Ad Widget .

ಚಿಕ್ಕ ಮಗಳೂರು|ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ| ಗೋಣಿಬೀಡು ಠಾಣಾ ಪಿಎಸ್ ಐ ಬಂಧನ

Ad Widget . Ad Widget .

ಚಿಕ್ಕಮಗಳೂರು: ದಲಿತ ಯುವಕನೊಬ್ಬನಿಗೆ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್​ ಠಾಣೆ ಪಿಎಸ್​ಐ ಅರ್ಜುನ್​ ಅವರನ್ನು ನಿನ್ನೆ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ವಿವಾಹಿತ ಮಹಿಳೆಗೆ ಫೋನ್​ ಮಾಡಿದ್ದ ಆರೋಪದ ಮೇಲೆ ಮೇ 10ರಂದು ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದ ನಿವಾಸಿ ಪುನೀತ್​ನನ್ನು ವಿಚಾರಣೆಗಾಗಿ ಅರ್ಜುನ್​ ಠಾಣೆಗೆ ಕರೆದೊಯ್ದಿದ್ದರು. ‘ಅಂದು ನನ್ನನ್ನು ಠಾಣೆಗೆ ಕರದೊಯ್ದು ಪಿಎಸ್​ಐ ಥಳಿಸಿದ್ದರು. ಕುಡಿಯೋಕೆ ನೀರು ಕೇಳಿದರೂ ಕೊಡದೆ, ವ್ಯಕ್ತಿಯೊಬ್ಬನಿಂದ ನನ್ನ ಬಾಯಿಗೆ ಮೂತ್ರ ಹೊಯ್ಯಿಸಿದ್ದರು. ಕೆಳಗೆ ಬಿದ್ದ ಮೂತ್ರವನ್ನೂ ನನ್ನಿಂದ ಬಲವಂತವಾಗಿ ನೆಕ್ಕಿಸಿದ್ದರು’ ಎಂದು ಆರೋಪಿಸಿ ಪುನೀತ್​ ಮೇ 22ರಂದು ಪಿಎಸ್​ಐ ವಿರುದ್ಧ ದೂರು ಕೊಟ್ಟಿದ್ದರು.

ಎಫ್​ಐಆರ್​ ದಾಖಲಾಗುತ್ತಿದ್ದಂತೆ ಈ ಪ್ರಕರಣ ಸಂಬಂಧ ಮೇ.23ರಂದು ಪಿಎಸ್​ಐ ಅವರನ್ನ ಕೆಲಸದಿಂದ ಅಮಾನತು ಮಾಡಲಾಗಿತ್ತು. ತಲೆ ಮರೆಸಿಕೊಂಡಿದ್ದ ಅರ್ಜುನ್​, ನಿರೀಕ್ಷಣಾ ಜಾಮೀನು ಕೋರಿ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಾದರೂ ಈ ಅರ್ಜಿ ವಜಾಗೊಂಡಿತ್ತು. ಸೆ.1ರ ರಾತ್ರಿ ಬೆಂಗಳೂರಲ್ಲಿ ಸಿಐಡಿ ಪೊಲೀಸರ ಕೈಗೆ ಆರೋಪಿ ಅರ್ಜುನ್​ ಸಿಕ್ಕಿಬಿದ್ದಿದ್ದಾರೆ.

Leave a Comment

Your email address will not be published. Required fields are marked *