August 2021

ಪುತ್ತೂರು| ದೇವಾಲಯದ ಗದ್ದೆಯಲ್ಲಿ ಅನ್ಯಮತೀಯರಿಗೆ ಪಾರ್ಕಿಂಗ್ ಅವಕಾಶವಿಲ್ಲ| ವಿವಾದದ ಕಿಡಿ ಹಬ್ಬಿಸಿದ ವ್ಯವಸ್ಥಾಪನಾ ಸಮಿತಿ ಆದೇಶ

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹೊರಡಿಸಿರುವ ಆದೇಶ, ಇದೀಗ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಇನ್ನುಮುಂದೆ ಹಿಂದೂ ಭಕ್ತರಿಗೆ ಮಾತ್ರ ಪಾರ್ಕಿಂಗ್ ಮಾಡುವುದಕ್ಕೆ ಮಾತ್ರ ಅವಕಾಶ ಎಂದು ಆದೇಶದ ಫ್ಲೆಕ್ಸ್ ಹಾಕಲಾಗಿದ್ದು, ಈ ಆದೇಶ ವಿವಾದದ ಕಿಡಿ ಹಬ್ಬಿಸುವ ಲಕ್ಷಣಗಳು ಕಂಡುಬರುತ್ತಿದೆ. ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ಪ್ರಕಟಣೆ ಹೊರಡಿಸಿದ್ದು, ದೇವಾಲಯ ಮುಂಭಾಗದ ವಿಶಾಲವಾದ ದೇವರಮಾರು ಗದ್ದೆಯಲ್ಲಿ ಮುಂದಿನ ದಿನಗಳಲ್ಲಿ ಹಿಂಧೂ ಭಕ್ತರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ […]

ಪುತ್ತೂರು| ದೇವಾಲಯದ ಗದ್ದೆಯಲ್ಲಿ ಅನ್ಯಮತೀಯರಿಗೆ ಪಾರ್ಕಿಂಗ್ ಅವಕಾಶವಿಲ್ಲ| ವಿವಾದದ ಕಿಡಿ ಹಬ್ಬಿಸಿದ ವ್ಯವಸ್ಥಾಪನಾ ಸಮಿತಿ ಆದೇಶ Read More »

ಪ್ಯಾರಾಲಂಪಿಕ್ ನಲ್ಲಿ ಮತ್ತೊಂದು ಪದಕ| ಎತ್ತರ ಜಿಗಿತದಲ್ಲಿ ನಿಶಾದ್‌ಗೆ ಬೆಳ್ಳಿ

ಟೋಕಿಯೋ:‌ ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ನಿಶಾದ್ ಕುಮಾರ್ ಇತಿಹಾಸ ಸೃಷ್ಟಿಸಿದ್ದಾರೆ. ನಿಶಾದ್ ಕುಮಾರ್ 2020 ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಮತ್ತೊಂದು ಪದಕವನ್ನ ತಂದಿದ್ದಾರೆ. ಅವರು ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದು, ನಿಶಾದ್ ಪ್ರತಿಭೆಯಿಂದ ಶ್ರೀಮಂತ, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟಾಪ್ 3 ತಲುಪಿದ್ದರು. ಅವರು ಅಮೆರಿಕಾದ 2 ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ನಿಶಾದ್ ಕುಮಾರ್ ಹಿಮಾಚಲ ಪ್ರದೇಶದ

ಪ್ಯಾರಾಲಂಪಿಕ್ ನಲ್ಲಿ ಮತ್ತೊಂದು ಪದಕ| ಎತ್ತರ ಜಿಗಿತದಲ್ಲಿ ನಿಶಾದ್‌ಗೆ ಬೆಳ್ಳಿ Read More »

ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಸೆ.30ರವರೆಗೂ ವಿಸ್ತರಣೆ| ಲೋಹದ ಹಕ್ಕಿಗಳ ಹಾರಾಟಕ್ಕೆ ತಡೆ ಮುಂದುವರಿಸಿದ ಕೇಂದ್ರ

ನವದೆಹಲಿ: ಕಳೆದ ವರ್ಷ ಮಾರ್ಚ್​ 23ರಿಂದಲೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಸೆ.30ರ ವರೆಗೂ ಕೇಂದ್ರ ಸರ್ಕಾರ ಮುಂದುವರೆಸಿದೆ. ಇದೇ ಆಗಸ್ಟ್ 31ಕ್ಕೆ ಮುಗಿಯಬಹುದು ಎಂದು ಹೇಳಲಾಗಿತ್ತಾದರೂ, ಕೊರೊನಾ ಇಳಿಕೆ ಕಾಣದ ಪರಿಣಾಮಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ಮೇಲಿನ ನಿರ್ಬಂಧವನ್ನು ಸೆಪ್ಟೆಂಬರ್​ 30ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಇಂದು ಆದೇಶ ಹೊರಡಿಸಿದೆ. ಈ ಆದೇಶದಂತೆ, ಸೆಪ್ಟೆಂಬರ್​ 30ರವರೆಗೆ ಭಾರತದಿಂದ ಯಾವುದೇ ವಿಮಾನಗಳೂ ಬೇರೆ ರಾಷ್ಟ್ರಗಳಿಗೆ ಹಾರಾಟ ಮಾಡುವುದಿಲ್ಲ, ಹಾಗೇಯೆ ಬೇರೆ ದೇಶಗಳ ವಿಮಾನಕ್ಕೂ ಭಾರತಕ್ಕೆ ಪ್ರವೇಶ

ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಸೆ.30ರವರೆಗೂ ವಿಸ್ತರಣೆ| ಲೋಹದ ಹಕ್ಕಿಗಳ ಹಾರಾಟಕ್ಕೆ ತಡೆ ಮುಂದುವರಿಸಿದ ಕೇಂದ್ರ Read More »

ಧರ್ಮಸ್ಥಳ:ರಾತ್ರಿ ಜೊತೆಗಿದ್ದ ಪತ್ನಿ‌ ಮುಂಜಾನೆ ಪರಾರಿ| ಪತಿಯಿಂದ ನಾಪತ್ತೆ ದೂರು|

ಬೆಳ್ತಂಗಡಿ: ಎರಡು ಮಕ್ಕಳ ತಾಯಿಯೊಬ್ಬಳು ಗಂಡ, ಮಕ್ಕಳನ್ನು ಬಿಟ್ಟು ಹಣ, ಒಡವೆ ಜೊತೆ‌ ನಾಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ರಾಜಿ ರಾಘವನ್ ನಾಪತ್ತೆಯಾದ ಮಹಿಳೆಯಾಗಿದ್ದು, ಈ ಕುರಿತು ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ರಾಜಿ ಜುಲೈ 11 ರಂದು ನೆರಿಯದ ನಾಯಿಕಟ್ಟೆಯಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆಗಸ್ಟ್ 27ರ ರಾತ್ರಿ ಪತಿಯ ಜೊತೆ ಮಲಗಿದ್ದ ಅವರು 11 ಗಂಟೆಯ ಸುಮಾರಿಗೆ

ಧರ್ಮಸ್ಥಳ:ರಾತ್ರಿ ಜೊತೆಗಿದ್ದ ಪತ್ನಿ‌ ಮುಂಜಾನೆ ಪರಾರಿ| ಪತಿಯಿಂದ ನಾಪತ್ತೆ ದೂರು| Read More »

ಚಲಿಸುತ್ತಿದ್ದಂತೆ ನಡುರಸ್ತೆಯಲ್ಲೇ ಹೊತ್ತಿ‌ ಉರಿದ ಕಾರು

ಬೆಂಗಳೂರು: ಚಲಿಸುತಿದ್ದ ಕಾರೊಂದು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಣಚಿನಕುಪ್ಪೆ ಬಳಿ ನಡೆದಿದೆ. ರಸ್ತೆ ಮಧ್ಯೆಯೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರನ್ನು ರಸ್ತೆ ಪಕ್ಕ ತಂದು ನಿಲ್ಲಿಸಲಾಗಿದೆ. ಕ್ಷಣಾರ್ಧದಲ್ಲಿ ಏಕಾಏಕಿ ಕಾರು ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ನೆಲಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಲಿಸುತ್ತಿದ್ದಂತೆ ನಡುರಸ್ತೆಯಲ್ಲೇ ಹೊತ್ತಿ‌ ಉರಿದ ಕಾರು Read More »

ಮಾರ್ಕೆಟ್ ರಸ್ತೆಯಲ್ಲಿ ಕಂಡು ಬಂತು ಕತ್ತರಿಸಿದ ಕೈ ತುಂಡು| ಕೈ ಕಂಡು ಬೆಚ್ಚಿಬಿದ್ದ ಜನ|

ಬೆಂಗಳೂರು: ರಸ್ತೆ ಮೇಲೆ ಬಿದ್ದಿದ್ದ ಕತ್ತರಿಸಿ ಹಾಕಲಾಗಿದ್ದ ಕೈ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೊಡಿಗೇಹಳ್ಳಿ ಮುಖ್ಯರಸ್ತೆಯ ಮೋರ್ ಶೋರೂಂ ಬಳಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಯಾರೋ ಕಿಡಿಗೇಡಿಗಳು ಕೊಡಿಗೇಹಳ್ಳಿ ಮುಖ್ಯರಸ್ತೆಯ ಮೋರ್ ಶೋ ರೂಂ ಬಳಿ ಮುಂಗೈ ಒಂದನ್ನು ಎಸೆದು ಹೋಗಿದ್ದರು. ಇದನ್ನು ಕಂಡ ಜನ ಮನುಷ್ಯರ ಕೈ ಕಟ್ ಮಾಡಿ ಎಸೆದಿದ್ದಾರೆ ಎಂದು ಬೆಚ್ಚಿಬಿದಿದ್ದಾರೆ. ಕೃತಕ ಮುಂಗೈ ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ಜನರಿಗೆ ಗಾಬರಿಯಾಗಿದೆ. ಹಂತಕರು

ಮಾರ್ಕೆಟ್ ರಸ್ತೆಯಲ್ಲಿ ಕಂಡು ಬಂತು ಕತ್ತರಿಸಿದ ಕೈ ತುಂಡು| ಕೈ ಕಂಡು ಬೆಚ್ಚಿಬಿದ್ದ ಜನ| Read More »

ಅನಾಥ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ| ಮೂವರ ಬಂಧನ

ಮಹಾರಾಷ್ಟ್ರ: ತಂದೆಯ ಸಾವಿನ ಬಳಿಕ ಬೀದಿಪಾಲಾಗಿದ್ದ ಹದಿನೇಳು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ಈ ಘಟನೆ ನಡೆದಿದ್ದು, ಈ ಸಾಮೂಹಿಕ ಅತ್ಯಾಚಾರಕ್ಕೆ ಹೊರತಾಗಿ ಆರೋಪಿಗಳು ಪ್ರತ್ಯೇಕವಾಗಿ 2020ರ ನವೆಂಬರ್‌ನಿಂದ ಈ ವರ್ಷದ ಆಗಸ್ಟ್‌ವರೆಗೆ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ತಾಯಿ ಮನೆಬಿಟ್ಟು ಹೋದ ಬಳಿಕ ಬಾಲಕಿ ತಂದೆಯ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕಳೆದ

ಅನಾಥ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ| ಮೂವರ ಬಂಧನ Read More »

ಪ್ಯಾರಾಲಂಪಿಕ್ಸ್| ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ ಪಟೇಲ್

ಟೋಕಿಯೋ: ಇಲ್ಲಿ‌ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಕ್ರೀಡಾ ಪಟು ಭಾವಿನಾ ಪಟೇಲ್ ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 3-4 ಅಂಕಗಳ ಅಂತರದಿಂದ ಸೋಲು ಕಾಣುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟೇಬಲ್ ಟೆನಿಸ್​ನ ಫೈನಲ್‌ ಪಂದ್ಯದಲ್ಲಿ ಚೀನಾದ ಝೋ ಯಿಂಗ್ ವಿರುದ್ಧ 0-3 ಅಂತರದಿಂದ ಸೋಲು ಕಾಣುವ ಮೂಲಕ ಭಾವಿನಾ ಚಿನ್ನ ಗೆಲ್ಲುವಲ್ಲಿ ಎಡವಿದರು. ಆದರೆ, ಪ್ಯಾರಾಲಿಂಪಿಕ್ಸ್​ನ ಟೇಬಲ್ ಟೆನಿಸ್​ನಲ್ಲಿ ಭಾರತ ಈವರೆಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದೇ ಇಲ್ಲ. ಇದೇ ಮೊದಲ ಬಾರಿಗೆ

ಪ್ಯಾರಾಲಂಪಿಕ್ಸ್| ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾವಿನಾ ಪಟೇಲ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ನಿಮ್ಮ ರಾಶಿಗಳ ಈ ವಾರದ ಭವಿಷ್ಯ ತಿಳಿದುಕೊಂಡು ಅದರಂತೆ ಕಾರ್ಯನಿರ್ವಹಿಸಿ. ಶುಭವಾಗಲಿ… ವಾರಭವಿಷ್ಯ: ತಾ.29-08-2021 ರಿಂದ ತಾ.05-09-2021 ರವರೆವಿಗೆ. ಮೇಷ: ಸಾಂಸಾರಿಕವಾಗಿ ನಿಮ್ಮ ಮನಸ್ಸು ಸದಾ ಯೋಚಿಸುವಂತಾಗಲಿದೆ. ಆಗಾಗ ಶುಭಮಂಗಲ ಕಾರ್ಯಗಳಿಗಾಗಿ ಓಡಾಟವು ಕಂಡು ಬರುವುದು. ದೈಹಿಕ ಆರೋಗ್ಯವು ಏರುಪೇರಾದರೂ ತಾತ್ಕಾಲಿಕವೆನ್ನಬಹುದು. ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಅನಾವಶ್ಯಕವಾಗಿ ಕಿರಿಕಿರಿ ತಪ್ಪಲಾರದು. ಅನೇಕ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಆಸ್ತಿ ವಿಚಾರದಲ್ಲಿ ಕಲಹ| ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಒಂದೇ ಕುಟುಂಬದ ಸಹೋದರರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮಧುರಖಂಡಿ ಗ್ರಾಮದ ತೋಟದ ಮನೆಯಲ್ಲಿ ಇದ್ದ ಹನುಮಂತ ಉದಗಟ್ಟಿ(45) ಮಲ್ಲಪ್ಪ ಉದಗಟ್ಟಿ(35), ಬಸಪ್ಪ ಉದಗಟ್ಟಿ(37) ಈಶ್ವರ ಉದಗಟ್ಟಿ(35) ಅವರನ್ನು ಕೊಲೆ ಮಾಡಲಾಗಿದೆ. ತೋಟದ ಮನೆಯಲ್ಲಿ ಈ ನಾಲ್ವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆನ್ನಲಾಗಿದ್ದು, ಪುಟಾಣಿ ಎಂಬುವರ ಮನೆಯವರ ವಿರುದ್ಧ ಕೊಲೆ ಆರೋಪ

ಆಸ್ತಿ ವಿಚಾರದಲ್ಲಿ ಕಲಹ| ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ Read More »