August 2021

ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ| ಅಧಿಕೃತ ಆದೇಶ ಪ್ರಕಟ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಳೆದು ತೂಗಿ ಕೊನೆಗೂ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಹಣಕಾಸು ಖಾತೆ ಸೇರಿದಂತೆ ಪ್ರಮುಖ ಖಾತೆಯನ್ನೂ ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿದ್ದ ಸಚಿವರಿಗೆ ಬಹುತೇಕ ಅದೇ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.ಗೃಹ ಖಾತೆಯನ್ನು ಅರಗ ಜ್ಞಾನೇಂದ್ರ, ಗೋವಿಂದ ಕಾರಜೋಳ ಅವರಿಗೆ ಸಣ್ಣ ಮತ್ತು ಬೃಹತ್ ನೀರಾವರಿ, ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ಅಶೋಕ್ ಅವರಿಗೆ ಕಂದಾಯ, ಶ್ರೀರಾಮುಲು ಸಾರಿಗೆ ಖಾತೆ ನೀಡಲಾಗಿದೆ.ವಿ. ಸೋಮಣ್ಣ ಅವರಿಗೆ ವಸತಿ ಮತ್ತು […]

ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ| ಅಧಿಕೃತ ಆದೇಶ ಪ್ರಕಟ Read More »

ಪತ್ನಿಯ ಇಚ್ಚೆಗೆ ವಿರುದ್ಧದ ಲೈಂಗಿಕತೆಯೂ ಅತ್ಯಾಚಾರವೇ….| ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಕೊಚ್ಚಿ: ವೈವಾಹಿಕ ಜೀವನದಲ್ಲಿ ಲೈಂಗಿಕ ಸಂಬಂಧವನ್ನು ವ್ಯಾಖ್ಯಾನಿಸುವ ಪ್ರಮುಖ ಅವಲೋಕನದಲ್ಲಿ, ಕೇರಳ ಹೈಕೋರ್ಟ್ ಶುಕ್ರವಾರ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಗಳನ್ನು ಮಾಡುವುದು ‘ವೈವಾಹಿಕ ಅತ್ಯಾಚಾರ’ ಮತ್ತು ವಿಚ್ಛೇದನ ಪಡೆಯಲು ಅದು ಉತ್ತಮ ಆಧಾರವಾಗಿದೆ ಎಂದು ಹೇಳಿದೆ.ನ್ಯಾಯಮೂರ್ತಿ ಎ.ಮುಹಮ್ಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರನ್ನು ಒಳಗೊಂಡ ಪೀಠವು ಈ ರೀತಿ ಹೇಳಿದ್ದು, ಇದೇ ವೇಳೆ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನಕ್ಕಾಗಿ ಹೆಂಡತಿಯ ಮನವಿಯನ್ನು ಆಲಿಸುವ ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿಯ ಮನವಿಯನ್ನು ತಳ್ಳಿಹಾಕಿದೆ.

ಪತ್ನಿಯ ಇಚ್ಚೆಗೆ ವಿರುದ್ಧದ ಲೈಂಗಿಕತೆಯೂ ಅತ್ಯಾಚಾರವೇ….| ಕೇರಳ ಹೈಕೋರ್ಟ್ ಮಹತ್ವದ ತೀರ್ಪು Read More »

ಬಂಟ್ವಾಳ: ಅನೈತಿಕ ಸಂಬಂಧ ಶಂಕೆ| ತಮ್ಮನ ಕೊಲೆಗೈದ ಅಣ್ಣ|

ಬಂಟ್ವಾಳ: ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಅಣ್ಣನೋರ್ವ ತನ್ನ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬೊಂಡಾಲ ಶಾಂತಿಗುಡ್ಡೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಶಾಂತಿಗುಡ್ಡೆ ನಿವಾಸಿ ಸುಂದರ (30) ಕೊಲೆಯಾದ ವ್ಯಕ್ತಿ. ಅಣ್ಣ ರವಿ ಎಂಬಾತ ಕೊಲೆ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಸುಂದರ ಅವಿವಾಹಿತನಾಗಿದ್ದು ಮನೆಯಲ್ಲಿ ಒಬ್ಬನೇ ವಾಸವಾಗಿದ್ದ. ಆತನ ಮನೆಯ ಸಮೀಪದಲ್ಲಿ ಅಣ್ಣ ರವಿಯ ಮನೆಯಿದ್ದು ಅಲ್ಲಿಂದ ರವಿಯ ಹೆಂಡತಿ ಊಟ

ಬಂಟ್ವಾಳ: ಅನೈತಿಕ ಸಂಬಂಧ ಶಂಕೆ| ತಮ್ಮನ ಕೊಲೆಗೈದ ಅಣ್ಣ| Read More »

ಬ್ಲೂಟೂತ್ ಹೆಡ್ ಫೋನ್ ಸ್ಪೋಟಗೊಂಡು ಯುವಕ ಸಾವು| ದೇಶದಲ್ಲೇ ಮೊದಲ ದುರಂತ

ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ಯುವಕನೊಬ್ಬ ಬ್ಲೂಟೂತ್ ಹೆಡ್‌ಫೋನ್ ಸಾಧನ ಸ್ಫೋಟಗೊಂಡು ಸಾವನ್ನಪ್ಪಿದ್ದಾನೆ. ವೈರ್‌ಲೆಸ್ ಗ್ಯಾಜೆಟ್ ಸ್ಫೋಟಗೊಂಡ ನಂತರ ಯುವಕ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಬ್ಲೂ ಟೂತ್ ಸ್ಪೋಟಗೊಂಡ ಮೊದಲ ಪ್ರಕರಣ ಇದಾಗಿದೆ. ಮೃತ ಯುವಕನನ್ನು ಜೈಪುರದ ಚೌಮು ಪ್ರದೇಶದ ಉದೈಪುರಿಯಾ ಗ್ರಾಮದ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ಈತ ಹೆಚ್ಚಾಗಿ ತನ್ನ ಬ್ಲೂಟೂತ್ ಇಯರ್‌ಫೋನ್‌ ಬಳಸಿ ಫೋನಿನಲ್ಲಿ ಮಾತನಾಡುತ್ತಿದ್ದನು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವೈರ್‌ಲೆಸ್ ಸಾಧನ ಸ್ಫೋಟಗೊಂಡು ರಾಕೇಶ್ ಪ್ರಜ್ಞಾಹೀನನಾದ. ಸ್ಫೋಟದಲ್ಲಿ

ಬ್ಲೂಟೂತ್ ಹೆಡ್ ಫೋನ್ ಸ್ಪೋಟಗೊಂಡು ಯುವಕ ಸಾವು| ದೇಶದಲ್ಲೇ ಮೊದಲ ದುರಂತ Read More »

ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ| ಯಾರಿಗೆ ಯಾವ ಖಾತೆ? ಇಲ್ಲಿದೆ ‘ಸಮಗ್ರ’ ವರದಿ|

ಬೆಂಗಳೂರು: 2 ದಿನಗಳ ಹಿಂದೆ ಮಂದಿ ಸಚಿವರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟವನ್ನು ಸೇರ್ಪಡೆಗೊಂಡಿದ್ದ ನೂತನ ಸಚಿವರಿಗೆ ಸಿಎಂ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಖಾತೆ ಹಂಚಿಕೆಯಲ್ಲಿ ಹೆಚ್ಚೇನೂ ಕೈಚಳಕ ತೋರದ ಬೊಮ್ಮಾಯಿ ಹಿಂದಿನ ಬಿ.ಎಸ್​.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಬಹುತೇಕ ಮಂದಿಯನ್ನು ಅದೇ ಖಾತೆಯಲ್ಲಿ ಮುಂದುವರೆಸಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿದ್ದ 23 ಮಂದಿ ಬೊಮ್ಮಾಯಿ ಅವರ ಕ್ಯಾಬಿನೆಟ್​ನಲ್ಲಿ ಮತ್ತೆ ಮಂತ್ರಿಯಾಗಿದ್ದಾರೆ. 6 ಮಂದಿ ಹೊಸದಾಗಿ ಬೊಮ್ಮಾಯಿ ಅವರ ಸಂಪುಟ ಸೇರಿದ್ದಾರೆ. ಯಾವೆಲ್ಲಾ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಯಾರಿಗೆ

ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ| ಯಾರಿಗೆ ಯಾವ ಖಾತೆ? ಇಲ್ಲಿದೆ ‘ಸಮಗ್ರ’ ವರದಿ| Read More »

ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ, ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿ: ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ| ಏನೇನಿರುತ್ತೆ? ಏನಿರಲ್ಲ?

ಬೆಂಗಳೂರು: ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕರ್ನಾಟಕ ಸರ್ಕಾರ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಇಂದು (ಆಗಸ್ಟ್ 6) ಮಧ್ಯಾಹ್ನ ಆದೇಶ ಹೊರಡಿಸಿದ್ದಾರೆ. ಇದೀಗ ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಗೈಡ್‌ಲೈನ್ಸ್‌ ಪ್ರಕಟವಾಗಿದೆ. ಆಗಸ್ಟ್ 16ರವರೆಗೂ ಹೊಸ ಮಾರ್ಗಸೂಚಿ ಅನ್ವಯ ಆಗಲಿದೆ. ರಾತ್ರಿ 9 ಗಂಟೆಯಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ. ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ರಾಜ್ಯಾದ್ಯಂತ ಇಂದಿನಿಂದಲೇ

ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ, ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿ: ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ| ಏನೇನಿರುತ್ತೆ? ಏನಿರಲ್ಲ? Read More »

ನಾಳೆಯಿಂದ ಕೋವಿಡ್ ತೀವ್ರತೆ ಹೆಚ್ಚಿರುವ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿ- ಸಿಎಂ ಬೊಮ್ಮಾಯಿ.

ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಕರ್ನಾಟಕ ಸರಕಾರ ಮುಂದಾಗಿದೆ. ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೋಂಕಿನ ತೀವ್ರತೆ ಮುಂದುವರಿದಿರುವುದರಿಂದ ರಾತ್ರಿ ಕರ್ಫ್ಯೂವನ್ನು ಮರಳಿ ಹೇರಿಕೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಣತರ ಜತೆ ಸಭೆ ನಡೆಸಲಾಗಿದ್ದು, ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ನಿಷೇಧಾಜ್ಞೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ನೈಟ್

ನಾಳೆಯಿಂದ ಕೋವಿಡ್ ತೀವ್ರತೆ ಹೆಚ್ಚಿರುವ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿ- ಸಿಎಂ ಬೊಮ್ಮಾಯಿ. Read More »

ಅಣ್ಣಾ ಮಲೈ ಹಾದಿ ಹಿಡೀತಾರಾ ರವಿ ಡಿ. ಚೆನ್ನಣ್ಣನವರ್? ಬಿಜೆಪಿ ಸೇರಲು ನಿರ್ಧಾರ ಮಾಡಿರುವ ಸೂಪರ್ ಕಾಪ್…!

ನವದೆಹಲಿ: ಅಣ್ಣಾಮಲೈ ಬಳಿಕ ರಾಜ್ಯದ ಮತ್ತೊಬ್ಬ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಶೀಘ್ರದಲ್ಲಿ ಬಿಜೆಪಿ ಸೇರುವ ತಯಾರಿಯಲ್ಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಹೌದು. ಉನ್ನತ ಹುದ್ದೆಯ ಕನಸು ಕಂಡು ಹಗಲಿರುಳು ಓದಿ ದಕ್ಕಿಸಿಕೊಂಡ ಐಎಎಸ್, ಐಪಿಎಸ್ ನಂತಹ ಉನ್ನತ ಸ್ಥಾನಗಳನ್ನು ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹದೊಂದು ಟ್ರೆಂಡ್ ಶುರುವಾಗಿದ್ದು ಯುವ ಅಧಿಕಾರಿಗಳು ರಾಜಕೀಯದತ್ತ ಮುಖ ಮಾಡಿದ್ದು ಈಗ ಚನ್ನಣ್ಣನವರ್ ಬಿಜೆಪಿ

ಅಣ್ಣಾ ಮಲೈ ಹಾದಿ ಹಿಡೀತಾರಾ ರವಿ ಡಿ. ಚೆನ್ನಣ್ಣನವರ್? ಬಿಜೆಪಿ ಸೇರಲು ನಿರ್ಧಾರ ಮಾಡಿರುವ ಸೂಪರ್ ಕಾಪ್…! Read More »

ಐಸಿಸ್ ನೆಟ್ವರ್ಕ್ ಮಾಸ್ಟರ್ ಮೈಂಡ್ ಆಗಿದ್ದ ಹಿಂದು ಯುವತಿ ; ಎನ್ಐಎ ಅಧಿಕಾರಿಗಳ ವಶಕ್ಕೆ ? ಪ್ರಕರಣದ ಇಂಚಿಂಚೂ ಸ್ಟೋರಿ

ಮುಸ್ಲಿಂ ಆಗಿ ಮತಾಂತರಗೊಂಡು ಕಟ್ಟರ್ ಮೂಲಭೂತವಾದಿಯಾಗಿ ಮಾರ್ಪಟ್ಟಿದ್ದ ಕೊಡಗು ಮೂಲದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಎನ್ನುವ ಯುವತಿಯೇ ಐಸಿಸ್ ನೆಟ್ವರ್ಕ್ ಪಾಲಿಗೆ ಮಾಸ್ಟರ್ ಮೈಂಡ್ ವ್ಯಕ್ತಿಗಳಲ್ಲಿ ಒಬ್ಬಳಾಗಿದ್ದಳು ಅನ್ನೋ ಮಾಹಿತಿಯನ್ನು ಪತ್ತೆ ಮಾಡಿದ್ದಾರೆ.‌ ಮಂಗಳೂರು, ಆಗಸ್ಟ್ 5: ದೇಶಾದ್ಯಂತ ಹರಡಿಕೊಂಡಿರುವ ಐಸಿಸ್ ನೆಟ್ವರ್ಕ್ ಬಗ್ಗೆ ಎನ್ಐಎ ಅಧಿಕಾರಿಗಳು ಮಹತ್ತರ ಮಾಹಿತಿಗಳನ್ನು ಹೊರಗೆಡವಿದ್ದಾರೆ. ಅಲ್ಲದೆ, ಮುಸ್ಲಿಂ ಆಗಿ ಮತಾಂತರಗೊಂಡು ಕಟ್ಟರ್ ಮೂಲಭೂತವಾದಿಯಾಗಿ ಮಾರ್ಪಟ್ಟಿದ್ದ ಕೊಡಗು ಮೂಲದ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಎನ್ನುವ ಯುವತಿಯೇ ಐಸಿಸ್ ನೆಟ್ವರ್ಕ್

ಐಸಿಸ್ ನೆಟ್ವರ್ಕ್ ಮಾಸ್ಟರ್ ಮೈಂಡ್ ಆಗಿದ್ದ ಹಿಂದು ಯುವತಿ ; ಎನ್ಐಎ ಅಧಿಕಾರಿಗಳ ವಶಕ್ಕೆ ? ಪ್ರಕರಣದ ಇಂಚಿಂಚೂ ಸ್ಟೋರಿ Read More »

ಮಂಗಳೂರಿಗೆ ಕಾಲಿಟ್ಟ ‘ಇಟಾ’ ವೈರಸ್| ಕತರ್ ನಿಂದ ಬಂತು ಮಹಾಮಾರಿ|

ಮಂಗಳೂರು:. ಕೊರೋನಾ ಏರಿಕೆಯ ನಡುವೆ ಡೆಲ್ಟಾ ಸೋಂಕಿನ ಜೊತೆಗೆ ಇದೀಗ ಮತ್ತೊಂದು ಶಾಕ್ ಗೆ ಕರಾವಳಿಯ ಜನತೆ ಬೆಚ್ಚಿಬಿದ್ದಿದ್ದಾರೆ. ಎರಡು ತಿಂಗಳ ಹಿಂದೆ ಕತರ್ ನಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯೋರ್ವರಲ್ಲಿ ಗುರುವಾರದಂದು ಕೊರೋನಾ ಸೋಂಕಿನ ಹೊಸ ತಳಿ ‘ಇಟಾ’ (ಬಿ.1.525) ವೈರಾಣು ಪತ್ತೆಯಾಗಿದೆ. ಇದರ ಜೊತೆಗೆ ಹೊಸದಾಗಿ ಒಂದು ಡೆಲ್ಟಾ ಪ್ಲಸ್‌ ಪ್ರಕರಣ ಕೂಡ ಕಂಡುಬಂದಿದ್ದು, ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಾಣು ಹೊಂದಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹೊಸದಾಗಿ ಕಂಡುಬಂದಿರುವ ಇಟಾ ವೈರಾಣುವಿನ ಬಗ್ಗೆ ತಿಳಿಯಲು ಇನ್ನಷ್ಟೇ

ಮಂಗಳೂರಿಗೆ ಕಾಲಿಟ್ಟ ‘ಇಟಾ’ ವೈರಸ್| ಕತರ್ ನಿಂದ ಬಂತು ಮಹಾಮಾರಿ| Read More »