Ad Widget .

ಯುವತಿಯ ಪೇಸ್ಬುಕ್ ಖಾತೆ ನಕಲಿಸಿದ ಯುವಕ| ಕೋಲ್ಕತಾ ಪೊಲೀಸರಿಂದ ಕಡಬದ ಯುವಕನ ಬಂಧನ

Ad Widget . Ad Widget .

ಕಡಬ: ಕೊಲ್ಕತ್ತಾ ಮೂಲದ ಯುವತಿಯೋರ್ವಳ ಪೇಸ್ಬುಕ್ ಖಾತೆಯನ್ನು ನಕಲಿ ಮಾಡಿದ ಹಿನ್ನೆಲೆಯಲ್ಲಿ ಕಡಬದ ಯುವಕನನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Ad Widget . Ad Widget .

ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಸಂಜಯಕೃಷ್ಣ ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಟ್ರೇಡಿಂಗ್ ವ್ಯವಹಾರ ಮಾಡುತ್ತಿರುವ ಈತ ಬೆಂಗಳೂರಿನ ಕಾಲೇಜೊಂದರಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಪಶ್ಚಿಮ ಬಂಗಾಳದ ಯುವತಿಯ ಖಾತೆಯನ್ನು ನಕಲಿಸಿದ್ದಾನೆ. ಈ ಕುರಿತಂತೆ ಆಕೆಗೆ ಅನುಮಾನ ಬಂದಿದ್ದು, ಯಾರೋ ಅಪರಿಚಿತರು ನಕಲಿಸಿ ಉಪಯೋಗಿಸಿರುವ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದಲ್ಲಿ ಸೈಬರ್‌ ಕ್ರೈಂ ನಡಿಯಲ್ಲಿ ದೂರು ದಾಖಲಿಸಿದ್ದಾಳೆ.

ಬಳಿಕ ಪ್ರಕರಣದ ಜಾಡು ಹಿಡಿದು ಎರಡು ದಿನಗಳ ಹಿಂದೆ ಕಡಬಕ್ಕೆ ಆಗಮಿಸಿದ ಕೊಲ್ಕತ್ತಾದ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *