August 2021

ಕೋವಿಡ್ ಹಿನ್ನೆಲೆ: ಮಂಗಳೂರು ವಿವಿ ಪರೀಕ್ಷೆಗಳು ತಾತ್ಕಾಲಿಕ ರದ್ದು

ಮಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮಂಗಳೂರು ವಿಶ್ವವಿದ್ಯಾಲಯದಿಂದ ನಡೆಯುತ್ತಿರುವ ಎಲ್ಲಾ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಮಂಗಳೂರು ವಿಶ್ವವಿದ್ಯಾಲಯದ ರಿಜೆಸ್ಟಾರ್ ಅವರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಂತರ್ ಜಿಲ್ಲೆಯಾದ ಕೇರಳದ ಕಾಸರಗೋಡಿನಿಂದ ಆಗಮಿಸುತ್ತಾರೆ. ನೆರೆಯ ರಾಜ್ಯ \ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ. ಸಂಭಾವ್ಯ […]

ಕೋವಿಡ್ ಹಿನ್ನೆಲೆ: ಮಂಗಳೂರು ವಿವಿ ಪರೀಕ್ಷೆಗಳು ತಾತ್ಕಾಲಿಕ ರದ್ದು Read More »

ಆ.4ರಂದು ರಾಜ್ಯ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ| ಹೊಸ ಸಚಿವರು ಯಾರು ಎಂಬುದೇ ಸಸ್ಪೆನ್ಸ್…!

ಬೆಂಗಳೂರು: ಬಹು ನಿರೀಕ್ಷಿತ ಬಸವರಾಜ ಬೊಮ್ಮಾಯಿ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬುಧವಾರ (ಅ.04) ಸಂಜೆ 5ಕ್ಕೆ ರಾಜಭವನದ ಗಾಜಿನಮನೆಯಲ್ಲಿ ನೂತನ ಸಚಿವ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಅಳೆದು ತೂಗಿ ಹೈಕಮಾಂಡ್ ಸಚಿವರ ಪಟ್ಟಿ ಸಿದ್ಧಪಡಿಸಿದ್ದು, ಒಟ್ಟು 26 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರ ಹೆಸರುಗಳನ್ನು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ. ನೂತನವಾಗಿ ಆಯ್ಕೆಯಾದ ಸಚಿವರಿಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ತಾವರ್ ಚಂದ್

ಆ.4ರಂದು ರಾಜ್ಯ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ| ಹೊಸ ಸಚಿವರು ಯಾರು ಎಂಬುದೇ ಸಸ್ಪೆನ್ಸ್…! Read More »

ದಕ್ಷಿಣ ಕನ್ನಡದ ಗಡಿಗ್ರಾಮಗಳ ಮದ್ಯದಂಗಡಿಗಳು ಆ.15ರವರೆಗೆ ಬಂದ್

ಮಂಗಳೂರು : ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಕೇರಳ ರಾಜ್ಯದ ಗಡಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿ ಬಂದ್ ಮಾಡಲಾಗಿದೆ. ಕೇರಳದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವುದರಿಂದ ಕೇರಳದ ಗಡಿಭಾಗದ ಜನತೆ ದಕ್ಷಿಣ ಕನ್ನಡ ಜಿಲ್ಲೆಯ ಮದ್ಯದಂಗಡಿಗಳನ್ನು ಅವಲಂಬಿಸಿರುವದರಿಂದ ಕೊರೊನಾ ಪ್ರಸರಣವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಕೇರಳ ಗಡಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಆಗಸ್ಟ್ 15 ವರೆಗೆ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.

ದಕ್ಷಿಣ ಕನ್ನಡದ ಗಡಿಗ್ರಾಮಗಳ ಮದ್ಯದಂಗಡಿಗಳು ಆ.15ರವರೆಗೆ ಬಂದ್ Read More »

ಸುಳ್ಯ ಸೇರಿದಂತೆ ರಾಜ್ಯದ ಹಲವು ಪಟ್ಟಣಗಳು ಕೋವಿಡ್ ಹಾಟ್ ಸ್ಪಾಟ್| ಆತಂಕ ಮೂಡಿಸಿದ ವರದಿ|

ಮಂಗಳೂರು: ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಮತ್ತೆ ರಾಜ್ಯದಲ್ಲಿ ಕೋವಿಡ್ ಆತಂಕ ಎದುರಾಗಿದೆ. ಈ ಹಿನ್ನಲೆ ಕೆಲವು ನಗರಗಳನ್ನು ಕೋವಿಡ್‌ ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ರಾಜ್ಯಾದ್ಯಂತ ನಗರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬರುತ್ತಿದೆ. ಇದರ ಜೊತೆಗೆ ನೆರೆಯ ರಾಜ್ಯ ಕೇರಳದಲ್ಲಿ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ದಕ್ಷಿಣ ಕನ್ನಡ, ಮಡಿಕೇರಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚು ಹೆಚ್ಚು ಕಂಡುಬರುತ್ತಿದೆ. ಅತಿ ಹೆಚ್ಚು ಸೋಂಕು ಪತ್ತೆಯಾದ 20 ನಗರಗಳಲ್ಲಿ ದಕ್ಷಿಣ ಕನ್ನಡದಲ್ಲಿ ನಾಲ್ಕು, ಉತ್ತರ ಕನ್ನಡದಲ್ಲಿ

ಸುಳ್ಯ ಸೇರಿದಂತೆ ರಾಜ್ಯದ ಹಲವು ಪಟ್ಟಣಗಳು ಕೋವಿಡ್ ಹಾಟ್ ಸ್ಪಾಟ್| ಆತಂಕ ಮೂಡಿಸಿದ ವರದಿ| Read More »

ಕೊರೊನಾ ಮೂರನೇ ಅಲೆ ಭೀತಿ: ಬೆಂಗಳೂರಿನಲ್ಲಿ ಇಂದಿನಿಂದ ನೈಟ್ ಕರ್ಪ್ಯೂ‌‌ ಸ್ಟ್ರಿಕ್ಟ್

ಬೆಂಗಳೂರು: ನಗರದಲ್ಲಿ ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂವನ್ನು ಬಿಗಿಗೊಳಿಸಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ನೈಟ್​ ಕರ್ಫ್ಯೂ ಈಗ ಜಾರಿಯಲ್ಲಿ ಇದ್ದರೂ ಬೆಂಗಳೂರಿಗರು ಡೋಂಟ್​ ಕೇರ್​ ಎನ್ನುತ್ತಿರುವ ಹಿನ್ನೆಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಇದೆ ಕಾರಣಕ್ಕೆ ಕಠಿಣ ನಿಯಮವನ್ನು ರೂಪಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಆದ್ದರಿಂದ ಇಂದು ರಾತ್ರಿ 10 ಗಂಟೆಯಿಂದ ರಾತ್ರಿ ಕರ್ಫ್ಯೂ ಶುರುವಾಗಲಿದೆ. ಪ್ರತಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5

ಕೊರೊನಾ ಮೂರನೇ ಅಲೆ ಭೀತಿ: ಬೆಂಗಳೂರಿನಲ್ಲಿ ಇಂದಿನಿಂದ ನೈಟ್ ಕರ್ಪ್ಯೂ‌‌ ಸ್ಟ್ರಿಕ್ಟ್ Read More »

ಆಳಿವೆ ಬಾಗಿಲ ಬಳಿ ದೋಣಿ ಅವಘಡ: ಮೀನುಗಾರರು ಅಪಾಯದಿಂದ ಪಾರು

ಗಂಗೊಳ್ಳಿ,: ಮೀನುಗಾರಿಕಾ ಋತು ಆರಂಭವಾಗುತ್ತಿದ್ದಂತೆ ಗಂಗೊಳ್ಳಿ ಬಂದರಿನ ಅಳಿವೆ ಬಾಗಿಲ ಬಳಿ ಭಾನುವಾರ ದೋಣಿ ಅವಘಡ ಉಂಟಾಗಿ ನಾಲ್ವರು ಮೀನುಗಾರರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಜಿ.ಪ್ರಕಾಶ್ ಮಾಲಕತ್ವದ ಪರಶಕ್ತಿ ಹೆಸರಿನ ದೋಣಿಯಲ್ಲಿ ನಾಲ್ವರು ಮೀನುಗಾರರು ಬಲೆಯನ್ನು ತುಂಬಿಸಿಕೊಂಡು ಮೀನುಗಾರಿಕೆ ತೆರಳುತ್ತಿದ್ದರು. ಈ ವೇಳೆ ನೀರು ದೋಣಿಯೊಳಗೆ ಬಂದು ಮಗುಚಿ ಬಲೆ ನೀರಿನಲ್ಲಿ ಮುಳುಗಿದೆ. ಬಳಿಕ ಎರಡು ಯಾಂತ್ರಿಕೃತ ದೋಣಿಗಳ ಸಹಾಯದಿಂದ ದೋಣಿಯನ್ನು ದಡಕ್ಕೆ ತರಲಾಗಿದೆ. ಅನೇಕ ವರ್ಷಗಳಿಂದ ಅಳಿವೆ ಬಾಗಿಲು ವ್ಯಾಪ್ತಿಯಲ್ಲಿ ಡ್ರೆಜ್ಜಿಂಗ್ ಮಾಡದೇ ಹೂಳು

ಆಳಿವೆ ಬಾಗಿಲ ಬಳಿ ದೋಣಿ ಅವಘಡ: ಮೀನುಗಾರರು ಅಪಾಯದಿಂದ ಪಾರು Read More »

ಕೊರೊನಾ ನೆಗೆಟಿವ್ ವರದಿ ಇಲ್ಲದೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು| 50 ಕ್ಕೂ ಹೆಚ್ಚು ಮಂದಿಗೆ ಕ್ವಾರಂಟೈನ್

ಮಂಗಳೂರು: ಕೊರೊನಾ ನೆಗೆಟಿವ್ ವರದಿ ಇಲ್ಲದೆ ಕೇರಳ ಹಾಗೂ ಮಹರಾಷ್ಟ್ರದಿಂದ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ತಾತ್ಕಾಲಿಕವಾಗಿ ಕ್ವಾರಂಟೈನ್ ನಲ್ಲಿ ಇಡಲಾದ ಘಟನೆ ಆಗಸ್ಟ್ 2 ರಂದು ನಡೆದಿದೆ. ಕೇರಳ ಹಾಗೂ ಮಹಾರಾಷ್ಟ್ರದಿಂದ ರೈಲಿನಲ್ಲಿ ಬಂದ ಪ್ರಯಾಣಿಕರಲ್ಲಿ ಕೋವಿಡ್ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈ ಸಂದರ್ಭ ನೆಗೆಟಿವ್ ವರದಿ ಹೊಂದಿರದ ಕೇರಳ ಮತ್ತು ಮಹಾರಾಷ್ಟ್ರದ 50 ಕ್ಕೂ ಹೆಚ್ಚು ಪ್ರಯಾಣಿಕರನ್ನುತಡೆಹಿಡಿದು ನಗರದ ಪುರಭವನದಲ್ಲಿ ಇರಿಸಿ ಎಲ್ಲರನ್ನೂ ಗಂಟಲ ದ್ರವ ಪರೀಕ್ಷೆಗೆ

ಕೊರೊನಾ ನೆಗೆಟಿವ್ ವರದಿ ಇಲ್ಲದೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು| 50 ಕ್ಕೂ ಹೆಚ್ಚು ಮಂದಿಗೆ ಕ್ವಾರಂಟೈನ್ Read More »

ನೈಜೀರಿಯನ್ ಪ್ರಜೆ ಸಾವು, ಪೊಲೀಸರ ಮೇಲೆ ಹಲ್ಲೆ ಯತ್ನ, ಲಾಠಿಚಾರ್ಜ್

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ನೈಜಿರಿಯನ್ ಪ್ರಜೆ ಠಾಣೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಜೆಸಿ ನಗರ ಪೊಲೀಸ್ ಠಾಣೆಯ ಮುಂದೆ ನೈಜಿರಿಯನ್ ಪ್ರಜೆಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ನೈಜಿರಿಯನ್ ಪ್ರಜೆಗಳ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದು ಹಲವರನ್ನು ಬಂಧಿಸಿದ್ದಾರೆ. ಡ್ರಗ್ಸ್ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ನೈಜಿರಿಯನ್ ಪ್ರಜೆ ಗಲಾಟೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಆದರೆ ಪೊಲೀಸರು ಆತನನ್ನು

ನೈಜೀರಿಯನ್ ಪ್ರಜೆ ಸಾವು, ಪೊಲೀಸರ ಮೇಲೆ ಹಲ್ಲೆ ಯತ್ನ, ಲಾಠಿಚಾರ್ಜ್ Read More »

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ‌ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ| ಮೊದಲ ಬಾರಿಗೆ ಉನ್ನತ ಹುದ್ದೆ ಅಲಂಕರಿಸಿದ ಭಾರತ|

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಅಧ್ಯಕ್ಷ ಸ್ಥಾನವನ್ನು ಭಾರತ ಭಾನುವಾರ ವಹಿಸಿಕೊಂಡಿದೆ. ಮುಂದಿನ ಒಂದು ತಿಂಗಳ ಕಾಲ ಭಾರತ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲಿದೆ. ಈ ಅವಧಿಯಲ್ಲಿ ಹಲವು ಮಹತ್ವದ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಲು ಭಾರತ ನಿರ್ಧರಿಸಿದೆ. ಇನ್ನೊಂದು ವಿಶೇಷವೆಂದರೆ ಆ.9ರಂದು ಭದ್ರತಾ ಮಂಡಳಿಯ ಸಭೆ ಆಯೋಜನೆಯಾಗಿದ್ದು, ಸಭೆಯ ಅಧ್ಯಕ್ಷರಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸಲಿದ್ದಾರೆ. ಈ ಮೂಲಕ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡ ದೇಶದ ಮೊದಲ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. 1992ರಲ್ಲಿ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ‌ ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ| ಮೊದಲ ಬಾರಿಗೆ ಉನ್ನತ ಹುದ್ದೆ ಅಲಂಕರಿಸಿದ ಭಾರತ| Read More »

ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿಯುತ್ತಿರುವ ಟರ್ಕಿ:ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಟರ್ಕಿ: ದಕ್ಷಿಣ ಕರಾವಳಿಯಲ್ಲಿ ಭುಗಿಲೆದ್ದಿರುವ ಕಾಡ್ಗಿಚ್ಚು ಸತತ ಐದನೇ ದಿನವು ಮುಂದುವರೆದಿದ್ದು, ಇದರಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ಭಾನುವಾರ ವರದಿ ಮಾಡಿದೆ. “ಮಾನವ್‌ಗತ್, ಮರ್ಮರಿಸ್ ಮತ್ತು ಮಿಲಸ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಇದರಿಂದಾಗಿ ಸುತ್ತಮುತ್ತಲಿನ ಹೋಟೆಲ್‌ಗಳು ಮತ್ತು ವಸತಿ ಪ್ರದೇಶಗಳನ್ನು ಸ್ಥಳಾಂತರಿಸಲಾಗಿದೆ” ಎಂದು ಟರ್ಕಿ ಕೃಷಿ ಮತ್ತು ಅರಣ್ಯ ಸಚಿವ ಬೇಕಿರ್ ಪಕ್ಡೆಮಿರ್ಲಿ ಹೇಳಿದ್ದಾರೆ. ಬುಧವಾರದಿಂದ ನಿರಂತರ ಕಾಡ್ಗಿಚ್ಚು ಆರಂಭವಾದಾಗಿದ್ದು ಈ ಹಿನ್ನಲೆ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಭಾನುವಾರ

ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿಯುತ್ತಿರುವ ಟರ್ಕಿ:ಸಾವಿನ ಸಂಖ್ಯೆ 8ಕ್ಕೆ ಏರಿಕೆ Read More »