August 2021

ದುರಂತ ಅಮಾವಾಸ್ಯೆ: ಮಸಣ ಸೇರಿದ ನವದಂಪತಿ

ಆಂದ್ರಪ್ರದೇಶ: ಲಾರಿ ಮತ್ತು ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮದುವೆಯಾದ 23ನೇ ದಿನಕ್ಕೆ ನವ ದಂಪತಿ ದುರಂತ ಸಾವು ಕಂಡ ಘಟನೆ ಆಂಧ್ರ ಪ್ರದೇಶದ ನೆಲ್ಲೂರು ಬಳಿ ಇಂದು ನಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ದಾಂ ಜಾತಗಾರ್(27),ಪತ್ನಿ ಸಲೀಮಾ(25),ಅತ್ತಿಗೆ ರೇಷ್ಮಾ(26) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಬಾಗಲಕೋಟೆ ಮುಧೋಳ ತಾಲೂಕಿನ ಮುಗಳಖೋಡ್ ಗ್ರಾಮದವರು ಎಂದು ತಿಳಿದು ಬಂದಿದೆ. ಮದುವೆಯಾದ ಹೊಸದರಲ್ಲಿ ಸಂಬಂಧಿಕರ ಊರಿಗೆ ಹೋದ ನವ ದಂಪತಿ ಸೇರಿ […]

ದುರಂತ ಅಮಾವಾಸ್ಯೆ: ಮಸಣ ಸೇರಿದ ನವದಂಪತಿ Read More »

ರೈತರಿಗೆ ಗುಡ್ ನ್ಯೂಸ್|ನಾಳೆ ಪಿಎಂ ಕಿಸಾನ್ ಸಮ್ಮಾನ್ ನ ಮತ್ತೊಂದು ಕಂತು ಬಿಡುಗಡೆ|

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮತ್ತೊಂದು ಕಂತು ದೇಶದ ರೈತರ ಖಾತೆಗೆ ನಾಳೆ ವರ್ಗಾವಣೆಯಾಗಲಿದೆ. ಪಿಎಂ-ಕಿಸಾನ್ ನ ಕಂತನ್ನು ಕೇಂದ್ರ ಸರ್ಕಾರವು ಆಗಸ್ಟ್ 9 ರಂದು ವಿತರಿಸಲಿದ್ದು, ಸರಿ ಸುಮಾರು 90 ಮಿಲಿಯನ್ ರೈತರಿಗೆ ಒಟ್ಟು 19,000 ಕೋಟಿ ರೂ ಪಿಎಂ-ಕಿಸಾನ್ ಅಡಿಯಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಕೇಂದ್ರ ಸರ್ಕಾರವು ಪ್ರತಿ ಭೂಮಿ ಹೊಂದಿರುವ ರೈತರಿಗೆ ಮಾಸಿಕ ದಾಖಲಾತಿಯೊಂದಿಗೆ ವಾರ್ಷಿಕ ರೂ. 6,000 ಆದಾಯದ ಬೆಂಬಲವನ್ನು ನೀಡುತ್ತಿದೆ. ಪಿಎಂ ಕಿಸಾನ್ ಹಣವನ್ನು ವರ್ಷದಲ್ಲಿ ಮೂರು

ರೈತರಿಗೆ ಗುಡ್ ನ್ಯೂಸ್|ನಾಳೆ ಪಿಎಂ ಕಿಸಾನ್ ಸಮ್ಮಾನ್ ನ ಮತ್ತೊಂದು ಕಂತು ಬಿಡುಗಡೆ| Read More »

ದ್ವಾದಶ ರಾಶಿಗಳ ವಾರಭವಿಷ್ಯ

ರಾಶಿಗಳು ಮನುಷ್ಯನ ದೈನಂದಿನ ಚಲನಾಸ್ಥಿತಿಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ನಮ್ಮ ನಿತ್ಯಕರ್ಮಗಳು ರಾಶಿಗಳ‌ ಚಲನೆಯಂತೆ ನಡೆಯುತ್ತದೆ ಎಂದು ಪೂರ್ವಿಕರ ಅಭಿಪ್ರಾಯ. ಪ್ರತೀ ಆಗುಹೋಗುಗಳು ರಾಶಿಗಳ ಮೇಲಿನ ಪ್ರಭಾವಗಳೇ ಕಾರಣ. ಈ ವಾರದ ರಾಶಿಭವಿಷ್ಯ ನಿಮಗೆ ನೀಡಲಾಗಿದ್ದು, ಅವುಗಳ ಸಮಸ್ಯೆ, ಪರಿಹಾರಗಳನ್ನೂ ನೀಡಲಾಗಿದೆ. ದ್ವಾದಶ ರಾಶಿಗಳ ವಾರ ಭವಿಷ್ಯ ನೋಡಿ ಸುಂದರ ಬದುಕು ನಿಮ್ಮದಾಗಿಸಿಕೊಳ್ಳಿ. ಶುಭವಾಗಲಿ… ವಾರಭವಿಷ್ಯ ಆ.8ರಿಂದ 14ರವರೆಗೆ ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1) ವ್ಯವಹಾರದಲ್ಲಿ ಸ್ವಲ್ಪ ಯಶಸ್ಸನ್ನು ಕಾಣುವಿರಿ. ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ಮಾರಾಟ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಆಟಿ ಅಮಾವಾಸ್ಯೆ| ಆಚಾರ ವಿಚಾರ

ತುಳುನಾಡು ಹಲವಾರು ಸಂಸ್ಕ್ರತಿ‌ ಸಂಪ್ರದಾಯಗಳ‌ ತವರೂರು. ಪರಶುರಾಮ ಸೃಷ್ಟಿಯ ಈ‌ ನಾಡಲ್ಲಿ ಅಣು ಅಣುವಿನಲ್ಲೂ ದೇವರನ್ನು ಕಾಣುವ, ಪ್ರಕೃತಿಯನ್ನು ಆರಾಧಿಸುವ ಪದ್ದತಿ ಇಂದಿಗೂ ಜನಜನಿತ. ಅಂತಹ ಆಚರಣೆಗಳಲ್ಲಿ ‘ಆಟಿ ಅಮಾವಾಸ್ಯೆ’ ಬಹುಮುಖ್ಯವಾದದ್ದು. ಸೌರಪಂಚಾಂಗದ ಪ್ರಕಾರ ಆಷಾಡ (ಆಟಿ)ಮಾಸದಲ್ಲಿ ಆಟಿ ಅಮವಾಸ್ಯೆ ತುಳುವರ ಪ್ರಮುಖ ಆಚರಣೆಗಳ ಒಂದು. ತುಳುವರು ಪ್ರಕೃತಿ ಆರಾಧಕರು. ರೋಗರುಜಿನಗಳು ಹೆಚ್ಚಾಗುವ ಈ ಮಳೆಗಾಲದಲ್ಲಿ ಔಷಧಕ್ಕಾಗಿ ಪ್ರಕೃತಿಯನ್ನೇ ನೆಚ್ಚಕೊಂಡವರು ತುಳುವರು. ಅಂತೆಯೇ ಈ ಅಮಾವಾಸ್ಯೆ ದಿನ ಔಷಧೀಯ ಗುಣಗಳಿರುವ ಹಾಲೆ ಮರದ ಕೆತ್ತೆಯ ಕಷಾಯವನ್ನು ಸೇವಿಸುವುದು

ಆಟಿ ಅಮಾವಾಸ್ಯೆ| ಆಚಾರ ವಿಚಾರ Read More »

ಆ.9 ಕ್ಕೆ ಎಸ್ ಎಸ್ಎಲ್ ಸಿ ಫಲಿತಾಂಶ- ಸಚಿವ ಬಿ.ಸಿ ನಾಗೇಶ್

ಬೆಂಗಳೂರು : ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆ.,9 ರಂದು ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಘೋಷಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ಅವರು, ಜುಲೈ.19 ಮತ್ತು 22ರಂದು ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆ.9 ಸೋಮವಾರದಂದು ಮಧ್ಯಾಹ್ನ 3.30ಕ್ಕೆ ಅಧಿಕೃತವಾಗಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಶಾಲೆ ಆರಂಭ ಯಾವಾಗ? ರಾಜ್ಯದಲ್ಲಿ ಶಾಲೆ ಆರಂಭಿಸುವ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯೆ

ಆ.9 ಕ್ಕೆ ಎಸ್ ಎಸ್ಎಲ್ ಸಿ ಫಲಿತಾಂಶ- ಸಚಿವ ಬಿ.ಸಿ ನಾಗೇಶ್ Read More »

ಟೋಕಿಯೋ ಒಲಿಂಪಿಕ್ಸ್: ಕುಸ್ತಿಯಲ್ಲಿ‌ ಮತ್ತೊಂದು ಕಂಚು ಗೆದ್ದ ಭಾರತ:

ಟೋಕಿಯೊ : ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ಬಜರಂ‌ಗ್‌ ಪೂನಿಯಾ ಅವರು ಕಂಚಿನ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಪಂದ್ಯಾಟದಲ್ಲಿ ಬಜರಂಗ್‌ ಪೂನಿಯಾ ಅವರು ಕಜಕಿಸ್ತಾನದ ದೌಲತ್‌ ನಿಯಾಜ್‌ಬೆಕೋವ್‌ ವಿರುದ್ದ ಗೆಲುವು ದಾಖಲಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಭರವಸೆಯಾಗಿದ್ದ ಬಜರಂಗ್‌ ಪೂನಿಯಾ ಅವರು ಗಾಯದ ಸಮಸ್ಯೆಯ ಕಾರಣದಿಂದ ಹಿನ್ನಡೆ ಅನುಭವಿಸಿದ್ದರು. ಆದರೂ, ದೇಶಕ್ಕಾಗಿ ಕಂಚಿನ ಪದಕ ಗೆಲ್ಲುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರೆ. ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಆರನೇ ಕುಸ್ತಿಪಟು ಎಂಬ ಕೀರ್ತಿಗೆ

ಟೋಕಿಯೋ ಒಲಿಂಪಿಕ್ಸ್: ಕುಸ್ತಿಯಲ್ಲಿ‌ ಮತ್ತೊಂದು ಕಂಚು ಗೆದ್ದ ಭಾರತ: Read More »

ಟೋಕಿಯೋ ಒಲಿಂಪಿಕ್: ಭಾರತಕ್ಕೆ ಚಿನ್ನ ತಂದ ನೀರಜ್

ಟೋಕಿಯೋ: ಭಾರತದ ಪುರುಷ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಶನಿವಾರ 87.58 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು ಮತ್ತು ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಡೆದ ಮೊದಲ ಆಟಗಾರ ಎನಿಸಿಕೊಂಡರು. ನೀರಜ್‌ಗಿಂತ ಮೊದಲು ಯಾರೂ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಪದಕ ನೀಡಿರಲಿಲ್ಲ. ಅದೇ ಸಮಯದಲ್ಲಿ, ಅವರು ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಆಟಗಾರ. ನೀರಜ್​ಗೂ ಮೊದಲು, ಪುರುಷ

ಟೋಕಿಯೋ ಒಲಿಂಪಿಕ್: ಭಾರತಕ್ಕೆ ಚಿನ್ನ ತಂದ ನೀರಜ್ Read More »

ಅತ್ತೆ- ಅಳಿಯನ ನಡುವೆ ಲವ್ವಿಡವ್ವಿ! ಇವರಿಬ್ಬರ ಪ್ರೀತಿಗೆ ಮಗಳು ಕಂಗಾಲು

ಪ್ರೀತಿ ಕುರುಡು ಅಂತಾರೆ ಕೆಲವರು. ಆದರೆ ಅದು ಇಷ್ಟೊಂದು ಕುರುಡು ಅಂತ ಈಗೀಗ ಗೊತ್ತಾಗ್ತಿದೆ. ಪ್ರೀತಿ ವಿಷಯದಲ್ಲಿ ಜನರು ಹುಚ್ಚರಾಗ್ತಾರೆ. ಪ್ರೀತಿ ಮಾಡುವವರಿಗೆ ಜಾತಿ, ಮತ, ವಯಸ್ಸಿನ ಪರಿವೆ ಇರುವುದಿಲ್ಲ. ಅಂತದ್ದೊಂದು ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಅತ್ತೆ – ಅಳಿಯನ ಸಂಬಂಧ ತಾಯಿ – ಮಗನ ಸಂಬಂಧ ಎನ್ನುತ್ತಾರೆ. ಆದ್ರೆ ಇಲ್ಲಿ ಅತ್ತೆ – ಅಳಿಯ ಪ್ರೀತಿಗೆ ಬಿದ್ದು ಮಗಳು ಅನಾಥಳಾಗುವಂತೆ ಮಾಡಿದ್ದಾರೆ. ಕೈಹಿಡಿದ ಪತ್ನಿಗೆ ಕೈಕೊಟ್ಟ ಅಳಿಯ ಅತ್ತೆಯೊಂದಿಗೆ ಮರ ಸುತ್ತುತ್ತಿದ್ದಾನೆ. ಈ ಘಟನೆ

ಅತ್ತೆ- ಅಳಿಯನ ನಡುವೆ ಲವ್ವಿಡವ್ವಿ! ಇವರಿಬ್ಬರ ಪ್ರೀತಿಗೆ ಮಗಳು ಕಂಗಾಲು Read More »

ನೀಲಿಚಿತ್ರ ತಯಾರಿ ಪ್ರಕರಣ| ರಾಜ್ ಕುಂದ್ರಾಗೆ ನಿರಾಶೆ

ಪೋರ್ನೋಗ್ರಫಿ ಪ್ರಕರಣದಲ್ಲಿ ಬಂಧಿತನಾಗಿರುವ ಉದ್ಯಮಿ ರಾಜ್ ಕುಂದ್ರಾಗೆ ಇಂದು ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ರಾಜ್ ಕುಂದ್ರಾ ಹಾಗೂ ರಯಾನ್ ತಕ್ಷಣ ಬಿಡುಗಡೆ ‌ಮಾಡಿ ಎಂದು ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಕುಂದ್ರಾ,‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ, ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಕಾನೂನು ಬಾಹಿರವಾಗಿ ನನ್ನನ್ನು ಬಂಧಿಸಲಾಗಿದೆ ಎಂದು ರಾಜ್ ಕುಂದ್ರಾ ಆರೋಪಿಸಿದ್ದರು. ಪ್ರಕರಣದ ವಿಚಾರಣೆ ವೇಳೆ, ಪಬ್ಲಿಕ್ ಪ್ರಾಸಿಕ್ಯೂಟರ್, ಪ್ರಕರಣದ ಸಾಕ್ಷ್ಯವನ್ನು ನಾಶಪಡಿಸುತ್ತಿದ್ದಾರೆ. ಮುಂದೆ ಮತ್ತಷ್ಟು ಸಾಕ್ಷಿ ನಾಶಪಡಿಸುವ ಸಾಧ್ಯತೆಯಿದೆ. ಹಾಗಾಗಿ ಜಾಮೀನು ನೀಡಬೇಡಿ

ನೀಲಿಚಿತ್ರ ತಯಾರಿ ಪ್ರಕರಣ| ರಾಜ್ ಕುಂದ್ರಾಗೆ ನಿರಾಶೆ Read More »

ಭಾರೀ‌ಮಳೆಗೆ ತತ್ತರಿಸಿದ ಕುಕ್ಕೆ ಸುಬ್ರಹ್ಮಣ್ಯ| ಸ್ನಾನಘಟ್ಟ ಮುಳುಗಡೆ, ತಗ್ಗು‌ಪ್ರದೇಶಕ್ಕೆ ನುಗ್ಗಿದ ನೆರೆ

ಕುಮಾರಧಾರದ ಉಪನದಿಯಾದ ದರ್ಪಣತೀರ್ಥವು ತುಂಬಿ ಹರಿದು ದರ್ಪಣತೀರ್ಥ ಸೇತುವೆಯು ಮುಳು ಗಡೆಗೊಂಡಿತ್ತು. ಇದರಿಂದಾಗಿ ಸುಬ್ರ ಹ್ಮಣ್ಯ- ಪುತ್ತೂರು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕುಕ್ಕೆಯ ಪರಿಸರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನದಿ ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಸ್ನಾನಘಟ್ಟ ಜಲಾವೃತ್ತ: ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯ ಪರಿಣಾಮ ಕುಮಾರಧಾರ ನದಿಯು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಕುಮಾರಧಾರ ಸ್ನಾನಘಟ್ಟವು ಮುಂಜಾನೆ ಮುಳುಗಡೆಯಾಗಿತ್ತು. ಸ್ನಾನಘಟ್ಟದಲ್ಲಿ ನಿರ್ಮಿತವಾಗಿದ್ದ ಶೌಚಾಲಯ ನೀರಿನಿಂದ ಆವೃತ ಗೊಂಡಿತ್ತು. ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಭಾರೀ

ಭಾರೀ‌ಮಳೆಗೆ ತತ್ತರಿಸಿದ ಕುಕ್ಕೆ ಸುಬ್ರಹ್ಮಣ್ಯ| ಸ್ನಾನಘಟ್ಟ ಮುಳುಗಡೆ, ತಗ್ಗು‌ಪ್ರದೇಶಕ್ಕೆ ನುಗ್ಗಿದ ನೆರೆ Read More »