Ad Widget .

ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್|

Ad Widget . Ad Widget .

ಚಿಕ್ಕಬಳ್ಳಾಪುರ: ನಾಟಿ ಕೋಳಿಯೊಂದನ್ನು ಹಿಡಿದು ಕೆಎಸ್​ಆರ್​ಟಿಸಿ ಬಸ್​ ಹತ್ತಿದ ಪ್ರಯಾಣಿಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ. ಅರೆ! ಅದರಲ್ಲೇನು ವಿಶೇಷ ಅಂತೀರಾ?

Ad Widget . Ad Widget .

ಚಿಕ್ಕಬಳ್ಳಾಪುರ ತಾಲೂಕಿನ ಸೋಮೇಶ್ವರದ ವ್ಯಕ್ತಿಯೊಬ್ಬ ಶ್ರಾವಣ ಮಾಸದ ಪ್ರಯುಕ್ತ ಪೆರೇಸಂದ್ರದಲ್ಲಿ ನಾಟಿ ಕೋಳಿಯೊಂದನ್ನು ಖರೀದಿಸಿ ವಾಪಸ್​ ಮನೆಗೆ ಹೋಗಲೆಂದು ಕೆಎಸ್​ಆರ್​ಟಿಸಿ ಬಸ್ ಹತ್ತಿದ್ದರು.

ಸೋಮೇಶ್ವರಕ್ಕೆ ಒಂದು ಟಿಕೆಟ್​ ಕೊಡಿ ಎಂದು ಪ್ರಯಾಣಿಕ ಕೇಳಿದ್ರೆ, ಬಸ್‌ ಕಂಡಕ್ಟರ್ ಕೊಟ್ಟದ್ದು ಒಂದೂವರೆ ಟಿಕೆಟ್​! ಪ್ರಯಾಣಿಕನಿಗೆ ಒಂದು ಟಿಕೆಟ್(10 ರೂ.), ಅವರ ಜತೆ ಇದ್ದ ನಾಟಿಕೋಳಿಗೂ ಅರ್ಧ ಟಿಕೆಟ್(5 ರೂ.) ಕೊಟ್ಟಿದ್ದಾರೆ. ಈ ವಿಚಾರ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಕೋಳಿಗೂ ಟಿಕೆಟ್​ ಕೊಟ್ಟಿದ್ದಕ್ಕೆ ಪ್ರಯಾಣಿಕ ತನ್ನ ಪಕ್ಕದ ಸೀಟ್​ನಲ್ಲೇ ಕೋಳಿಯನ್ನೂ ಕೂರಿಸಿಕೊಂಡು ಪ್ರಯಾಣಿಸಿದ್ದಾನೆ. ಈ ಫೋಟೋ ವೈರಲ್​ ಆಗಿದೆ.

Leave a Comment

Your email address will not be published. Required fields are marked *