Ad Widget .

ಗಣೇಶ ಹಬ್ಬಕ್ಕೆ ‘ಲಂಕೆ’ ಬಿಡುಗಡೆ| ಬ್ರೇಕ್ ನ ನಿರೀಕ್ಷೆಯಲ್ಲಿ ಲೂಸ್ ಮಾದ ಯೋಗಿ

Ad Widget . Ad Widget .

ಲೂಸ್ ಮಾದ ಯೋಗಿ ಅಭಿನಯದ ಲಂಕೆ ಚಿತ್ರ ಗಣೇಶ ಹಬ್ಬದ ಹಬ್ಬದ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿದ್ದು ಸೆಪ್ಟೆಂಬರ್ 10ಕ್ಕೆ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಂತಿಮಗೊಳಿಸಿದೆ.

Ad Widget . Ad Widget .

ರಾಮ್ ಪ್ರಸಾದ್ ನಿರ್ದೇಶನದ ಲಂಕೆ ಚಿತ್ರವನ್ನು ಆರಂಭದಲ್ಲಿ ಜುಲೈ 19ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು.

ಕೊರೋನಾ ಅಬ್ಬರ ಹಿನ್ನಲೆಯಲ್ಲಿ ಸರ್ಕಾರ ಚಿತ್ರಮಂದಿರಗಳಲ್ಲಿ ಶೇಕಡ 50ರಷ್ಟು ಮಾತ್ರ ಆಸನಗಳ ಭರ್ತಿಗೆ ಅವಕಾಶ ನೀಡಿದ್ದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು.

ನಂತರ ಬಿಡುಗಡೆ ದಿನಾಂಕವನ್ನು ಆಗಸ್ಟ್ 20ಕ್ಕೆ ಮುಂದೂಡಲಾಯಿತು. ಅಂದ ಸಹ ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ ಇದೀಗ ಹೊಸ ಬಿಡುಗಡೆ ದಿನಾಂಕವನ್ನು ದೃಢಪಡಿಸಿರುವ ನಿರ್ದೇಶಕ ರಾಮ್ ಪ್ರಸಾದ್ ಅವರು ಕರ್ನಾಟಕದಾದ್ಯಂತ 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಕೃಷಿ ಥಾಪಾ, ಕಾವ್ಯಾ ಶೆಟ್ಟಿ, ಎಸ್ಟರ್ ನೊರೊನ್ಹಾ ಮತ್ತು ದಿವಂಗತ ನಟ ವಿಜಯ್ ಸಂಚಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಂಕೆಗೆ ಕಾರ್ತಿಕ್ ಶರ್ಮಾರ ಸಂಗೀತವಿದ್ದು ರಮೇಶ್ ಬಾಬು ಅವರ ಛಾಯಾಗ್ರಹಣವಿದೆ.

Leave a Comment

Your email address will not be published. Required fields are marked *