Ad Widget .

ಪ್ಯಾರಾಲಂಪಿಕ್ ನಲ್ಲಿ ಭಾರತ ದಿಗ್ವಿಜಯ| ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಗತ್, ಕಂಚಿಗೆ ಕೊರಳೊಡ್ಡಿದ ಮನೋಜ್|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಟೋಕಿಯೋ: ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವಲ್ಲಿ ಪ್ರಮೋದ್ ಭಗತ್ ಯಶಸ್ವಿಯಾಗಿದ್ದಾರೆ. ಇನ್ನು ಮನೋಜ್‌ ಸರ್ಕಾರ್‌ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget . Ad Widget .

ಪ್ರಮೋದ್ ಭಗತ್ ಹಾಗೂ ಮನೋಜ್‌ ಸರ್ಕಾರ ತಲಾ 2-0 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಇದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ

ಪ್ರಮೋದ್‌ ಭಗತ್ 21-14, 21-17 ಅಂಕಗಳಿಂದ ಗ್ರೇಟ್‌ ಬ್ರಿಟನ್‌ನ ಡೇನಿಯಲ್ ಬೆಥನಿಲ್‌ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ಭಾರತಕ್ಕೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಚಿನ್ನದ ಪದಕ ಲಭಿಸಿದಂತಾಗಿದೆ.

ಮೊದಲ ಗೇಮ್‌ನ ಆರಂಭದಲ್ಲೇ ಪ್ರಮೋದ್ ಭಗತ್ ಹಾಗೂ ಡೇನಿಯಲ್ ಬೆಥನಿಲ್‌ ನಡುವೆ 6-6 ಅಂಕಗಳ ಸಮಬಲದ ಹೋರಾಟ ಕಂಡು ಬಂದಿತು. ಆ ಬಳಿಕ ಪ್ರಮೋದ್ ಕೊಂಚ ಆಕ್ರಮಣಕಾರಿ ಆಟ ಮೈಗೂಡಿಸಿಕೊಂಡು, ನಿರಂತರವಾಗಿ ಅಂಕಗಳನ್ನು ಗಳಿಸುತ್ತಲೇ ಮುನ್ನಡೆದರು. ಪರಿಣಾಮ 21-14 ಅಂಕಗಳಿಂದ ಭಗತ್ ಮೊದಲ ಗೇಮ್‌ ತಮ್ಮದಾಗಿಸಿಕೊಂಡರು.

ಇನ್ನು ಎರಡನೇ ಗೇಮ್ಸ್‌ನಲ್ಲಿ ಗ್ರೇಟ್‌ ಬ್ರಿಟನ್‌ನ ಬೆಥನಿಲ್ 5-1ರ ಮುನ್ನಡೆ ಕಾಯ್ದುಕೊಂಡು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಇದೇ ಮುನ್ನಡೆಯನ್ನು ಬೆಥನಿಲ್‌ 12-4ಕ್ಕೆ ಹೆಚ್ಚಿಸಿಕೊಂಡರು. ಆದರೆ ಇದಾದ ಬಳಿಕ ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದ ಭಗತ್ ಅಂತರವನ್ನು 10-12ಕ್ಕೆ ತಗ್ಗಿಸಿದರು. ಬಳಿಕ ಕಮ್‌ಬ್ಯಾಕ್‌ ಮಾಡಿದ ಭಗತ್ 17-15 ಅಂಕಗಳಿಂದ ಮುನ್ನೆಡೆ ಸಾಧಿಸಿದರು. ಅಂತಿಮವಾಗಿ ಮಿಂಚಿನ ಆಟ ಪ್ರದರ್ಶಿಸಿದ ಒಡಿಶಾ ಮೂಲದ ಭಗತ್ 21-17 ಅಂಕಗಳಿಂದ ಎರಡನೇ ಗೇಮ್‌ ಜಯಿಸಿ ಚಿನ್ನದ ಪದಕ ಗೆದ್ದು ಬೀಗಿದರು.

ಇನ್ನು ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಮನೋಜ್‌ ಸರ್ಕಾರ್ ಜಪಾನಿನ ಡೈಸುಕಿ ಫ್ಯುಸಿಹರ ಎದುರು 22-20, 21-13 ಅಂಕಗಳಿಂದ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

Leave a Comment

Your email address will not be published. Required fields are marked *