪ| ಆಸ್ಪತ್ರೆಗೆ ದಾಖಲಾದ ಇತ್ತಂಡಗಳು|

Ad Widget . Ad Widget .

ಕಡಬ: ಇಲ್ಲಿನ ಮುಳಿಮಜಲು ಎಂಬಲ್ಲಿ ಗೂಡಂಗಡಿ ವ್ಯಾಪಾರಸ್ಥೆಯೋರ್ವರ ಮೇಲೆ ಅಲ್ಲೇ ಪಕ್ಕದಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೋರ್ವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿ ಈ ಸಂಬಂಧ ಇತ್ತಂಡದ ಐವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಸೆ.5ರಂದು ನಡೆದಿದೆ.

Ad Widget . Ad Widget .

ಮುಳಿಮಜಲಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಜಗನ್ನಾಥ ಎಂಬವರ ಪತ್ನಿ ಪ್ರಮೋದ ಎಂಬವರ ಮೇಲೆ ಸಮೀಪದಲ್ಲಿ ಮಾಂಸದಂಗಡಿ ನಡೆಸುತ್ತಿರುವ ರಾಜುಮ್ಯಾಥ್ಯೂ ಎಂಬವರು ವೀಡಿಯೋ ಮಾಡಿ ಹಲ್ಲೆ ನಡೆಸಿದ್ದಾರೆ ,ಅಲ್ಲದೆ ರಕ್ಷಣೆಗೆ ಬಂದ ತನ್ನ ಮಗಳ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪ್ರಮೋದ ಹಾಗೂ ಅವರ ಪುತ್ರಿ ಪ್ರಜಾರಶ್ಮಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದೇ ಘಟನೆಗೆ ಸಂಬಂಧಿಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ರಾಜು ಮ್ಯಾಥ್ಯೂ, ಅವರ ಪತ್ನಿ ಶಾಲಿ ಮ್ಯಾಥ್ಯೂ, ಅವರ ಪುತ ರಕ್ಷಿತ್ ಮಾಣಿಯೂ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಪ್ರಮೋದ ಅವರು, ಸೆ.5ರಂದು ಬೆಳಿಗ್ಗೆ ನಾನು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ವೇಳೆ ಏಕಾಏಕಿ ಬಂದ ರಾಜುಮ್ಯಾಥ್ಯೂ ಅವರ ಮಗ ರಕ್ಷಿತ್ ಮಾಣಿ ನಮ್ಮ ವೀಡಿಯೋ ಮಾಡಿದ ಇದೇ ವೇಳೆ ಬಂದ ರಾಜುಮ್ಯಾಥ್ಯೂ ನನಗೆ ಹಾಗೂ ತಡೆಯಲು ಬಂದ ನನ್ನ ಮಗಳ ಮೇಲೆ ಕೈಹಾಕಿ ಕಿರುಕುಳ ನೀಡಿದ್ದಾನೆ, ನಾನು ವ್ಯಾಪಾರ ಮಾಡದಂತೆ ತಡೆಯುವುದು ಆತನ ಉದ್ದೇಶವಾಗಿದ್ದು, ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದಾನೆ, ನಮ್ಮ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಸಂಬಂಧ ರಾಜುಮ್ಯಾಥ್ಯೂ ಅವರು ಹೇಳಿಕೆ ನೀಡಿ, ಪರವಾನಿಗೆ ಇಲ್ಲದೆ ವೀಕೆಂಡ್ ಕರ್ಪ್ಯೂ ವೇಳೆಯೂ ವ್ಯಾಪಾರ ನಡೆಸುತ್ತಿದ್ದು, ನನ್ನ ಅಂಗಡಿಯಲ್ಲಿ ದನದ ಮಾಂಸ ಇದೆ, ಎಂದು ಅಪಪ್ರಚಾರ ನಡೆಸುತ್ತಿದ್ದಾರೆ, ನಾನು ಅವರಿಗೆ ಸಾಲ ನೀಡಿದ್ದು, ಅದನ್ನು ಹಿಂತಿರುಗಿಸಲಿಲ್ಲ ಈ ಬಗ್ಗೆ ನಾನು ಕೋರ್ಟ್ ಕೇಸು ಹಾಕಿದ್ದೇನೆ, ಇದಕ್ಕಾಗಿಯೇ ಅವರು ನನ್ನ ಮೇಲೆ, ಹಾಗೂ ನನ್ನ ಪತ್ನಿ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆಯಾಗಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಒಟ್ಟಾರೆ ಇವರಿಬ್ಬರ‌ ಕೋಳಿ ಜಗಳದಲ್ಲಿ ಮುಂದೇನಾಗುತ್ತೋ ಕಾದುನೋಡಬೇಕಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *