Ad Widget .

ಮೈಸೂರು ವಿವಿ ಪದವಿ ಪರೀಕ್ಷೆಗಳು ಮುಂದೂಡಿಕೆ

Ad Widget . Ad Widget .

ಮೈಸೂರು: ಶುಕ್ರವಾರದಿಂದ (ಸೆ.3) ಆರಂಭವಾಗಬೇಕಿದ್ದ ಮೈಸೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ಒಂದೇ ದಿನ ಎರಡು ವಿಷಯದ ಪರೀಕ್ಷೆ ನಿಗದಿಯಾಗಿತ್ತು. ಹೀಗಾಗಿ ಪರೀಕ್ಷಾ ದಿನಾಂಕ ಬದಲಿಸುವಂತೆ ವಿದ್ಯಾರ್ಥಿಗಳ ಮನವಿ ಸಲ್ಲಿಸಿದ್ದರು.

Ad Widget . Ad Widget .

ಹೀಗಾಗಿ ಶುಕ್ರವಾರದ ಬದಲು ಸೆಪ್ಟೆಂಬರ್ 13ರಿಂದ ಪದವಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಮುಂದೂಡಿಕೆ ಬಗ್ಗೆ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಅಧಿಕೃತ ಮಾಹಿತಿ ನೀಡಿದ್ದಾರೆ.

“ಪದವಿ ವಿದ್ಯಾರ್ಥಿಗಳ ಹಿತದೃಷ್ಟಿ ನಮಗೆ ಮುಖ್ಯ. ಆದ್ದರಿಂದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಆದಷ್ಟು ಬೇಗ ನೀಡಲಾಗುವುದು,” ಎಂದು ಸಹ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಜ್ಞಾನಪ್ರಕಾಶ್ ಹೇಳಿದ್ದಾರೆ.

Leave a Comment

Your email address will not be published. Required fields are marked *