Ad Widget .

ಮೊಬೈಲ್ ಕೊಡಿಸಲಿಲ್ಲವೆಂದು ತಂದೆಯನ್ನೇ ಕೊಂದ ಭೂಪ

Ad Widget . Ad Widget .

ತಂದೆ ಮೊಬೈಲ್ ನೀಡಲಿಲ್ಲ ಎಂಬ ಕಾರಣಕ್ಕೆ ಮಗ, ತಂದೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ಮೊಬೈಲ್ ಗೆ ಸಂಬಂಧಿಸಿದ ಆಘಾತಕಾರಿ ಘಟನೆ ನಡೆದಿದೆ.

Ad Widget . Ad Widget .

ಅರ್ಜುನ್ ಸರ್ಕಾರ್ ಎಂಬಾತ ತನ್ನ ಪತ್ನಿ ಹಾಗೂ ಮಗನ ಜೊತೆ ಇಚ್ಚಾಪೂರ್ ನಲ್ಲಿ ವಾಸವಾಗಿದ್ದ. ಕೆಲಸದ ಮೇಲೆ ಹೊರಗೆ ಹೋಗಿದ್ದ ಅರ್ಜುನ್ ಪತ್ನಿ ಡಾಲಿ, ಮನೆಗೆ ಬಂದಾಗ ಅರ್ಜುನ್ ಪ್ರಜ್ಞೆ ತಪ್ಪಿ ಬಿದ್ದಿರುವ ಸ್ಥಿತಿಯಲ್ಲಿದ್ದ ಎನ್ನಲಾಗಿದೆ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ವೈದ್ಯರು, ಅರ್ಜುನ್ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಅರ್ಜುನ್ ಬಾತ್ ರೂಮಿನಲ್ಲಿ ಬಿದ್ದಿದ್ದ. ಘಟನೆ ನಡೆದ ದಿನ ಅರ್ಜುನ್ ಮಲಗಿದ್ದವನು ಏಳಲಿಲ್ಲವೆಂದು ಡಾಲಿ ಹೇಳಿದ್ದಾಳೆ.

ಡಾಲಿ ಮಾತಿನಿಂದ ಅನುಮನಗೊಂಡ ವೈದ್ಯರು, ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ. ಈ ವೇಳೆ ಅರ್ಜುನ್ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಸಂಗತಿ ಗೊತ್ತಾಗಿದೆ. ನಂತರ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ 17 ವರ್ಷದ ಮಗ, ತಂದೆ ಕತ್ತು ಹಿಸುಕಿದ್ದಾನೆ ಎಂಬುದು ಗೊತ್ತಾಗಿದೆ. ಅರ್ಜುನ್ ಮಗ, ಪ್ರತಿ ದಿನ ಮೊಬೈಲ್ ನೋಡ್ತಿದ್ದನಂತೆ. ಅರ್ಜುನ್ ಈ ವಿಷಯಕ್ಕೆ ಬೈಯ್ಯುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಮಗ, ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *