Ad Widget .

ಕಡಬ| ಪೊಲೀಸ್ ‌ವಾಹನ ಹಾಗೂ ಖಾಸಗಿ ಬೊಲೆರೋ ಡಿಕ್ಕಿ| ಎಸ್ ಐ ರುಕ್ಮನಾಯ್ಕ್ ಅಪಾಯದಿಂದ ಪಾರು

Ad Widget . Ad Widget .

ಕಡಬ: ಎಸ್ ಐ ಸಹಿತ ಪೊಲೀಸರು ಪ್ರಯಾಣಿಸುತ್ತಿದ್ದ ಜೀಪು ಹಾಗೂ ಖಾಸಗಿ ಬೊಲೆರೋ ಮಧ್ಯೆ ಕಡಬ ಸಮೀಪದ ಕಳಾರ ಎಂಬಲ್ಲಿ ಸೆ.4ರಂದು ಬೆಳಿಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ . ಅಪಘಾತದಲ್ಲಿ ಎರಡು ವಾಹನಗಳು ನುಜ್ಜುಗುಜ್ಜಾಗಿದ್ದು ಕಡಬ ಠಾಣಾ ಎಸ್ ಐ ರುಕ್ಮನಾಯ್ಕ್ ಸಹಿತ ಪೊಲೀಸರು ಹಾಗೂ ಇನ್ನೊಂದು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ.

Ad Widget . Ad Widget .

ಕಡಬ ಎಸ್.ಐ. ರುಕ್ಮ ನಾಯ್ಕ್ ಪೊಲೀಸ್ ಜೀಪ್ ನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಸಹಿತ ಕಡಬದ ಪೊಲೀಸ್‌ ಜೀಪಿನ ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಎಸ್.ಐ. ರುಕ್ಮ ನಾಯ್ಕ್ ರವರು ಕಡಬದಿಂದ ಪುತ್ತೂರು ನ್ಯಾಯಾಲಯಕ್ಕೆ ತೆರಳುತ್ತಿದ್ದ ವೇಳೆ , ಉಪ್ಪಿನಂಗಡಿಯಿಂದ ಕಡಬ ಕಡೆ ತೆರಳುತ್ತಿದ್ದ ಬೊಲೆರೋ ಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತವೂ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Leave a Comment

Your email address will not be published. Required fields are marked *