ಪುತ್ತೂರು: ಇನ್ಸ್ಟ್ರಾಗ್ರಾಂ ಮೂಲಕ ಪರಿಚಯವಾದ ಯುವತಿಯೋರ್ವಳನ್ನು ಭೇಟಿಯಾಗಲು ಬಂದಾತ ಆಕೆಯ ಜೊತೆಗೆ ಠಾಣೆ ಮೆಟ್ಟಿಲೇರಿದ ಘಟನೆ ಪುತ್ತೂರಲ್ಲಿ ನಡೆದಿದೆ.
ರಾಯಚೂರು ಮೂಲದ ಯುವಕನೋರ್ವ ಪುತ್ತೂರಿನ ಯುವತಿಯೋರ್ವಳನ್ನು ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ಸಂಪರ್ಕ ಮಾಡಲು ತನ್ನ ಸ್ನೇಹಿತನ ಜೊತೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ. ಇದನ್ನು ಗಮನಿಸಿದ ತಂಡವೊಂದು ಅವರನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದು ತುಸು ಗೊಂದಲ ಉಂಟಾಯಿತು. ಅನುಮಾನಗೊಂಡ ಆ ತಂಡದ ಕೆಲವರು ಯುವಕ ಮತ್ತು ಯುವತಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಇನ್ಟ್ರಾಗ್ರಾಂ ಮೂಲಕ ಯುವಕ ಮತ್ತು ಯುವತಿ ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡು ಸೆ.1ರಂದು ಭೇಟಿಯಾಗುವ ಮಾತುಕತೆ ನಡೆಸಿದ್ದರು. ಅದರಂತೆ ಇಂದು ರಾಯಚೂರಿನ ಯುವಕ ತನ್ನ ಸ್ನೇಹಿತನ ಜೊತೆ ಪುತ್ತೂರು ಬಸ್‌ನಿಲ್ದಾಣಕ್ಕೆ ಬಂದು ಯುವತಿಯನ್ನು ಸಂಪರ್ಕಿಸಿದಾಗ ಯುವತಿಯೊಂದಿಗೆ ಆಕೆಯ ಸ್ನೇಹಿತರಿಬ್ಬರು ಇದ್ದರು. ಬಳಿಕ ಅವರು ಬಸ್‌ನಿಲ್ದಾಣದಲ್ಲೇ ಇರುವ ವಸತಿ ಗೃಹಕ್ಕೆ ಹೋಗುತ್ತಿರುವ ಮಾಹಿತಿ ಅರಿತ ತಂಡವೊಂದು ಅವರನ್ನು ಪ್ರಶ್ನಿಸಿದರು. ಈ ವೇಳೆ ಗೊಂದಲದ ವಾತಾವರಣ ಉಂಟಾಗಿತ್ತು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಯುವಕ ಮತ್ತು ಯುವತಿಯರನ್ನು ಆಟೋ ರಿಕ್ಷಾದಲ್ಲಿ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ. ಠಾಣೆಯಲ್ಲಿ ಪೊಲೀಸರು ಇಬ್ಬರನ್ನೂ ಸಕತ್ ಆಗಿ ಡ್ರಿಲ್ ಮಾಡುತ್ತಿರುವುದಾಗಿ ತಿಳಿದುಬಂದಿದೆ..
ಯುವತಿಯ ತಂದೆಯೂ ಠಾಣೆಗೆ ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇತ್ತಂಡಗಳು ಪ್ರಕರಣ ದಾಖಲು ಮಾಡಲು ನಿರಾಕರಿಸಿದ್ದಾರೆ