Ad Widget .

ಬದುಕನ್ನು ಬರ್ಬಾದ್ ಆಗಿಸಿದ ಕೌನ್ ಬನೇಗಾ ಕರೋಡ್ ಪತಿ| ಐದು ಕೋಟಿ ಗೆದ್ದಾತ ದಿವಾಳಿ

Ad Widget . Ad Widget .

KBC ಸೀಸನ್ 5ರಲ್ಲಿ ಭಾಗವಹಿಸಿ ಬರೋಬ್ಬರಿ 5 ಕೋಟಿ ರೂಪಾಯಿ ಗೆದ್ದ ಸುಶೀಲ್ ಕುಮಾರ್ ಭಾರೀ ಸುದ್ದಿಯಾಗಿದ್ದರು. 2011ರಲ್ಲಿ ಅಮಿತಾಭ್ ಬಚ್ಚನ್ ಬಿಹಾರದ ಸುಶೀಲ್ ಕುಮಾರ್ ಅವರಿಗೆ 5 ಕೋಟಿಯ ಚೆಕ್ ನೀಡಿದ್ದರು. ಎಲ್ಲರಿಗೂ ಕೆಬಿಸಿ ನಂತರ ಅದೃಷ್ಟ ಖುಲಾಯಿಸುತ್ತಾದರೂ ಸುಶೀಲ್ ಕುಮಾರ್ ದುರಾದೃಷ್ಟ ಶುರುವಾಗಿದ್ದೇ ಕೆಬಿಸಿ ಗೆದ್ದ ಮೇಲೆ.

Ad Widget . Ad Widget .

ನನ್ನ ಜೀವನದ ಅತ್ಯಂತ ಕೆಟ್ಟ ಭಾಗ ಕೆಬಿಸಿ ಗೆದ್ದ ಮೇಲೆ ಪ್ರಾರಂಭವಾಯ್ತು ಎಂದಿದ್ದಾರೆ ಸುಶೀಲ್.
2015-2016 ನನ್ನ ಜೀವನದ ಅತ್ಯಂತ ಸವಾಲಿನ ಸಮಯ. ನನಗೆ ಏನು ಮಾಡಬೇಕೆಂದು ಆಗ ತಿಳಿಯಲಿಲ್ಲ. ನಾನು ಲೋಕಲ್ ಸೆಲೆಬ್ರಿಟಿ ಆಗಿದ್ದೆ. ಬಿಹಾರದಲ್ಲಿ ತಿಂಗಳಲ್ಲಿ 10 ಅಥವಾ ಕೆಲವೊಮ್ಮೆ 15 ದಿನ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆ. ನಾನು ಅಧ್ಯಯನದಿಂದ ದೂರವಾಗುತ್ತಿದ್ದೆ. ಆ ದಿನಗಳಲ್ಲಿ ನಾನು ಮಾಧ್ಯಮವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ. ಕೆಲವೊಮ್ಮೆ ಪತ್ರಕರ್ತರು ನನ್ನ ಸಂದರ್ಶನ ಬರೆಯುತ್ತಿದ್ದರು. ನಾನು ಅವರೊಂದಿಗೆ ವ್ಯವಹಾರದ ಬಗ್ಗೆ ಹೇಳುತ್ತಿದ್ದೆ. ಕೆಲವು ದಿನಗಳ ನಂತರ ಆ ವ್ಯವಹಾರಗಳು ಕುಸಿಯಿತು ಎಂದಿದ್ದಾರೆ.

ಬಹಳಷ್ಟು ಜನ ಮೋಸ ಮಾಡಿದರು

ಸುಶೀಲ್ ಡೊನೇಷನ್ ಕೊಡುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು ಆದರೆ ಅದು ಎಲ್ಲಾ ಮೋಸ ಎಂದು ನಂತರ ತಿಳಿಯುತು. ಇದು ಅವರ ಪತ್ನಿಯೊಂದಿಗಿನ ಸಂಬಂಧವನ್ನು ಕೆಡಿಸಿತು. ಕೆಬಿಸಿ ನಂತರ ನಾನು ಲೋಕೋಪಕಾರಿಯಾದೆ. ರಹಸ್ಯ ದೇಣಿಗೆ ನೀಡುವ ವ್ಯಸನಿಯಾದೆ. ಒಂದು ತಿಂಗಳಲ್ಲಿ ಸುಮಾರು 50 ಸಾವಿರ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆ. ಬಹಳಷ್ಟು ಬಾರಿ ಜನರು ನನಗೆ ಮೋಸ ಮಾಡಿದರು. ದೇಣಿಗೆ ನೀಡಿದ ನಂತರವೇ ನನಗೆ ಇದು ತಿಳಿಯಿತು. ಈ ಕಾರಣದಿಂದಾಗಿ, ನನ್ನ ಹೆಂಡತಿಯೊಂದಿಗಿನ ನನ್ನ ಸಂಬಂಧ ಹದಗೆಟ್ಟಿತು. ಸರಿ ಮತ್ತು ತಪ್ಪು ಜನರ ನಡುವೆ ವ್ಯತ್ಯಾಸ ಮಾಡಲು ನನಗೆ ಗೊತ್ತಿಲ್ಲ. ಭವಿಷ್ಯದ ಬಗ್ಗೆ ನನಗೆ ಕಾಳಜಿ ಇಲ್ಲ ಎಂದು ಅವಳು ಆರೋಪಿಸುತ್ತಿದ್ದಳು. ಈ ಬಗ್ಗೆ ಜಗಳವಾಗುತ್ತಿತ್ತು ಎಂದಿದ್ದಾರೆ ಸುಶೀಲ್ ಕುಮಾರ್.

Leave a Comment

Your email address will not be published. Required fields are marked *