August 2021

ಅತ್ಯಾಚಾರ ಮಾಡಿದ್ದ ಪಾದ್ರಿಯನ್ನೇ ವರಿಸಲು ಹೊರಟಿದ್ದ ಸಂತ್ರಸ್ತ ಯುವತಿ| ಸುಪ್ರೀಂ ನಿರಾಕರಣೆ|

ತಿರುವನಂತಪುರಂ: ಅತ್ಯಾಚಾರ ಮಾಡಿ ಮಗು ಕರುಣಿಸಿದ್ದ ಪಾದ್ರಿಯನ್ನೇ ಮದುವೆಯಾಗುವುದಾಗಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲೇ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಹೈಕೋರ್ಟ್ ಈಗಾಗ್ಲೇ ಆರೋಪಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿದ್ದು, ಆ ತೀರ್ಪಿನ ಬಗ್ಗೆ ಮತ್ತೆ ಮೂಗು ತೂರಿಸಲು ಮುಂದಾಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಣ್ಣೂರಿನ ಕೆಥೋಲಿಕ್ ಚರ್ಚ್ ನಲ್ಲಿ ಪಾದ್ರಿಯಾಗಿದ್ದ ರಾಬಿನ್ ವಡಕ್ಕುಂಚೇರಿ ಎಂಬಾತ 2017ರಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ್ದ. ಹುಡುಗಿ ಬಳಿಕ ಮಗುವನ್ನು […]

ಅತ್ಯಾಚಾರ ಮಾಡಿದ್ದ ಪಾದ್ರಿಯನ್ನೇ ವರಿಸಲು ಹೊರಟಿದ್ದ ಸಂತ್ರಸ್ತ ಯುವತಿ| ಸುಪ್ರೀಂ ನಿರಾಕರಣೆ| Read More »

ಇ-ರುಪಿಗೆ ಚಾಲನೆ ನೀಡಿದ ಪ್ರಧಾನಿ| ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸೌಲಭ್ಯ ಏನಿದರ ವಿಶೇಷತೆ ಅಂತೀರಾ? ಈ ಸ್ಟೋರಿ ಓದಿ.

ನವದೆಹಲಿ: ಭಾರತವನ್ನು ಡಿಜಿಟಲೀಕರಣ ಮಾಡಲು ಪಣ ತೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಮೂಲಕ ಹಣ ಪಾವತಿ ಮಾಡುವ ಇ-ರುಪಿ (E-RUPI) ಸೇವೆಗೆ ಇಂದು ಚಾಲನೆ ನೀಡಿದ್ದಾರೆ. ಈಗಾಗಲೇ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ವಾಟ್ಸಾಪ್ ಪೇ ಮುಂತಾದ ಡಿಜಿಟಲ್ ಪೇಮೆಂಟ್​ ಆಯ್ಕೆಗಳಿವೆಯಲ್ಲ ಎಂದು ನೀವು ಹುಬ್ಬೇರಿಸಬಹುದು. ಆದರೆ, ಈ ಇ-ರುಪಿ ಬಹಳ ವಿಶೇಷವಾಗಿದ್ದು, ಇದರ ಮೂಲಕ ಇಂಟರ್ನೆಟ್, ಸ್ಮಾರ್ಟ್​ಫೋನ್​ಗಳು ಇಲ್ಲದೆಯೂ ವೋಚರ್ ಮೂಲಕ ಹಣ ಪಾವತಿ ಮಾಡಲು ಸಾಧ್ಯವಿದೆ. ಇಂದು ಈ ಇ-ರುಪಿ ಸೇವೆಗೆ

ಇ-ರುಪಿಗೆ ಚಾಲನೆ ನೀಡಿದ ಪ್ರಧಾನಿ| ಇಂಟರ್ನೆಟ್ ಇಲ್ಲದೇ ಹಣ ಪಾವತಿ ಸೌಲಭ್ಯ ಏನಿದರ ವಿಶೇಷತೆ ಅಂತೀರಾ? ಈ ಸ್ಟೋರಿ ಓದಿ. Read More »

ಕಾರ್ಕಳ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಫಾಲ್ಸ್ ನಲ್ಲಿ ಮುಳುಗಿ ಸಾವು

ಕಾರ್ಕಳ : ಈಜಲು ಹೊಗಿದ್ದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಭಿ ಫಾಲ್ಸ್ ನಲ್ಲಿ ಸೋಮವಾರ ಸಂಭವಿಸಿದೆ. ವರ್ಷಿತಾ (19 ವರ್ಷ) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಮೂಲತಃ ಮಂಗಳೂರಿನವಳಾಗಿದ್ದು ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಭಾಗದಲ್ಲಿ ಕಲಿಯುತಿದ್ದಳು ಎನ್ನಲಾಗಿದೆ.ವರ್ಷಿತಾ ಮತ್ತು ಇನ್ನೋರ್ವ ವಿದ್ಯಾರ್ಥಿನಿ ಸೇರಿ ಪಾಲ್ಸ್ ಗೆ ತೆರಳಿದ್ದು ಈಜಲೆಂದು ನೀರಿಗೆ ಇಳಿದಿದ್ದರು. ಈ ವೇಳೆ ಮುಳುಗಿದ್ದಾಳೆ ಎನ್ನಲಾಗಿದೆ, ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು

ಕಾರ್ಕಳ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಫಾಲ್ಸ್ ನಲ್ಲಿ ಮುಳುಗಿ ಸಾವು Read More »

ರಾಜ್ಯ ಸಚಿವ ಸಂಪುಟ ನಾಳೆಯೇ ಫೈನಲ್, ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ- ಸಿಎಂ ಬೊಮ್ಮಾಯಿ

ನವದೆಹಲಿ: ಇಂದು ಸಂಜೆ ಅಥವಾ ನಾಳೆ ಸಚಿವ ಸಂಪುಟ ರಚನೆ ಫೈನಲ್ ಆಗಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬ್ಯಾಲೆನ್ಸ್ ಸಂಪುಟ ರಚನೆಗೆ ಒತ್ತು ನೀಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ದೆಹಲಿಗೆ ಬಂದ ಶಾಸಕರ ಜೊತೆಯೂ ಚರ್ಚಿಸಿದ್ದೇನೆ. ಎಲ್ಲಾ ಶಾಸಕರು ಸಚಿವರಾಗಲು ಸಾಧ್ಯವಾಗದು. ಪ್ರಾದೇಶಿಕ ಸಮತೋಲನ ಕಾಪಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯಾವೆಲ್ಲ ಆಧಾರದ ಮೇಲೆ ಹಾಗೂ ಎಷ್ಟು ಹಂತದಲ್ಲಿ ಸಂಪುಟ ರಚನೆ ಮಾಡಬೇಕು ಎಂಬ ಬಗ್ಗೆ ವರಿಷ್ಠರನ್ನು ಭೇಟಿಯಾಗಿ

ರಾಜ್ಯ ಸಚಿವ ಸಂಪುಟ ನಾಳೆಯೇ ಫೈನಲ್, ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ- ಸಿಎಂ ಬೊಮ್ಮಾಯಿ Read More »

ಬೊಮ್ಮಾಯಿ ಸಂಪುಟ| ಕೋಟ, ಅಂಗಾರ ಔಟ್ |ಸುನಿಲ್‌ ಕುಮಾರ್‌, ಭರತ್‌ ಶೆಟ್ಟಿ ಇನ್…!?

ಮಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ನಡೆಯುತ್ತಿದೆ. ಕರಾವಳಿ ಸಮಿತಿಯೂ ಸಚಿವ ಸ್ಥಾನಕ್ಕೆ ಲಾಭ ನಡೆಯುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಸ್.ಅಂಗಾರಕ್ಕೆ ಕೋಕ್ ನೀಡುವುದು ಖಚಿತವಾಗಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಸಂಪುಟ ಸೇರುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಎದುರಾಗುವ ಚುನಾವಣೆಯ ದೃಷ್ಟಿಯಿಂದ ರಾಜ್ಯದ ನಾಯಕತ್ವ

ಬೊಮ್ಮಾಯಿ ಸಂಪುಟ| ಕೋಟ, ಅಂಗಾರ ಔಟ್ |ಸುನಿಲ್‌ ಕುಮಾರ್‌, ಭರತ್‌ ಶೆಟ್ಟಿ ಇನ್…!? Read More »

ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ|

ಅಟ್ಲಾಂಟಾ: ಅವಳಿ ಮಕ್ಕಳು, ತ್ರಿವಳಿ ಮಕ್ಕಳು, ನಾಲ್ಕು-ಐದು ಮಕ್ಕಳು ಒಟ್ಟಿಗೆ ಹುಟ್ಟುವುದನ್ನು ಕೇಳಿರುತ್ತೀರಿ. ಆದರೆ ಈ ದಂಪತಿ ಕಥೆಯೇ ಬೇರೆ. ಜಾರ್ಜಿಯಾದ ದಂಪತಿ ಒಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಅದು ಹೇಗೆ ಗೊತ್ತಾ?… ಜಾರ್ಜಿಯಾದಲ್ಲಿ ನೆಲೆಸಿರುವ ಕ್ರಿಸ್ಟಿನಾ ಒಜ್ತುರ್ಕ್ ಮತ್ತು ಗಾಲಿಪ್​ಗೆ 20 ಪ್ಲಸ್​ ಒಂದು ಒಟ್ಟು 21 ಮಕ್ಕಳು. ಗಾಲಿಪ್​ ವಯಸ್ಸು 53 ವರ್ಷವಾದರೆ ಕ್ರಿಸ್ಟಿನಾ ಇನ್ನೂ 23 ವರ್ಷದವಳು. ಈ ದಂಪತಿಗೆ ಆರು ವರ್ಷದ ವಿಕ್ಟೋರಿಯಾ ಹೆಸರಿನ ಮಗಳಿದ್ದಾಳೆ. ಆದರೆ

ಒಂದೇ ವರ್ಷದಲ್ಲಿ 20 ಮಕ್ಕಳನ್ನು ಪಡೆದ ಮಹಾತಾಯಿ| Read More »

ಕಾರವಾರ ಕಡಲ ಕಿನಾರೆಯಲ್ಲಿ ಮಾಜಿ ಸಿಎಂ ಸಿದ್ದು ಜಾಲಿ ವಾಕ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಸ್ಥಳಗಳನ್ನು ವೀಕ್ಷಿಸಲು ಬಂದ ವಿರೋಧಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕಾರವಾರಕ್ಕೆ ಭೇಟಿ ನೀಡಿ ಮುಂಜಾನೆ ಕಡಲ ಕಿನಾರೆಯಲ್ಲಿ ವಾಕಿಂಗ್ ಹೋಗಿದ್ದರೆ. ನಿನ್ನೆ ರಾತ್ರಿ ಹುಬ್ಬಳ್ಳಿಯಿಂದ ಬಂದ ಸಿದ್ದರಾಮಯ್ಯನವರು ಕಾರವಾರದ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಇಂದು ಮುಂಜಾನೆ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ವಾಕ್ ಮಾಡಿದರು. ಇನ್ನೂ ಇಂದು ಜಿಲ್ಲೆಯ ಕಾರವಾರ, ಅಂಕೋಲಾ ಹಾಗೂ ಯಲ್ಲಾಪುರ ತಾಲೂಕಿನ ನೆರೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಕಾರವಾರ ತಾಲೂಕಿನ

ಕಾರವಾರ ಕಡಲ ಕಿನಾರೆಯಲ್ಲಿ ಮಾಜಿ ಸಿಎಂ ಸಿದ್ದು ಜಾಲಿ ವಾಕ್ Read More »

ಜೂಜು‌ ದಂಧೆ ಪ್ರಕರಣ| ಹರಿರಾಜ್ ಶೆಟ್ಟಿ ಮೇಲೆ ಚಾರ್ಜ್ ಶೀಟ್

ಬೆಂಗಳೂರು: ಮಹಾನಗರದ ಹಲವು ಕಡೆ ಜೂಜು ಅಡ್ಡೆ ನಿರ್ಮಿಸಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ ಮುಂಗಾರು ಮಳೆ-2 ಸಿನಿಮಾ ಖ್ಯಾತಿಯ ನಟಿ ನೇಹಾ ಶೆಟ್ಟಿ ತಂದೆ, ಉದ್ಯಮಿ ಹರಿರಾಜ್ ಶೆಟ್ಟಿಯನ್ನು ಬಂಧಿಸಿದ ಸಿಸಿಬಿ ಅಧಿಕಾರಿಗಳು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗ್ಯಾಬ್ಲಿಂಗ್ ಉದ್ಯಮಿ ಹರಿರಾಜ್ ಶೆಟ್ಟಿ, ಮಹಿಳೆಯರು ಸೇರಿದಂತೆ ಒಟ್ಟು 42 ಮಂದಿ ಗ್ಯಾಂಬ್ಲರ್ ಗಳ ವಿರುದ್ಧ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇವರು ಪೂಲ್ ಮತ್ತು ರಿ ಕ್ರಿಯೇಷನ್ ಹೆಸರಿನಲ್ಲಿ

ಜೂಜು‌ ದಂಧೆ ಪ್ರಕರಣ| ಹರಿರಾಜ್ ಶೆಟ್ಟಿ ಮೇಲೆ ಚಾರ್ಜ್ ಶೀಟ್ Read More »

ಡಿಸಿ‌ ಆದೇಶಕ್ಕೆ ಡೋಂಟ್ ಕೇರ್| ಮಂಗಳೂರು ಕಾಂಗ್ರೆಸ್ ‌ಕಚೇರಿಯಲ್ಲಿ ಭರ್ಜರಿ ಪದಗ್ರಹಣ|

ಮಂಗಳೂರು: ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ಅಗಸ್ಟ್ 10 ವರೆಗೆ ಯಾವುದೇ ಸಭೆ ಸಮಾರಂಭ ನಡೆಸಬಾರದೆಂದು ಜಿಲ್ಲಾಧಿಕಾರಿ ಆದೇಶ ನೀಡಿದರೂ, ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಪದಗ್ರಹಣ ಭರ್ಜರಿ ಸಮಾರಂಭ ಏರ್ಪಡಿಸಲಾಗಿದೆ. ಈಗಾಗಲೇ ಕೇರಳದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಲ್ಲಿದ್ದು ಗಡಿ ಜಿಲ್ಲೆಯಾದ ದಕ್ಷಿಣಕನ್ನಡದಲ್ಲಿ ಆತಂಕ ಎದುರಾಗಿದೆ. ಈ ಹಿನ್ನಲೆ ನಿನ್ನೆ ನಡೆದ ಜಿಲ್ಲಾಡಳಿತದ ಸಭೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಗಸ್ಟ್ 10 ರವರೆಗೆ ಯಾವುದೇ ಸಭೆ ಸಮಾರಂಭ, ರಾಜಕೀಯ ಸಭೆಗಳನ್ನು ನಡೆಸದಂತೆ ನಿರ್ಬಂಧ

ಡಿಸಿ‌ ಆದೇಶಕ್ಕೆ ಡೋಂಟ್ ಕೇರ್| ಮಂಗಳೂರು ಕಾಂಗ್ರೆಸ್ ‌ಕಚೇರಿಯಲ್ಲಿ ಭರ್ಜರಿ ಪದಗ್ರಹಣ| Read More »

ಸೊಸೆಯ ಕಾಮದಾಹಕ್ಕೆ ಕೊನೆ ಹಾಡಿದ ಮಾವ…! ಆತ ಮಾಡಿದ್ದೇನು ಗೊತ್ತಾ?

ಆಂದ್ರಪ್ರದೇಶ: ಅಕ್ರಮ ಸಂಬಂಧ ಹೊಂದಿದ್ದ ಸೊಸೆಯನ್ನು ಮಾವನೇ ಕೊಲೆಮಾಡಿದ ಘಟನೆ ರಾಜಮಂಡ್ರಿಯಲ್ಲಿ ನಡೆದಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಮಲ್ಕಿಪುರಂ ಮಂಡಲದ ಮೆಡಿಚೆರ್ಲಾ ಪಾಳ್ಯಂ ನಿವಾಸಿಯಾಗಿರುವ 25 ವರ್ಷದ ಪ್ರಿಯಾಮಣಿ ಮೃತಪಟ್ಟ ಮಹಿಳೆ. ಕೊಲೆ ಆರೋಪಿ ಆಕೆಯ ಮಾವ ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ಯನಾರಾಯಣನ ಮಗ ವಿಜಯಕುಮಾರ್ ಕತಾರ್ ನಲ್ಲಿ ಕೆಲಸದಲ್ಲಿದ್ದಾನೆ. ವಿಜಯಕುಮಾರ್ ಪತ್ನಿ ಪ್ರಿಯಾಮಣಿ ಪೋಷಕರು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿದ್ದು, ಈ ನಡುವೆ ಪ್ರಿಯಾಮಣಿ ಬೇರೆ ಯುವಕನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಇದರಿಂದಾಗಿ ಗಂಡನ ಕುಟುಂಬದವರು

ಸೊಸೆಯ ಕಾಮದಾಹಕ್ಕೆ ಕೊನೆ ಹಾಡಿದ ಮಾವ…! ಆತ ಮಾಡಿದ್ದೇನು ಗೊತ್ತಾ? Read More »